ಉಡುಪಿ:ಆಗಸ್ಟ್ 26:ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅಂಚೆ ಚೀಟಿಗಳು ನಮ್ಮ ಸಂಸ್ಕ್ರತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪರಿಚಯಿಸುವುದರೊಂದಿಗೆ ನಮ್ಮ ನಾಡಿನ ವಿಶೇಷತೆಗಳನ್ನು, ವಿಶಿಷ್ಟ ವ್ಯಕ್ತಿ ಗಳನ್ನು, ವಿಶಿಷ್ಟ ಸಂಧರ್ಭಗಳನ್ನು ಸ್ಮರಣೀಯಗೊಳಿಸುತ್ತವೆ.
ಜಗದೊಡೆಯ ಶ್ರೀ ಕೃಷ್ಣನನ್ನು ಉಡುಪಿ ಯಲ್ಲಿ ಪ್ರತಿಷ್ಠಾಪಿಸಿ ಅಷ್ಟ ಮಠಗಳಿಗೆ ಪೂಜಾ ಕೈ0ಕರ್ಯ ಒಪ್ಪಿಸಿದ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ,ದ್ವೆತ ಮತ ಪ್ರತಿಪಾದಕ ಪೂಜನೀಯ ಆಚಾರ್ಯ ಮಧ್ವರ ಸಂಸ್ಮರಣೆಯಲ್ಲಿ ಅವರ ಅಂಚೆ ಚೀಟಿ ಬಿಡುಗಡೆ ಗೊಳ್ಳಲಿದೆ
ಸಂವಹನ ಮತ್ತು ಭಾರತೀಯ ಅಂಚೆ ಇಲಾಖೆಯ ಈ ಸಮಾರಂಭದಲ್ಲಿ ಅದಮಾರು ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ರು ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಆಶೀರ್ವಾದ ದೊಂದಿಗೆ ಮಾನ್ಯ ಉಪ ಮುಖ್ಯ ಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ರವರ ಘನ ಉಪಸ್ಥಿತಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ( ಮಾಹೆ )ನ ಪ್ರಾಯೋಜಕತ್ವ ದಲ್ಲಿ ಗಣ್ಯ ರ ಉಪಸ್ಥಿತಿಯಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟಮಾಸ್ಟರ್ ಜನರಲ್ ಶ್ರೀ ಕೆ ಪ್ರಕಾಶ್ ರವರು ಆಗಸ್ಟ್ 30 ರ ಸಂಜೆ ನಾಲ್ಕು ಗಂಟೆಗೆ ಬಿಡುಗಡೆ ಗೊಳಿಸಲಿದ್ದಾರೆ
ಪರ್ಯಾಯ ಪುತ್ತಿಗೆ ಶ್ರೀಗಳ ಜನ್ಮ ನಕ್ಷತ್ರ ದ ಈ ಶುಭ ಸಂಧರ್ಭದಲ್ಲಿ ಶ್ರೀ ಮಧ್ವಚಾರ್ಯರ ಅಂಚೆ ಚೀಟಿಯ ಬಿಡುಗಡೆ ಸಂತಸ ಹೆಚ್ಚಿಸಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಅಂಚೆ ಚೀಟಿ ಬಿಡುಗಡೆ ಸಭಾ ಕಾರ್ಯಕ್ರಮ ದ ಅಧ್ಯಕ್ಷರೂ ಆಗಿರುವ ಡಾ ಹೆಚ್ ಎಸ್ ಬಲ್ಲಾಳ್ ಹಾಗೂ ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾಗಿರುವ ರಮೇಶ್ ಪ್ರಭು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









