ಉಡುಪಿ: ವಿಪರೀತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ದೈವದ ನೇಮೋತ್ಸವ ಉಡುಪಿ ಜಿಲ್ಲೆಯ ಕಟಪಾಡಿಯ ಏಣಗುಡ್ಡೆ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ನಡೆಯಿತು.ಶ್ರೀ ಬಬ್ಬುಸ್ವಾಮಿ ಹಾಗು ತನಿಮಾನಿಗ ದೈವದ ನೇಮದ ವೇಳೆ ಭಾರೀ ಮಳೆಯಾಗಿದೆ. ಜಲಾವೃತವಾದ ಜಾಗದಲ್ಲೇ ನೇಮೋತ್ಸವ ಮುಂದುವರೆದಿದೆ.
ಮೊಣಕಾಲಿನವರೆಗೂ ನೀರಿದ್ದರು ಕೂಡ ದೈವನರ್ತನ ಸೇವೆ ದೈವದ ನೇಮೋತ್ಸವ ಸಂಪನ್ನ ಗೊಂಡಿದೆ . ಮಳೆಯನ್ನು ಲೆಕ್ಕಿಸದೆ ದೈವ ಕೋಲದಲ್ಲಿ ಭಕ್ತರು ಭಾಗಿಯಾದರು








