ಉಡುಪಿ: ಸೆಪ್ಟೆಂಬರ್ 01:ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಲ್ಲಿ ದಿನಾಂಕ 6.9.25 ಶನಿವಾರ ಅನಂತ ಚತುರ್ದಶಿ ವ್ರತಾಚರಣೆ (ನೊಂಪು) ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಂದ ವಿಶೇಷ ಅನಂತ ಕದಳಿ ಸಮರ್ಪಣೆ ಸೇವೆ ನಡೆಯಲಿದೆ.
ಧಾರ್ಮಿಕ ವಿಧಿ ವಿಧಾನಗಳಾದ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಪೂಜೆ ಹಾಗೂ ಮಹಾಪೂಜೆ ನಡೆಯಲಿದೆ. ಅನಂತ ವಿಪ್ರ ಬಳಗದ ಸದಸ್ಯರಿಂದ ಗೀತಾ ಪಾರಾಯಣ, ಲಕ್ಷ್ಮೀ ಶೋಭಾನೆ,ವಿಷ್ಣು ಸಹಸ್ರನಾಮ ನಾಮಾವಾಳಿ ಪಠಣ ನಡೆಯಲಿದೆ.
ಇದೇ ಸಂದರ್ಭದಲ್ಲಿ ವ್ರತಾದಾರಿಗಳಿಗೆ ಅನಂತ ಸೂತ್ರಧಾರಾಣೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಗಾಯನ, ವಿಶೇಷ ಕೊಳಲುವಾದನ, ರಾತ್ರಿ ಪೂಜೆ, ಹೂವಿನ ಪೂಜೆ, ರಂಗಪೂಜೆ, ಅಷ್ಟಾವಾಧನ ಸೇವೆ ನಡೆಯಲಿದೆ.
ಸಕಲ ಸಧ್ಭಕ್ತರು ಸಕುಟುಂಬ ಸಮೇತರಾಗಿ ಭಾಗವಹಿಸಿ ತನು ಮನ ಧನ ಗಳಿಂದ ಸಹಕರಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಶ್ರೀ ಪುತ್ತಿಗೆ ಮಠ,ಜೀರ್ಣೋದ್ಧಾರ ಸಮಿತಿ, ಅನಂತ ವಿಪ್ರ ಬಳಗ, ಹಾಗೂ ಊರಿನ ಹತ್ತು ಸಮಸ್ತರು.ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ








