ಉಡುಪಿ ಆಗಸ್ಟ್.3:- ಹಿರಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಡೂರಿನ ಪಾಡಿಗಾರ್ ಬಳಿ ಮುಖ್ಯ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವ ವಿವಸ್ತ್ರ ನಾಗಿ ನಡೆದುಕೊಂಡು ಹೋಗುತ್ತಿದ್ದು ಯುವಕನನ್ನು ಸಾರ್ವಜನಿಕರಸಹಾಯದಿಂದ ವಿಶುಶೆಟ್ಟಿ ಅಂಬಲಪಾಡಿಯವರು ಮಾಹಿತಿ ಮೆರೆಗೆ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿದಿದ್ದಾರೆ.
ಯುವಕ ತನ್ನ ಹೆಸರು ಮುರುಳಿದರ ಭಟ್ (35ವರ್ಷ ) ತಾನು ತಿರ್ಥಹಳ್ಳಿಗೆ ನಡೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಹೆಚ್ಚಿನ ವಿವರಗಳನ್ನು ಯುವಕ ನೀಡುತಿಲ್ಲವಾದುದ್ದರಿಂದ ಸಂಬಂಧಿಕರು ಅಥವಾ ಸಂಬಂಧಪಟ್ಟವರು ಯಾರಾದರು ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ವಿಶುಶೆಟ್ಟಿಯವರು ವಿನಂತಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಗೆ ಮಾಹಿತಿ ನೀಡಲಾಗಿದೆ
ರಕ್ಷಣಾ ಕಾರ್ಯದಲ್ಲಿ ಪೆರ್ಡೂರಿನ ಪಾಡಿಗಾರ್ ರಾಘವೇಂದ್ರ ಹಾಗೂ ಜಗದೀಶ್ ಸಹಕರಿಸಿದ್ದಾರೆ.








