ಉಡುಪಿ, ಜುಲೈ 15: ಕರ್ನಾಟಕದ ಕರಾವಳಿ, ಮಲೆನಾಡು ಸೇರಿ ಬಹುತೇಕ ಕಡೆಗಳಲ್ಲಿ ಜುಲೈ 21ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ರಾಮನಗರ, ಮೈಸೂರು, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೋಟಾ, ಮಂಗಳೂರು, ಶಕ್ತಿನಗರ, ಉಡುಪಿ, ಬಂಟವಾಳ, ಸುಳ್ಯ, ಆಗುಂಬೆ, ಪುತ್ತೂರು, ಮೂಡುಬಿದಿರೆ, ಮಾಣಿ, ಮುಲ್ಕಿ, ಕಾರವಾರ, ಮಂಕಿ,ಕ್ಯಾಸಲ್ರಾಕ್, ಕಾರ್ಕಳ, ಧರ್ಮಸ್ಥಳ, ಸಿದ್ದಾಪುರ, ಕದ್ರಾ, ಶಿರಾಲಿ, ಬೆಳ್ತಂಗಡಿ, ಬನವಾಸಿ, ಕುಂದಾಪುರ, ಕುಮಟಾ, ಲೋಂಡಾ, ತ್ಯಾಗರ್ತಿ, ಭಾಗಮಂಡಲ, ಆನವಟ್ಟಿ, ಕಳಸ, ಕೊಪ್ಪ, ಶೃಂಗೇರಿ, ಕೊಪ್ಪ, ಹೊನ್ನಾವರ, ಯಲ್ಲಾಪುರ, ಕಿರವತ್ತಿ, ಮುಂಡಗೋಡು, ಗೋಕರ್ಣ, ಹಿರೇಕೆರೂರು, ನಾಪೋಕ್ಲು, ಜಗಳೂರು, ತೊಂಡೆಭಾವಿ, ಸೋಮವಾರಪೇಟೆ, ಬರಗೂರು, ಬಾಳೆಹೊನ್ನೂರು, ದೇವನಹಳ್ಳಿ, ಎನ್ಆರ್ಪುರ, ಹಗರಿಬೊಮ್ಮನಹಳ್ಳಿಯಲ್ಲಿ ಮಳೆಯಾಗಿದೆ.