ಕಾರ್ಕಳ: ಏಪ್ರಿಲ್ 22:ನಿಟ್ಟೆಗುತ್ತು ವಿಶಾಲಿ ಹಾಗೂ ಬೆಳ್ಳಿಪ್ಪಾಡಿ ನೇಮಿರಾಜ್ ರೈ ದಂಪತಿಗಳಿಂದ ನಿಟ್ಟೆಗುತ್ತು ಮೂಲ ನಾಗಬನ ದಲ್ಲಿ ಏಪ್ರಿಲ್ 18 ಶುಕ್ರವಾರ ಅಶ್ಲೇಷಬಲಿ-ನಾಗ ದರ್ಶನ ಸೇವೆಗಳು ನಡೆದು ಭಕ್ತಾದಿಗಳಿಗೆ ಅನ್ನ ಸಂತರ್ಪಣಸೇವೆಯು ನಡೆಯಿತು.
ನಿಟ್ಟೆಗುತ್ತು ಮನೆತನದ ಹಿರಿಯರಾದ ಪ್ರೊ.ರಮಾನಂದ ಶೆಟ್ಟಿ ದಂಪತಿಗಳು,ಗುತ್ತು ಕುಟುಂಬಸ್ಥರು, ಊರಪರವೂರ ಭಕ್ತಾದಿಗಳು ನಾಗ ಸೇವೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿ ಸಂತೃಪ್ತಿಗೊಂಡರು.
ಬಹು ಪುರಾತನ ಕಾಲದ ನಾಗಬನವು ಇದಾಗಿದ್ದು ಬಹುತೇಕ ಮೂಲ ಸ್ವರೂಪದಲ್ಲೇ ಇದ್ದು,ಪ್ರಸಿದ್ದ ನಾಗ ಕ್ಷೇತ್ರವಾಗಿದೆ.