ಉಡುಪಿ: ಮೇ 23: ಜಿಲ್ಲೆಯ ಬಹುತೇಕ ಕಡೆ ಇಂದು ಶುಕ್ರವಾರ ಉತ್ತಮ ಭಾರೀ ಮಳೆಯಾಗಿದೆ. ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಕಾಪು, ಹೆಬ್ರಿ ಸಹಿತ ಹಲವು ಕಡೆ ಮಳೆ ಸುರಿದಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಮಳೆ ಹೆಚ್ಚಾಗಿತ್ತು
ಭಾರತೀಯ ಹವಾಮಾನ ಇಲಾಖೆಯ ಮನ್ಸೂಚನೆ ಪ್ರಕಾರ ಮೆ 24ರ ಬೆಳಗ್ಗೆಯಿಂದ ಮೇ 28ರ ಬೆಳಗ್ಗೆಯವರೆಗೂ ರೆಡ್ ಅಲರ್ಟ್ ಇರಲಿದ್ದು ಈ ಅವಧಿಯಲ್ಲಿ ಭಾರೀ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.