ಕಾಪು:ಸೆಪ್ಟೆಂಬರ್ 04: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠದಲ್ಲಿ ನಾಳೆ ಸೆಪ್ಟೆಂಬರ್ 05ರ ಶುಕ್ರವಾರ ಕಾರ್ಯಕ್ರಮ ಸೂರ್ಯೋದಯದಿಂದ ಆರಂಭಗೊಳ್ಳಲಿದ್ದು 06ರ ಶನಿವಾರ ಸೂರ್ಯೋದಯದ ತನಕ ದ್ವಾದಶ ರಾಶಿ ಪೂಜೆ ನಡೆಯಲಿದೆ.ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ

ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 21 ನೇ ವರುಷದ ವಿಶ್ವಾವಸು ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಪರ್ವಕಾಲದಲ್ಲಿ ಸಂಪನ್ನಗೊಳ್ಳುವ ಕಾರ್ಯಕ್ರಮವು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವಚಾತ್ರ ಸಂಘದ ನೇತೃತ್ವಲ್ಲಿ ನಡೆಯಲಿದೆ.

ಆನೆಗುಂದಿಶ್ರೀಗಳವರ ಆಶಯದಂತೆ ಕುಟುಂಬದ ಎಲ್ಲಾ ಸದಸ್ಯರೂ ಭಾಗವಹಿಲು ಅನುಕೂಲವಾಗುವಂತೆ ದ್ವಾದಶ ರಾಶಿ ಪೂಜೆಯಲ್ಲಿ ಎಲ್ಲರಿಗೂ ಉಚಿತವಾಗಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ಸೆ.4ರಂದು ಮುಂಜಾನೆ ಶ್ರೀ ಗುರುಪಾದುಕಾಪೂಜೆ, ದ್ವಾದಶನಾರಿಕೇಳ ಶ್ರೀ ಮಹಾಗಣಪತಿ ಹೋಮ, ವೇದ ಪಾರಾಯಣ, ಮಂಟಪ ಸಂಸ್ಕಾರ ವಾಸ್ತು ಮಂಡಲಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸೆ. 5ರಂದು ಬ್ರಾಹ್ಮ ಮುಹೂರ್ತದಲ್ಲಿ ಪೀಠಮಾತೆ ಶ್ರೀ ಮಹಾಸರಸ್ವತಿ ದೇವಿ ಮೂರ್ತಿಯು ಸಕಲ ವೈಭವಗಳೊಂದಿಗೆ ಇಲ್ಲಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಶ್ರೀಸರಸ್ವತೀ ಮಂಟಪಕ್ಕೆ ಆಗಮನದೊಂದಿಗೆ ರಾಶಿ ಪೂಜೆ ಆರಂಭಗೊಳ್ಳಲಿದೆ. ಸೆ. 5ರಂದು ಬೆಳಗ್ಗೆ ಘಂಟೆ 5.06ರ ಸಿಂಹ ಲಗ್ನದಲ್ಲಿ ಪ್ರಾರಂಭಗೊಳ್ಳುವ ದ್ವಾದಶ ರಾಶಿ ಪೂಜೆಯು ಸೆ.6 ಬೆಳಗ್ಗೆ 5.02ಕ್ಕೆ ಕರ್ಕಾಟಕ ರಾಶಿಯಲ್ಲಿ ಪೀಠಮಾತೆ ಶ್ರೀ ಮಹಾಸರಸ್ವತಿ ದೇವಿಗೆ ವಿಶೇಷ ರಾಜೋಪಚಾರ ಮಹಾಪೂಜೆ ಬಳಿಕ ಬಲಿ ಉತ್ಸವ, ಅವಧೃತದೊಂದಿಗೆ ಸಮಾಪ್ತಿಗೊಳ್ಳಲಿದೆ.
