Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನಾಳೆ (ಆ. 30)ವಿಶ್ವಗುರು ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ..!!

Dhrishya News by Dhrishya News
29/08/2025
in ಸುದ್ದಿಗಳು
0
ಆಗಸ್ಟ್ 30 ರಂದು ಜಗದ್ಗುರು ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ..!!
0
SHARES
8
VIEWS
Share on FacebookShare on Twitter

ಉಡುಪಿ: ಆಚಾರ್ಯತ್ರಯರಲ್ಲಿ ಓರ್ವರಾದ ದ್ವೈತ ಮತ ಪ್ರತಿಪಾದಕ ಆಚಾರ್ಯ ಮಧ್ವರ ಅಂಚೆಚೀಟಿ ಮಣಿಪಾಲ ಮಾಹೆ ಸಹಯೋಗದೊಂದಿಗೆ ಹೊರತರಲಾಗುತ್ತಿದ್ದು, ಆ.30ರಂದು ಅಪರಾಹ್ನ 4 ಗಂಟೆಗೆ ಅನಾವರಣಗೊಳ್ಳಲಿದೆ.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಉಪಸ್ಥಿತರಿರುವರು.

ಉಡುಪಿ ಕೃಷ್ಣಮಠದ ಭಕ್ತರು ಸೇರಿದಂತೆ ಸಮಸ್ತ ಮಾಧ್ವ ಮತಾನುಯಾಯಿಗಳ ಬಹುದಿನದ ಆಶಯ ಈ ಮೂಲಕ ಈಡೇರಿದೆ. ಮಹಾನ್ ದಾರ್ಶನಿಕ ಆಚಾರ್ಯ ಮಧ್ವರ ಜ್ಞಾನಮುದ್ರೆಯ ಭಂಗಿಯ ಅಂಚೆಚೀಟಿ ಹೊರತರುವ ಮೂಲಕ ಅವರ ತತ್ವಗಳಿಗೆ ಸರಕಾರದ ಮನ್ನಣೆ ಲಭಿಸಿದಂತಾಗಿದೆ. ಅದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರ ಸಹಕಾರ ಗಮನೀಯ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.

64ನೇ ಜನ್ಮನಕ್ಷತ್ರೋತ್ಸವ

ಇದೇ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರ ಮಹೋತ್ಸವ ನಡೆಯಲಿದ್ದು, ಆ.30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. 

ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ವಿವಿಧ ಹೋಮಗಳು ನಡೆಯಲಿದೆ.

ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾಗರದಾಚೆಯೂ ನಡೆಸಿದ ಶ್ರೀಕೃಷ್ಣ ತತ್ವ ಪ್ರಸಾರ, ಕೃಷ್ಣ ಮಂದಿರ ಸ್ಥಾಪನೆ ಸೇರಿದಂತೆ ಶ್ರೀಗಳ ಸಿದ್ಧಿ ಸಾಧನೆ ಕುರಿತು ಎಲ್ಲೂರು ಸುಬ್ರಹ್ಮಣ್ಯ ರಾವ್ ಮತ್ತು ಓಂಪ್ರಕಾಶ ಭಟ್ ಸಂಪಾದಿತ `*ವಿಶ್ವಮಾನ್ಯ ಯತಿಯ ಯಶೋಗಾಥೆ’* ಪುಸ್ತಕ ಅನಾವರಣಗೊಳ್ಳಲಿದೆ.

*ಗೌರವ ಡಾಕ್ಟರೇಟ್*

ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಡೆಸಿರುವ ಶ್ರೀಕೃಷ್ಣ ತತ್ವ ಪ್ರಸಾರ ಹಾಗೂ ಅನಿವಾಸಿ ಭಾರತೀಯರು ಮಾತ್ರವಲ್ಲದೇ ವಿದೇಶಿಯರಲ್ಲಿ ಹಿಂದೂ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಆಫ್ರಿಕಾದ ಮೈಲ್ಸ್ ಲೀಡರ್ ಶಿಪ್ ಯೂನಿವರ್ಸಿಟಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.

*ವಿಶ್ವರೂಪ ಅಲಂಕಾರ ಕವಚ*

ಶ್ರೀಗಳ 64ನೇ ಜನ್ಮನಕ್ಷತ್ರ ಮಹೋತ್ಸವ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಕಾಣಿಕೆಯಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಶ್ವರೂಪ ದರ್ಶನ ಕವಚ ಸಮರ್ಪಣೆ ನಡೆಯಲಿದೆ. 

ಅದನ್ನು ಆ.29ರ ಸಂಜೆ 5 ಗಂಟೆಗೆ ವೈಭವದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತರಲಾಗುವುದು. 

ಆ.30ರಂದು ಶ್ರೀಕೃಷ್ಣನಿಗೆ ತೊಡಿಸಲಾಗುವುದು.

