ಕಾರ್ಕಳ: ಜೂನ್ 25:ಕಾರ್ಕಳದ ನಿಟ್ಟೆ ಗ್ರಾಮದ ದೂಪದ ಕಟ್ಟೆ ಬಳಿ ಜೂನ್ 24ಸೋಮವಾರ ಮಧ್ಯಾಹ್ನದ ವೇಳೆ ಕಾರು ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿಗೆ ತೀವ್ರ ಹಾನಿಯುಂಟಾಗಿದೆ.
ಮಂಗಳೂರು ದಿಕ್ಕಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ದೂಪದ ಕಟ್ಟೆಯ ಬಳಿ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಕಾರ್ಕಳ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.