Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ :ಏಕೋತ್ತರ ತ್ರಿಶತ ಬ್ರಹ್ಮಕುಂಭಾಭಿಷೇಕ, ಸೌರ ಸೂಕ್ತ ಹೋಮ..!!

Dhrishya News by Dhrishya News
04/05/2025
in ಸುದ್ದಿಗಳು
0
0
SHARES
5
VIEWS
Share on FacebookShare on Twitter

ಉಡುಪಿ, ಮೇ 4: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ನಡೆದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನಡೆದ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆೆ ಪ್ರಯುಕ್ತ ರವಿವಾರ ಪಂಚವಿ ವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ (301) ಬ್ರಹ್ಮಕುಂಭಾಭಿಷೇಕ ನೆರವೇರಿತು.

ಗಣೇಶ ಸರಳಾಯರ ನೇತೃತ್ವದಲ್ಲಿ, ಗೌರವ ಸಲಹೆಗಾರ ವೇಮೂ ವಿಖ್ಯಾತ್ ಭಟ್ ಸಹಭಾಗಿತ್ವದಲ್ಲಿ ಪ್ರಾಜ್ಞ ಋತ್ವಿಜರ ಸಹಕಾರದೊಂದಿಗೆ ಎಲ್ಲ ಧಾರ್ಮಿಕ ವಿಧಿವಿಧಾನಗಳು ಶಿಸ್ತುಬದ್ಧವಾಗಿ ನೆರವೇರಿತು. 

ಬ್ರಹ್ಮಕಲಶೋತ್ಸವ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ, ದಂಪತಿ ಆರಾಧನೆ, ಆಚಾರ್ಯ ಪೂಜೆ, ಕನ್ನಿಕಾ ಪೂಜೆ ನಡೆಸಲಾಯಿತು. ಶಾಸ್ತ್ರೋಕ್ತವಾಗಿ ಗಾಯತ್ರಿ ದೇವಿಯ ಪ್ರತಿಷ್ಠೆೆ ನೆರವೇರಿಸಿದ ಕ್ಷೇತ್ರದ ತಂತ್ರಿಗಳಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.

ಪಂಚಗವ್ಯ ಪುಣ್ಯಾಹ, ಮಂಗಳ ಗಣಯಾಗ, ಪಂಚಾಮೃತ ಅಭಿಷೇಕ, ಋಕ್‌ಸಂಹಿತ ಅಭಿಮಂತ್ರಿತ ಮಧು ಅಭಿಷೇಕ, ಸೌರ ಸೂಕ್ತ ಹೋಮ, ನ್ಯಾಸ ಪೂಜೆ, ಮಹಾಪೂಜೆ, ಪಲ್ಲಪೂಜೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಪಂಚ ವಾದ್ಯ, ವಾದ್ಯ ಗೋಷ್ಠಿಿ, ಚೆಂಡೆ ವಾದನ, ವೇದ ಘೋಷಗಳೊಂದಿಗೆ ಜರಗಿತು. 

ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಗಾಯತ್ರಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಗ್ರಿ ಪ್ರಕಾಶ್ ನಾಯಕ್ ಮತ್ತು ಬಳಗದವರಿಂದ ಸುಗಮ ಸಂಗೀತ ಮತ್ತು ಭಜನೆ ಸಂಕೀರ್ತನೆ, ಅಮ್ಮ ಕಲಾವಿದೆರ್ ಕುಡ್ಲ ಅವರಿಂದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ. 

ಲೋಕದ ಭಕ್ತ ಸಂಕುಲಕ್ಕೆೆ ಸನ್ಮಂಗಲ

ಬೇರೆಲ್ಲ ದೇವರ ವಿಗ್ರಹ, ಬಿಂಬ, ದೇವಾಲಯ ಸರ್ವೇಸಾಮಾನ್ಯವಾಗಿ ಎಲ್ಲೆೆಡೆ ಕಾಣಸಿಗುತ್ತದೆ. ಆದರೆ ಗಾಯತ್ರಿ ದೇವಿಯ ವಿಗ್ರಹ ಅಥವಾ ದೇವಾಲಯ ಕಾಣ ಸಿಗುವುದು ತುಂಬಾ ವಿರಳ. ಜಗನ್ಮಾತೆಯಾದ ಆದಿಶಕ್ತಿಯು ಸ್ವಯಂಪ್ರಕಾಶಿತಳಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಕ್ಷೇತ್ರವೆನಿಸಿದ ದೊಡ್ಡಣಗುಡ್ಡೆೆಯಲ್ಲಿ ಪವಿತ್ರ ಗಾಯತ್ರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. 

ವಿಶೇಷವಾಗಿ ಪದ್ಮಾಸನದಲ್ಲಿ ಕುಳಿತ ಪಂಚಮುಖಿಯಾದ ಮಹಾಮಾತೆಯು ಶಂಖ, ಚಕ್ರ, ವರದ, ಅಭಯ, ಅಂಕುಶ, ಶೂಲ, ಕಪಾಲ, ಗಧೆ ಹಾಗೂ ಎರಡೂ ಕೈಯಲ್ಲಿ ಪದ್ಮ ಈ ಹತ್ತು ಕೈಯನ್ನು ಹೊಂದಿದ ದೇವಿ ಇಡೀ ಮಂತ್ರ ವಾಗ್ಮಯಕ್ಕೆೆ ಅಧಿದೇವತೆಯಾಗಿ, ವೇದಮಾತೆಯಾಗಿ ಭಕ್ತರನ್ನು ಅನುಗ್ರಹಿಸಲು ಪ್ರತಿಷ್ಠಾಪನೆಗೊಂಡಿದ್ದಾಾಳೆ. 

ಈಕೆಯ ಆರಾಧನೆಯಿಂದ ಪ್ರಜ್ಞಾಶಕ್ತಿ, ಮೇಧಾಶಕ್ತಿ, ಧಾರಣಾಶಕ್ತಿ, ಬುದ್ಧಿಶಕ್ತಿ, ದಯೋಶಕ್ತಿ ಹೀಗೆ ಮನುಷ್ಯನಿಗೆ ಬೇಕಾದ ಎಲ್ಲ ಶಕ್ತಿಯನ್ನು ಅನುಗ್ರಹಿಸುವ ಪರಮ ಶ್ರೇಷ್ಠಳಾಗಿದ್ದಾಳೆ. ಅಂತಹ ಶಕ್ತಿಸ್ವರೂಪಿಣಿಯಾದ ಗಾಯತ್ರಿ ದೇವಿಯು ಇಡೀ ಲೋಕದ ಭಕ್ತ ಸಂಕುಲಕ್ಕೆೆ ಸನ್ಮಂಗಲವನ್ನು ಉಂಟು ಮಾಡಲಿದ್ದಾಳೆ ಎಂದು ಕ್ಷೇತ್ರದ ನಿಯೋಜಿತ ತಂತ್ರಿಗಳಾದ ಸರ್ವೇಶ ತಂತ್ರಿ ಬ್ರಹ್ಮಕುಂಭಾಭಿಷೇಕ ನೆರವೇರಿಸಿ ತಿಳಿಸಿದ್ದಾರೆ.

Previous Post

ಉಡುಪಿ :ವಿದ್ಯಾಪೋಷಕ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ..!!

Next Post

ಧರ್ಮಸ್ಥಳ : ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭ ಹೃದಯಾಘಾತವಾಗಿ 16 ವರ್ಷದ ಬಾಲಕ ಸಾವು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಧರ್ಮಸ್ಥಳ : ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭ ಹೃದಯಾಘಾತವಾಗಿ 16 ವರ್ಷದ ಬಾಲಕ ಸಾವು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ  ವ್ಯಕ್ತಿಯ ರಕ್ಷಣೆ….!

ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ….!

17/03/2026
ಕಲ್ಲೇರಿ ಬಳಿ ಭೀಕರ ಅಪಘಾತ: 5 ವರ್ಷದ ಬಾಲಕಿ ಸಾವು, ಇಬ್ಬರಿಗೆ ಗಂಭೀರ ಗಾಯ….!

ಕಲ್ಲೇರಿ ಬಳಿ ಭೀಕರ ಅಪಘಾತ: 5 ವರ್ಷದ ಬಾಲಕಿ ಸಾವು, ಇಬ್ಬರಿಗೆ ಗಂಭೀರ ಗಾಯ….!

17/03/2026
ಗುಡುಗು-ಮಿಂಚಿನ ಮಳೆ: ದ.ಕ. ಜಿಲ್ಲೆಯಲ್ಲಿ ತಂಪಿನ ಸ್ಪರ್ಶ, ಕೆಲವೆಡೆ ವಿದ್ಯುತ್ ವ್ಯತ್ಯಯ…!

ಗುಡುಗು-ಮಿಂಚಿನ ಮಳೆ: ದ.ಕ. ಜಿಲ್ಲೆಯಲ್ಲಿ ತಂಪಿನ ಸ್ಪರ್ಶ, ಕೆಲವೆಡೆ ವಿದ್ಯುತ್ ವ್ಯತ್ಯಯ…!

17/03/2026
ಬಿರುಗಾಳಿ ಹೊಡೆತಕ್ಕೆ ಪುತ್ತೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಹಾನಿ…!

ಬಿರುಗಾಳಿ ಹೊಡೆತಕ್ಕೆ ಪುತ್ತೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಹಾನಿ…!

17/03/2026

Recent News

ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ  ವ್ಯಕ್ತಿಯ ರಕ್ಷಣೆ….!

ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ….!

17/03/2026
ಕಲ್ಲೇರಿ ಬಳಿ ಭೀಕರ ಅಪಘಾತ: 5 ವರ್ಷದ ಬಾಲಕಿ ಸಾವು, ಇಬ್ಬರಿಗೆ ಗಂಭೀರ ಗಾಯ….!

ಕಲ್ಲೇರಿ ಬಳಿ ಭೀಕರ ಅಪಘಾತ: 5 ವರ್ಷದ ಬಾಲಕಿ ಸಾವು, ಇಬ್ಬರಿಗೆ ಗಂಭೀರ ಗಾಯ….!

17/03/2026
ಗುಡುಗು-ಮಿಂಚಿನ ಮಳೆ: ದ.ಕ. ಜಿಲ್ಲೆಯಲ್ಲಿ ತಂಪಿನ ಸ್ಪರ್ಶ, ಕೆಲವೆಡೆ ವಿದ್ಯುತ್ ವ್ಯತ್ಯಯ…!

ಗುಡುಗು-ಮಿಂಚಿನ ಮಳೆ: ದ.ಕ. ಜಿಲ್ಲೆಯಲ್ಲಿ ತಂಪಿನ ಸ್ಪರ್ಶ, ಕೆಲವೆಡೆ ವಿದ್ಯುತ್ ವ್ಯತ್ಯಯ…!

17/03/2026
ಬಿರುಗಾಳಿ ಹೊಡೆತಕ್ಕೆ ಪುತ್ತೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಹಾನಿ…!

ಬಿರುಗಾಳಿ ಹೊಡೆತಕ್ಕೆ ಪುತ್ತೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಹಾನಿ…!

17/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved