Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಉಡುಪಿ:ಮೇ 31ರಂದು ಉಚಿತ ಮಧುಮೇಹ ಪಾದ (ಪೊಡಿಯಾಟ್ರೀ) ತಪಾಸಣಾ ಶಿಬಿರ..!!

Dhrishya News by Dhrishya News
28/05/2025
in ಆರೋಗ್ಯ, ಸುದ್ದಿಗಳು
0
0
SHARES
22
VIEWS
Share on FacebookShare on Twitter

ಉಡುಪಿ, ಮೇ 28, 2025: ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಶನಿವಾರ , ಮೇ 31, 2025 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ. ಈ ಉಚಿತ ಕಾರ್ಯಕ್ರಮವನ್ನು ಸೆಂಟರ್ ಆಫ್ ಎಕ್ಸಲೆನ್ಸ್: ಪೊಡಿಯಾಟ್ರಿ & ಡಯಾಬಿಟಿಕ್ ಫೂಟ್ ಕೇರ್ ಅಂಡ್ ರಿಸರ್ಚ್, ಮಾಹೆ , ಮಣಿಪಾಲ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜು , ಮಾಹೆ, ಮಣಿಪಾಲ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ನವದೆಹಲಿಯ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಾಮಾಜಿಕ ಜವಾಬ್ದಾರಿ ಉಪಕ್ರಮದಿಂದ ಬೆಂಬಲಿತವಾಗಿದೆ.

ಈ ಶಿಬಿರದಲ್ಲಿ ಮಧುಮೇಹ ರೋಗಿಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ಪಾದದ ಹುಣ್ಣುಗಳು, ಸೋಂಕುಗಳು ಅಥವಾ ರಕ್ತಪರಿಚಲನಾ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ರಕ್ತನಾಳಗಳ ಮತ್ತು ನರವೈಜ್ಞಾನಿಕ ಪರೀಕ್ಷೆ ಸೇರಿದಂತೆ ಸಮಗ್ರ ಪಾದದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಭಾಗವಹಿಸುವವರು ಪಾದದ ಆರೈಕೆ, ಪಾದರಕ್ಷೆಗಳ ಶಿಫಾರಸುಗಳು ಮತ್ತು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಳ ಕುರಿತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ಸಹ ಪಡೆಯುತ್ತಾರೆ. ಮುಂದಿನ ಅವಶ್ಯ ಪರೀಕ್ಷೆಗಳು ಮತ್ತು ಚಿಕಿತ್ಸೆಯಲ್ಲಿ ಶೇಕಡಾ 20 ರಿಯಾಯಿತಿಯನ್ನು ಸಹ ಜೂನ್ 15, 2025 ರವರೆಗೆ ಮಾಡಲಾಗುತ್ತದೆ.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್, “ಮಧುಮೇಹದ ಕಾರಣದಿಂದ ಹಲವರು ಕಾಲಿನ ಸಮಸ್ಯೆಗಳ ಕಾರಣದಿಂದ ತಮ್ಮ ಚಲನೆ ಹಾಗೂ ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗಳನ್ನು ತಡೆಯಬಹುದು. ಈ ಶಿಬಿರವು ಕಾಲಿನ ಸಮಸ್ಯೆಗಳನ್ನು ಬೇಗನೆ ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಲು ಸಹಾಯಕವಾಗುತ್ತದೆ. ಕಾಲು ನೋವು, ಮರಗಟ್ಟುವಿಕೆ, ಅಥವಾ ಜುಮ್ಮೆನಿಸುವಿಕೆಯ ಲಕ್ಷಣಗಳಿರುವವರು ಸೇರಿದಂತೆ ಎಲ್ಲಾ ಮಧುಮೇಹ ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ..” ಎಂದಿದ್ದಾರೆ. 

ಎಂಸಿಎಚ್‌ಪಿಯ ಡೀನ್ ಮತ್ತು ಡಯಾಬಿಟಿಕ್ ಫೂಟ್ ಕೇರ್ & ರಿಸರ್ಚ್‌ನ ಮುಖ್ಯಸ್ಥ ಡಾ. ಜಿ. ಅರುಣ್ ಮಯ್ಯ , ಮಧುಮೇಹದ ತೊಡಕುಗಳನ್ನು ತಡೆಗಟ್ಟಲು ಆರಂಭಿಕ ತಪಾಸಣೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಹಾಗೂ ಕಸ್ತೂರ್ಬಾ ಆಸ್ಪತ್ರೆಗಳು ಮಧುಮೇಹ ಸಂಬಂಧಿತ ನರಗಳ ನೋವು (ಡಯಾಬಿಟಿಕ್ ನ್ಯೂರೋಪಥಿ) ನಿರ್ವಹಿಸಲು ಸಶಕ್ತವಾಗಿವೆ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ದೂರವಾಣಿ ಸಂಖ್ಯೆ 7338343777 ಸಂಪರ್ಕಿಸುವಂತೆ ಡಾ ಶಶಿಕಿರಣ್ ಉಮಾಕಾಂತ ವೈದ್ಯಕೀಯ ಅಧೀಕ್ಷಕರು, ಡಾ ಟಿ ಎಂ ಎ ಪೈ ಆಸ್ಪತ್ರೆ.ಉಡುಪಿ ಇವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ 

Previous Post

ಉಡುಪಿ : ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ..!!

Next Post

ಮಳೆಗಾಲದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಶಾಸಕರ ಸಭೆ: ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ: ಅಧಿಕಾರಿಗಳಿಗೆ ಶಾಸಕ ಸುನಿಲ್ ಕುಮಾರ್ ಸೂಚನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಳೆಗಾಲದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಶಾಸಕರ ಸಭೆ: ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ: ಅಧಿಕಾರಿಗಳಿಗೆ ಶಾಸಕ ಸುನಿಲ್ ಕುಮಾರ್ ಸೂಚನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

06/08/2026
ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

06/08/2026
ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026

Recent News