ಕಾರ್ಕಳ,ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ದ ಕಾಲಾವಧಿ ರಾಶಿ ಮಾರಿಪೂಜೆ ದಿನಾಂಕ ಮೇ 13 ಮತ್ತು ಮೇ 14 ರಂದು ವಿಜೃಂಭಣೆಯಿಂದ ಜರಗಿತು
ದಿನಾಂಕ ಮೇ 13 ಮಂಗಳವಾರ ಬೆಳಿಗ್ಗೆ ಘಂಟೆ 8.00 ಕ್ಕೆ ಮಾರ್ಕೆಟ್ ರಸ್ತೆಯಲ್ಲಿ ದೇವಿಯ ಪ್ರತಿಷ್ಟಾಪನೆ ಹಾಗೂ ರಾತ್ರಿ ಶ್ರೀ ದೇವಿಯ ಮಹಾಪೂಜೆ ನಂತರ ದರ್ಶನ ಸೇವೆಯ ಮುಖಾಂತರ ಮೆರವಣಿಗೆ ಯೊಂದಿಗೆ ಶ್ರೀ ಉಚ್ಚಂಗಿ ದೇವಸ್ಥಾನ ಕ್ಕೆ ಪ್ರವೇಶ ನಂತರ ಪ್ರಸಾದ ವಿತರಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು
.ರಾತ್ರಿ 12 ಘಂಟೆಗೆ ಬಲಿಪೂಜೆ ,ದಿನಾಂಕ ಮೇ 14 ರಂದು ಬುಧವಾರ ಮದ್ಯಾಹ್ನ 12 ಕ್ಕೆ ಅರಮನೆ ಪೂಜೆ, ಸಂಜೆ ಘ 4 ಕ್ಕೆ ಮಹಾಪೂಜೆ ಶ್ರೀ ದೇವಿಯ ದರ್ಶನ ಸಹಿತ ಧೂತಗಳ ಭೇಟಿ . ಆಡಳಿತ ಮಂಡಳಿಯ ಅಧ್ಯಕ್ಷರು ಸುರೇಂದ್ರ (ಸೂರಿ),ಕಾರ್ಯದರ್ಶಿ ವಿಶ್ವನಾಥ ಕೆ. ಮತ್ತು ಸಂಜೀವ ಗೌಡ್ರು,ವಿನಯ ರಾಣೆ,ಹಾಗೂ ಸಮಿತಿಯ ಸರ್ವ ಸದಸ್ಯರು ಹಾಗೂ ಹತ್ತು ಸಮಸ್ತರು ಸೇರಿದ್ದರು.