ಉಡುಪಿ: ಆಗಸ್ಟ್ 03ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಮೂಲಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಕಾರ್ಯಕ್ರಮ ಹಡಿಲು ಭೂಮಿ ಕೃಷಿ ಮೂಲಕ ಪ್ರೇರಣೆ ಪಡೆದ ಯುವಕರು ಕೇದಾರೋತ್ಥಾನ ರೈತ ಉತ್ಪಾದಕರ ಕಂಪೆನಿ ಮೂಲಕ ಸತತ 5 ವರ್ಷಗಳಿಂದ ನೂರಾರು ಎಕರೆ ಭತ್ತದ ಕೃಷಿ ಮಾಡುತ್ತಿದ್ದು, ಈ ವರ್ಷದ ಕಡೇ ನಟ್ಟಿ ಇಂದು ಕುತ್ಪಾಡಿ ಶಾಲೆ ಬಳಿ ನಡೆಯಿತು. ಈ ಸಂದರ್ಭದಲ್ಲಿ ಹಡಿಲು ಭೂಮಿ ಕೃಷಿಯಲ್ಲಿ ತೊಡಗಿ ಸ್ವಯಂ ಪ್ರೇರಿತರಾಗಿ ಕೃಷಿ ಕಾರ್ಯ ಮಾಡುತ್ತಿರುವ ಕೃಷಿಕರನ್ನು ಅಭಿನಂದಿಸಲಾಯಿತು.
ಕೆ. ರಘುಪತಿ ಭಟ್ ಅವರು ಉಡುಪಿಯ ಶಾಸಕರಿದ್ದಾಗ ಸಮಾಜ ಗಣ್ಯರನ್ನು ಸೇರಿಸಿ ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಆರಂಭಿಸಿ ಆ ಮೂಲಕ ಉಡುಪಿಯಲ್ಲಿ ಕೃಷಿ ಮಾಡದೆ ಹಡಿಲು ಬಿಟ್ಟಿದ್ದ 1500 ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡಿದ್ದರು. ಈ ಕಾರ್ಯದಲ್ಲಿ ಯುವಕ, ಯುವತಿ ಮಂಡಲ, ಭಜನಾ ಮಂಡಳಿಗಳು, ರಿಕ್ಷಾ ಚಾಲಕರ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೀಗೆ ಜನ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ಅದರಿಂದ ಪ್ರೇರಣೆ ಗೊಂಡು ಇಂದಿಗೂ ಹೆಚ್ಚಿನ ಮಂದಿ ಭತ್ತದ ಕೃಷಿ ಮಾಡುತ್ತಿದ್ದಾರೆ








