ಉಚ್ಚಿಲ :ಏಪ್ರಿಲ್ 10 :ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನೆಲೆಸಿರುವ ಶ್ರೀ ಭದ್ರಕಾಳಿ ಅಮ್ಮನವರಿಗೆ ಸ್ವರ್ಣ ಲೇಪಿತ ಮುಖ ಸಮರ್ಪಣೆಗೊಳ್ಳಲಿದೆ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ರಥೋತ್ಸವದ ಸಲುವಾಗಿ ಇಂದು (10.04.2025)ಸಂಜೆ 4.00 ಗಂಟೆಗೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಹೊರಡಲಿರುವ “ಹೊರೆಕಾಣಿಕೆ” ಮೆರವಣಿಗೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಬಂದು ಭದ್ರಕಾಳಿ ಅಮ್ಮನವರಿಗೆ ಸಮರ್ಪಣೆಗೊಳ್ಳಲಿದೆ.
ದಾನಿಗಳಾದ ಶ್ರೀ ದಿನೇಶ್ ಎರ್ಮಾಳ್,ಶ್ರೀ ಜಯ ಸಿ. ಕೋಟ್ಯಾನ್ ಯುವರಾಜ್ ಮಸ್ಕತ್ ಹಾಗೂ ಶ್ರೀಮತಿ ಶಿಲ್ಪಾ ಶಮಿತ್ ಕುಂದರ್ ಜೊತೆಯಾಗಿ ಸೇವಾ ರೂಪ ದಲ್ಲಿ ಶ್ರೀ ಭದ್ರಕಾಳಿ ಅಮ್ಮನವರ ಸ್ವರ್ಣಲೇಪಿತ ಮುಖ ನೀಡಿರುತ್ತಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