ಉಡುಪಿ: ಏಪ್ರಿಲ್ 25: ಉಡುಪಿ ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ ಏಪ್ರಿಲ್.29ರಂದು ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ನ ಸಹಭಾಗಿತ್ವದಲ್ಲಿ ಅಂತರ್ ಜಿಲ್ಲಾಮಟ್ಟದ ಚೆಸ್ ಪಂದ್ಯಕೂಟವನ್ನು ಆಯೋಜಿಸಲಾಗಿದೆ .
ಈ ಪಂದ್ಯಕೂಟವು 7, 9, 11, 13 ಹಾಗೂ 16 ವರ್ಷದ ವಯೋಮಿತಿ ವಿಭಾಗಗಳಲ್ಲಿ ಮತ್ತು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಎ.27ರೊಳಗೆ ನೋಂದಣಿ ಮಾಡಬೇಕು. ಮುಕ್ತ ವಿಭಾಗದಲ್ಲಿ ಪ್ರಥಮ 15 ಸ್ಥಾನಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿದ್ದು, ಪ್ರಥಮ 5000 ದ್ವಿತೀಯ 3000 ತೃತೀಯ 2,000 ರೂಪಾಯಿ, 4 ರಿಂದ 10 ನೇ ಸ್ಥಾನದವರೆಗೆ ತಲಾ 1000 ರೂಪಾಯಿ ನಗದು, ಪ್ರಮಾಣ ಪತ್ರ, ಟ್ರೋಫಿ ನೀಡಲಾಗುತ್ತದೆ. 11 ರಿಂದ 15ನೇ ಸ್ಥಾನದವರೆಗೆ ಟ್ರೋಫಿ, ಪ್ರಮಾಣ ಪತ್ರ ನೀಡಲಾಗುತ್ತದೆ.
ವಯೋಮಿತಿ ವಿಭಾಗಗಳಲ್ಲಿ ಹುಡುಗರಿಗೆ ಪ್ರಥಮ 10 ಸ್ಥಾನಗಳಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ, ಹುಡುಗಿಯರಿಗೆ ಪ್ರಥಮ 7 ಸ್ಥಾನಗಳಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇಬ್ಬರು ಹಿರಿಯ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ .
ಪಂದ್ಯಕೂಟವನ್ನು.ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.