*ಗುರುವಂದನೆ*

ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಭಕ್ತರಿಂದ ಗುರುವಂದನೆ ನಡೆಯಲಿದ್ದು *ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,* ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಆಫ್ರಿಕನ್ ವಿ.ವಿ. ಉಪಕುಲಪತಿ ಡಾ. ಕೆ. ರವಿ ಆಚಾರ್ಯ, ಬೆಂಗಳೂರು ತಥಾಗತ್ ಹಾರ್ಟ್ ಆಸ್ಪತ್ರೆಯ ಡಾ.ಮಹಾಂತೇಶ ಚರಂತಿಮಠ, ಮಾಹೆ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಶತಾವಧಾನಿ ಡಾ.ರಾಮನಾಥ ಆಚಾರ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿರುವರು. ನವದೆಹಲಿ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ. ಶ್ರಿನಿವಾಸ ವರಖೇಡಿ ಶುಭಾಶಂಸನೆಗೈಯುವರು. 

ಬೆಳಗಾವಿ ವಿದ್ವಾನ್ ಗುರುರಾಜಾಚಾರ್ ಜೋಶಿ ಅವರನ್ನು ಗೌರವಿಸಲಾಗುವುದು. 

ಬಳಿಕ ಸಗ್ರಿ ಹವ್ಯಾಸಿ ಯಕ್ಷ ಕಲಾವಿದರಿಂದ `ಅರ್ತ ತ್ರಾಣ ಪರಾಯಣಮ್’ ತೆಂಕುತಿಟ್ಟು ಯಕ್ಷಗಾನ ನಡೆಯಲಿದೆ.

*ಈಶ- ಜೀವ ಭಾವ ಬೋಧಿಸಿದ ಮಧ್ವರು*

ಆಚಾರ್ಯ ಮಧ್ವಪ್ರಣೀತ ದ್ವೈತ ತತ್ವ ಮಾನವ ಜನ ಜೀವನಕ್ಕೆ ಹೊಂದಿಕೊಳ್ಳುವಂಥದು. ದೇವರಲ್ಲಿ ಭಕ್ತಿ ಮತ್ತು ಜನತೆಯ ಸೇವೆ ನಮ್ಮ ಜೀವನದ ಗುರಿಯಾಗಬೇಕು. ಗಳಿಸಿದ ಸಂಪತ್ತಿನ ಒಂದಂಶವನ್ನು ಜನಸೇವೆಗೆ ಮೀಸಲಿಡಬೇಕು. 

ಜೀವ ಜೀವರಲ್ಲಿ ಭೇದವಿದೆ. ಪ್ರತ್ಯೇಕ ಐಡೆಂಟಿಟಿ ಇದೆ ಎಂದು ಪ್ರತಿಪಾದಿಸಿದವರು ಆಚಾರ್ಯ ಮಧ್ವರು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

ಆಚಾರ್ಯ ಮಧ್ವರು ತಿಳಿಸಿದ ತರತಮ ಭೇದವನ್ನು ತಪ್ಪಾಗಿ ಗ್ರಹಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಅಂಚೆಚೀಟಿ ಹೊರತರುವ ಮೂಲಕ ಲೋಕಗುರು ಶ್ರೀ ಮಧ್ವಾಚಾರ್ಯರಿಗೆ ಗೌರವ ನೀಡಿದೆ. 

ಅದು ನಮ್ಮ ಚತುರ್ಥ ಪರ್ಯಾಯ ಹಾಗೂ ಶ್ರೀಕೃಷ್ಣ ಮಂಡಲೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.

ಜನ್ಮ ನಕ್ಷತ್ರ ಆಚರಣೆ ಮೂಲಕ ಇನ್ನಷ್ಟು ದೈವಭಕ್ತಿ ಹಾಗೂ ಹೆತ್ತವರು ಮತ್ತು ಹಿರಿಯರಲ್ಲಿ ಭಕ್ತಿ ತೋರ್ಪಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಹರಿ ಗುರುಗಳ ಸೇವೆಯನ್ನು ವಿಶ್ವರೂಪ ದರ್ಶನ ಅಲಂಕಾರ ಕವಚ ಹಾಗೂ ಅಂಚೆಚೀಟಿ ಬಿಡುಗಡೆ ಮೂಲಕ ನಡೆಸಲಾಗುತ್ತದೆ. 

ನಾವು ಪರ್ಯಾಯ ಪೂರ್ವದಲ್ಲಿ ಸಂಕಲ್ಪಿಸಿದ್ದ ಎಲ್ಲ ಕಾರ್ಯಗಳು ಈಡೇರಿದಂತಾಗಿದೆ. ಕಲ್ಸಂಕದಲ್ಲಿ ಗೋಪುರ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯ ತಾಂತ್ರಿಕ ಕಾರಣಗಳಿಂದ ತೊಡಕಾಗಿದೆ. 

ಕೃಷ್ಣಮಠದಲ್ಲಿ ಸುಮಾರು 6-7 ಕೋ. ರೂ. ವೆಚ್ಚದ ಕಾಮಗಾರಿ ನಡೆದಿದೆ ಎಂದರು.

Previous Post

ರಾಷ್ಟೀಯ ಕ್ರೀಡಾ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ..!!

Next Post

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಅಗಸ್ಟ್ 31 ತನು ತರ್ಪಣ ಮಂಡಲ ಸೇವೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಅಗಸ್ಟ್ 31 ತನು ತರ್ಪಣ ಮಂಡಲ ಸೇವೆ..!!

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಅಗಸ್ಟ್ 31 ತನು ತರ್ಪಣ ಮಂಡಲ ಸೇವೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026

Recent News

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved