ಮುಂಬೈ, :– ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಅಂಗಸಂಸ್ಥೆಯಯಾದ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪ್ರತಿಷ್ಠಿತ 2024ನೇ ಸಾಲಿನ IMC ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಕ್ವಾಲಿಟಿ ಅವಾರ್ಡ್ ಶಿಕ್ಷಣ ವಿಭಾಗದಲ್ಲಿ ಪಡೆದಿದೆ. ಭಾರತದ ಅತ್ಯಂತ ಗೌರವಾನ್ವಿತ ಹಾಗೂ ಗುಣಮಟ್ಟದ ಮೌಲ್ಯಮಾಪನದಲ್ಲಿ ಶ್ರೇಷ್ಠತೆ ತಲುಪಿದ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ಪ್ರಶಸ್ತಿಗೆ ಭಾಜನವಾದ ಇನ್ನಿತರೆ ಸಂಸ್ಥೆಗಳಲ್ಲಿ, ಓಡಿಶಾದ ಹಿಂದಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್‌ನ ಘಟಕ ಆದಿತ್ಯ ಅಲ್ಯೂಮಿನಿಯಂ (ನಿರ್ಮಾಣ ವಿಭಾಗ) ಮತ್ತು ಚೆನ್ನೈಯ ಮೂಲದ ಲಾರ್ಸನ್ ಅಂಡ್ ಟೂಬ್ರೋ ಲಿಮಿಟೆಡ್ – ವಾಟರ್ ಅಂಡ್ ಎಫ್ಲೂಯೆಂಟ್ ಟ್ರೀಟ್‌ಮೆಂಟ್ ವಿಭಾಗ (ಸೇವಾ ವಿಭಾಗ) ಸೇರಿವೆ.
28ನೇ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪುರಸ್ಕಾರ ಮತ್ತು ಜುರಾನ್ ಪದಕ ಪ್ರದಾನ ಸಮಾರಂಭ ಬುಧವಾರ, ಏಪ್ರಿಲ್ 23 ರಂದು ಮುಂಬೈನ ಚರ್ಚ್‌ಗೇಟ್‌ನಲ್ಲಿ ಇರುವ ಇಎಂಸಿ ಚೇಂಬರ್ ಆಫ್ ಕಾಮರ್ಸ್‌ನ ವಾಲ್ಚಾಂದ್ ಹಿರಾಚಂದ್ ಸಭಾಂಗಣದಲ್ಲಿ ಸಂಜೆ 5.30 ಕ್ಕೆ ನಡೆಯಿತು. ಐಎಂಸಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಶ್ರೀ ಸಂಜಯ ಮರಿವಾಲಾ ಅಧ್ಯಕ್ಷತೆ ವಹಿಸಿದ್ದರು. ಐಎಂಸಿ ಆರ್‌ಬಿಎನ್‌ಕ್ಯೂ ಅವಾರ್ಡ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ನಿರಜ್ ಬಜಾಜ್ ಮತ್ತು ನಿರ್ವಹಣಾ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಂಐಟಿ ಸಂಸ್ಥೆಯ ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಅವರೊಂದಿಗೆ ಡಾ. ದಶರಥ್‌ರಾಜ್ ಕೆ. ಶೆಟ್ಟಿ, ಸಹ ಪ್ರಾಧ್ಯಾಪಕ, ಎಂಐಟಿ, ಮಾಹೆ ಉಪಸ್ಥಿತರಿದ್ದರು.
ಮಾಹೆ ಸಂಸ್ಥೆಯು 2024ನೇ ವರ್ಷವನ್ನು “ಉದ್ಯಮ ಹಾಗೂ ಅಕಾಡಮಿಕ್ ಸಹಭಾಗಿತ್ವ” ಎಂದು ಘೋಷಿಸಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ದೊರೆತಿರುವುದು ವೈಶಿಷ್ಟ್ಯಪೂರ್ಣವೆನಿಸಿದೆ. ಅಮೆರಿಕದ ಮಾಲ್ಕಮ್ ಬಾಲ್ಡ್ರಿಡ್ಜ್ ಮಾದರಿಯ ಆಧಾರದ ಮೇಲೆ ಈ ಮೌಲ್ಯಮಾಪನ ನಡೆಸಿ, ಇಎಂಸಿ ಸಂಸ್ಥೆ ಭಾರತದಲ್ಲಿ ಇದನ್ನು ನೀಡುತ್ತಿರುವುದು, ಶಿಕ್ಷಣ ಮತ್ತು ಉದ್ಯಮದ ನಡುವಿನ ಬಲವಾದ ಜೋಡಣೆಯನ್ನು ಪ್ರತಿಬಿಂಬಿಸುತ್ತದೆ.
ಮಣಿಪಾಲ್ ತಾಂತ್ರಿಕ ಮಹಾವಿದ್ಯಾಲಯವು ಸಲ್ಲಿಸಿದ ತನ್ನ ಅಪ್ಲಿಕೇಶನ್ ಸಂಘಟನೆಯ ಪ್ರಕ್ರಿಯೆಗಳ ಸ್ಪಷ್ಟ ರೂಪರೇಖೆ, ಸಾಧಿಸಿರುವ ಫಲಿತಾಂಶಗಳ ಲೆಕ್ಕಾಚಾರ ಮತ್ತು ಸಂಸ್ಥೆಯು ಸಮಾಜದಲ್ಲಿ ಮೂಡಿಸಿದ ಪ್ರಭಾವದ ಸಂಪೂರ್ಣ ಚಿತ್ರಣವನ್ನು ಒಳಗೊಂಡಿತ್ತು.
ಮಾಹೆ ಅಧ್ಯಕ್ಷರು ಹಾಗೂ ಮಣಿಪಾಲ ಎಜುಕೇಶನ್ ಹಾಗೂ ಮೆಡಿಕಲ್ ಗ್ರೂಪಿನ ಅಧ್ಯಕ್ಷರೂ ಆದ ಡಾ| ರಂಜನ್ ಪೈ, ಮಾಹೆ ಸಹ ಕುಲಾಧಿಪತಿಗಳಾದ ಡಾ| ಎಚ್. ಎಸ್. ಬಲ್ಲಾಳ್, ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ|) ಎಂ.ಡಿ. ವೆಂಕಟೇಶ್, ಹಾಗೂ ಸಹ ಉಪ ಕುಲಪತಿಗಳಾದ ಡಾ| ನಾರಾಯಣ ಸಭಾಹಿತ್ ಅವರು ಎಂಐಟಿ ಸಂಸ್ಥೆಯ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. ಸಂಸ್ಥೆಯ ನಿರ್ದೇಶಕ ಕಮಾಂಡರ್ ಡಾ| ಅನಿಲ್ ರಾಣಾ, ಬೋಧಕ ಸಿಬ್ಬಂದಿ, ಸಂಸ್ಥೆಯ ನಾಯಕತ್ವ ಹಾಗೂ ವಿದ್ಯಾರ್ಥಿಗಳ ಪ್ರಯತ್ನಶೀಲತೆ ಹಾಗೂ ಬದ್ಧತೆಯನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.
ಎಂಐಟಿ ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ ಅವರು ಪ್ರಶಸ್ತಿಯ ಕುರಿತು ಮಾತನಾಡುತ್ತಾ, “ಏಪ್ರಿಲ್ 23ರಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎಂಐಟಿ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವ ಅವಕಾಶವು ನನಗೆ ಹೆಮ್ಮೆ ತಂದಿದೆ. ಕಳೆದ ಏಳು ದಶಕಗಳಿಂದ ಶಿಕ್ಷಣ, ಸಂಶೋಧನೆ, ಪರಿಸರ ಜವಾಬ್ದಾರಿ, ಸಮುದಾಯ ಸೇವೆ ಹಾಗೂ ಸುರಕ್ಷಿತ ಶೈಕ್ಷಣಿಕ ವಾತಾವರಣದ ನಿರ್ಮಾಣಕ್ಕೆ ಸಂಸ್ಥೆಯು ಬದ್ಧವಾಗಿದ್ದು ಭಾರತದೆಲ್ಲೆಡೆಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ` ಇದು ಒಕ್ಕೂಟದಂತೆ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸಂಸ್ಥೆಯಾಗಿದೆ. ಈ ಸಾಧನೆಯ ಹಿಂದೆ ಇರುವ ಶ್ರೇಷ್ಟ ದೃಷ್ಟಿಕೋನವನ್ನು ಡಾ. ಟಿ.ಎಂ.ಎ. ಪೈ ಅವರು ರೂಪಿಸಿದ್ದು, ನಂತರ ಡಾ. ರಾಮದಾಸ್ ಪೈ ಮತ್ತು ಡಾ. ರಂಜನ್ ಪೈ ಅವರಿಂದ ಅದನ್ನು ಬೆಳೆಸಲಾಯಿತು. ರಚನಾತ್ಮಕತೆ, ಕುತೂಹಲ ಮತ್ತು ಉದ್ಯಮಶೀಲ ಮನೋಭಾವವಿರುವ ನಮ್ಮ ಸಂಸ್ಥೆಯ ನಂಬಿಕೆ ಈ ಪ್ರಶಸ್ತಿಯ ಮೂಲಕ ಮತ್ತಷ್ಟು ಬಲಗೊಳ್ಳುತ್ತದೆ,” ಎಂದು ಹೇಳಿದರು