ಬೆಂಗಳೂರು :ಆಗಸ್ಟ್ 28 :ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇಂದು (ಆಗಸ್ಟ್ 28) ಬೆಂಗಳೂರಿನಲ್ಲಿ ಕೊಡಗಿನ ಉದ್ಯಮಿ ರೋಷನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ಆಂಕರ್ ಅನುಶ್ರೀ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಅನುಶ್ರೀ ವಿವಾಹದ ಬಗ್ಗೆ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಂದು (ಆಗಸ್ಟ್ 28) ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಇನ್ನೂ ಅನುಶ್ರೀ ಅವರು ತಾಳಿ ತಟ್ಟುವ ವೇಳೆ ಭಾವುಕರಾಗಿದ್ದು, ಪತ್ನಿ ಅನುಶ್ರಿಗೆ ರೋಷನ್ ಅವರು ಮುತ್ತಿಟ್ಟಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ನೆರವೆರಿತ್ತು. ಮದುವೆ ಮಂಟಪ ಸೇರಿದಂತೆ ರೆಸಾರ್ಟ್‌ನಾದ್ಯಂತ ಹೂವಿನ ಅಲಂಕಾರ ಮಾಡಲಾಗಿತ್ತು. ಇದೀಗ ಆಂಕರ್ ಅನುಶ್ರೀ ಹಾಗೂ ರೋಷನ್ ಅವರ ವಿವಾಹ ಮಹೋತ್ಸವ ಸಂಪನ್ನಗೊಂಡಿದೆ. ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ಪುತ್ರ ರೋಷನ್ ಅವರನ್ನು ಅನುಶ್ರೀ ಮದುವೆಯಾಗಿದ್ದಾರೆ.
ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆಯಿತು. ಪ್ರೀತಿಸಿದ ಹುಡುಗ ಜೊತೆಗೆ 37 ವರ್ಷದ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಖಾಸಗಿ ವಿವಾಹ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ತಾರೆಯರು ಹಾಗೂ ಆಪ್ತರು ಭಾಗಿಯಾಗಿದ್ದರು. ಅಲ್ಲದೇ ನಟ ಶಿವರಾಜ್ ಕುಮಾರ್,ಗೀತಾ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ನಟ ರಾಜ್ ಬಿ. ಶೆಟ್ಟಿ, ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ. ಆಚಾರ್, ಶರಣ್, ಸೋನಲ್ ಮೊಂಥೆರೋ ಸೇರಿದಂತೆ ಅನೇಕರು ನವಜೋಡಿಗೆ ಶುಭ ಹಾರೈಸಿದರು.








