ಉಡುಪಿ : ಏಪ್ರಿಲ್ 23:ಉಡುಪಿಯ 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಪೊಲೀಸರು ಏಪ್ರಿಲ್ 22ರಂದು ಬಂಧಿಸಿದ್ದಾರೆ
ಬಂದಿತರಿಂದ 40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ MDMA, 10,500 ರೂ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್ ಕವರ್ ಗಳು, 5 ಸಿರಿಂಜ್ಗಳು , Sterile water 5 ml ನ 3 ಪ್ಲಾಸ್ಟಿಕ್ ಸೀಸ, ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.
ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್ಗಳನ್ನು ಹೊಂದಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಕಾಪುವಿನ ಮಂಚಕಲ್ ಅಜರುದ್ದೀನ್, ಮಹಾರಾಷ್ಟದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮತ್ತು ಮಲ್ಪೆಯ ನಾಜೀಲ್ (ಆಶಿಪ್) ಬಂಧಿತ ಆರೋಪಿಗಳು
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.