ಪ್ರತಿರಾಶಿಗೆ ಸುಮಾರು 2 ಘಂಟೆಯ ಅವಧಿಯಿದ್ದು, ನಿಗದಿತ ರಾಶಿ ಸಮಯದ ವೇಳೆ 12 ರಾಶಿಗನುಗುಣವಾದ ಬಣ್ಣದ ರಾಶಿ ಮಂಟಪಗಳಲ್ಲಿ ಶ್ರೀ ಮಹಾಸರಸ್ವತೀ ದೇವಿಗೆ ನೈವೇಧ್ಯ, ಭಜನಾ ಸಂಕೀರ್ತನೆ, ಅಷ್ಟಾವಧಾನಸೇವೆ ಸಮರ್ಪಣೆಯಾಗಲಿದೆ. ಭಕ್ತಾದಿಗಳ ರಾಶಿಗನುಗುಣವಾಗಿ ನಿಗದಿತ ಅವಧಿಯಲ್ಲಿ ಭಾಗವಹಿಸಲು ವಿಶೇಷ ಗುರುತುಚೀಟಿ ನೀಡಿ ಸೇವೆಗೆ ಅವಕಾಶಮಾಡಲಾಗುತ್ತದೆ. ದ್ವಾದಶ ರಾಶಿ ಪೂಜೆಯ ಸೇವೆಸಲ್ಲಿಸಿದ ಭಕ್ತಾದಿಗಳಿಗೆ ಆಯಾ ರಾಶಿಪೂಜೆಯ ಪ್ರಸಾದ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿವಿಧ ಅವಧಿಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ಉಪಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ದ್ವಾದಶ ರಾಶಿ ಪೂಜೆಯಲ್ಲಿ ಭಕ್ತಾದಿಗಳಿಗೆ ವಿಶೇಷ ಸೇವೆಗಳು ಹಾಗೂ ದೇಣಿಗೆ ಮತ್ತು ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲು ಅವಕಾಶವಿದೆ. ಪರಮಪೂಜ್ಯ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಳ್ಳುವ ದ್ವಾದಶ ರಾಶಿ ಪೂಜೆಯ ವೇಳೆ ಆಸ್ಥಾನ ವಿದ್ವಾಂಸರಾದ ವೇ. ಬ್ರ. ಮಹಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವೈದಿಕ ವಿದ್ವಾಂಸರಾದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ,ಬ್ರಹ್ಮ ಶ್ರೀ ಲಕ್ಷ್ಮೀಕಾಂತ ಶರ್ಮಾ ಬಾರ್ಕೂರು ಸಮಾಜದ ವೈದಿಕ ಬಂಧುಗಳು, ಶ್ರೀ ಮಠದ ಶ್ರೀ ಸರಸ್ವತೀ ಪೂರ್ವಚಾತ್ರ ಸಂಘ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆ ವಿದ್ಯಾರ್ಥಿಗಳು ಭಾಗವಹಿಸುವರು. ಚಾತುರ್ಮಾಸ್ಯದ ಶ್ರೀ ಗುರುಪಾದುಕಾಪೂಜೆ ಬೆಳಗ್ಗೆ 10.00 ರಿಂದ 11.00 ಘಂಟೆಗೆ ಕ್ಲಪ್ತ ಸಮಯದಲ್ಲಿ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆಯಲಿದೆ.
ನಂತರ ಮದ್ಯಾಹ್ನ 12 ಘಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೀಠಾಧೀಶ್ವರರಾದ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಸಭೆಯ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಶಾಸಕರೂ ದ್ವಾದಶ ರಾಶಿ ಪೂಜೆಯ ಪ್ರಧಾನ ಸಂಯೋಜಕರಾದ ಸುರೇಶ್ ಶೆಟ್ಟಿ ಗುರ್ಮೆ, ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಭಾಗವಹಿಸುವರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಕುತ್ಯಾರು ಸಮಾಜ ಸೇವಕರಾ ಎಂ.ಮಿಥುನ್ ರೈ ಮಂಗಳೂರು, ನವೀನ್ ಶೆಟ್ಟಿ ಕುತ್ಯಾರು, ಪ್ರಸಾದ್ ಶೆಟ್ಟಿ ಕುತ್ಯಾರು, ಶಿಲ್ಪಾ ಜಿ ಸುವರ್ಣ ಕಟಪಾಡಿ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಎಸ್ ಕೆ ಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೂಡುಬಿದಿರೆ ಸಂಸ್ಥಾಪಕರು ಮತ್ತು ಆಡಳಿತ ನಿರ್ದೇಶಕ ಡಾ. ಜಿ ರಾಮಕೃಷ್ಣ ಆಚಾರ್ ಮೂಡಬಿದಿರೆ, ಬೆಂಗಳೂರು ಆನೆಗುಂದಿ ಶಾಖಾ ಮಠ ಸಮಿತಿ ಅಧ್ಯಕ್ಷ, “ಬ್ರಾಹ್ಮರಿ” ಕ್ರಿಯೇಶನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು ಭಾಗವಹಿಸುವರು. ಚಲನಚಿತ್ರ ನಟರಾದ ಶಶಿರಾಜ್ ಆಚಾರ್ಯ ಕುತ್ಯಾರು, ರಾಧಾಕೃಷ್ಣ ಆಚಾರ್ಯ ಕುಂಬಳೆ ಇವರನ್ನು ಅಭಿನಂದಿಸಲಾಗುವುದು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಮೂಲಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ ಹಾಗೂ ಕಾಸರಗೋಡು, ಅವಿಭಜಿತ ದಕ್ಷಿಣಕನ್ನಡಜಿಲ್ಲೆ, ಮುಂಬಯಿ, ಬೆಂಗಳೂರು, ಹುಬ್ಬಳ್ಳಿ, ದಾರವಾಡ ಕಾಳಿಕಾಂಬಾ ದೇವಳಗಳ ಧರ್ಮದರ್ಶಿಗಳು, ಮಹಾಸಂಸ್ಥಾನದ ಸಹ ಟ್ರಸ್ಟ್, ಸಮಿತಿಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು.








