Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

‘ವಾಸುದೇವ ಕಾಮತ್’ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ..!!

Dhrishya News by Dhrishya News
19/03/2025
in ಸುದ್ದಿಗಳು
0
0
SHARES
20
VIEWS
Share on FacebookShare on Twitter

ಕಾರ್ಕಳ:ಫೆಬ್ರವರಿ 19:ಶ್ರೀ. ಬಿ. ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದುರ್ಗ ತೆಳ್ಳಾರು ಕಾರ್ಕಳ ತಾಲ್ಲೂಕು ಇಲ್ಲಿ ದಿನಾಂಕ: 15.03.2025 ರ ಶನಿವಾರದಂದು ವಕೀಲ ‘ವಾಸುದೇವ ಕಾಮತ್’ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.

ಕ್ರೀಡಾಂಗಣದ ನಿರ್ಮಾಣದ ಸಂಪೂರ್ಣ ದಾನಿಗಳು ಆಗಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಕಮಲಾಕ್ಷ ಕಾಮತ್ ಕಾರ್ಕಳ CA ಇವರು ತಮ್ಮ ಉದ್ಘಾಟನಾ ನುಡಿಗಳೊಂದಿಗೆ ವಿದ್ಯಾರ್ಥಿಗಳಿಗೆ ಸಾಧನೆಗೆ ಬೇಕಾದ ಪರಿಶ್ರಮ, ಆಧ್ಯಾತ್ಮಿಕತೆ, ಗುರು ಹಿರಿಯರು ತಂದೆ ತಾಯಿಗಳ ಮೇಲಿನ ಗೌರವದ ಕುರಿತು ತಿಳಿ ಹೇಳಿದರು. ಕಾರ್ಕಳ ಶಿಕ್ಷಣ ಇಲಾಖೆಯ ಸಂಯೋಜಕರಾದ ಶ್ರೀ ಬಾಲಕೃಷ್ಣ ನಾಯಕ್ ಇವರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೋಗಲಾಡಿಸುವ ಕುರಿತು ತಿಳಿ ಹೇಳಿದರು.

ಜಯಂತಿ ನಗರ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪ್ರೇಮ ರವರು ಮಕ್ಕಳಿಗೆ ಶಾಲಾ ಪರಿಸರದ ಉತ್ತಮ ಅಂಶಗಳ ಬಗ್ಗೆ ತಿಳಿ ಹೇಳಿದರು. ಇನ್ನೋರ್ವ ಅತಿಥಿಗಳಾದ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರೂ, ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಶ್ರೀಮತಿ ಸಾವಿತ್ರಿ ಮನೋಹರದವರು ಮಕ್ಕಳಿಗೆ ಶುಭ ಹಾರೈಕೆಯನ್ನು ತಿಳಿಸಿದರು. ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣಪಯ್ಯ ರವರು ಹತ್ತನೇ ತರಗತಿಯ ಮಕ್ಕಳಿಗೆ ಪೆನ್ನುಗಳನ್ನು ನೀಡಿ ಹಾರೈಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸ್ಮಿತಾ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸುವುದರ ಜೊತೆಗೆ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಕ್ರೀಡಾಂಗಣ ನಿರ್ಮಾಣದ ದಾನಿಗಳಾಗಿರುವ ಶ್ರೀ ಕಮಲಾಕ್ಷ ಕಾಮತ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿಜ್ಞಾನ ಶಿಕ್ಷಕಿ ಯಾದ ಶ್ರೀಮತಿ ಪ್ರಣಿಲಾರವರು ಅಭಿನಂದನ ಪತ್ರವನ್ನು ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಆದರ್ಶ ಜೈನರವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಶೋಭಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಎಸ್‌ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಗಣಿತ ಶಿಕ್ಷಕಿಯಾದ ಶ್ರೀಮತಿ ರೇಖಾ ರವರು ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

Previous Post

ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ 24-25 ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಿ ಶುಭ ಹಾರೈಕೆ..!!

Next Post

ಕಾರ್ಕಳ :ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ :ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

28/06/2026
ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

28/06/2026
ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

28/06/2026
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

28/06/2026

Recent News

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

28/06/2026
ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

28/06/2026
ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

28/06/2026
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

28/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved