ಬ್ರಹ್ಮಾವರ :ಜೂನ್ 20:ಮೊಬೈಲ್ ಬಳಸುವ ವಿಚಾರವಾಗಿ ತನ್ನ ಪತ್ನಿ ಯನ್ನು ಕಡಿದು ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಹೊಸಮಠ ನಿವಾಸಿ ರೇಖಾ ಕೊಲೆಯಾದ ಮಹಿಳೆಯಾಗಿದ್ದು ಹತ್ಯೆ ಗೈದ ಈಕೆಯ ಪತಿ ಗಣೇಶ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಯಾವಾಗಲೂ ವಿಪರೀತ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ಮದ್ಯಪಾನ ಮಾಡಿಕೊಂಡು ಬಂದು ಜಗಳವಾಡಿ, ಆರೋಪಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯ ವಾಗಿದ್ದು ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.