Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಕಾರ್ಕಳ :ಅನಧಿಕೃತ ಪತ್ರಕರ್ತರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆ; ಕ್ರಮಕ್ಕೆ ಎಸ್ಪಿಗೆ ದೂರು..!!

Dhrishya News by Dhrishya News
08/03/2025
in ರಾಜ್ಯ/ ರಾಷ್ಟ್ರೀಯ
0
0
SHARES
21
VIEWS
Share on FacebookShare on Twitter

ಕಾರ್ಕಳ:ಮಾರ್ಚ್ 08:ಕಾರ್ಕಳ ವ್ಯಾಪ್ತಿಯಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ಅವರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಮಾ. 8ರಂದು ದೂರು ನೀಡಿದೆ. 

ಕೆಲವೊಂದು ಯೂಟ್ಯೂಬರ್ಸ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರು ತಾವು ಪತ್ರಕರ್ತರು ಎಂದು ಹೇಳಿಕೊಂಡು ಸರಕಾರಿ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿನಿಧಿಗಳ ಬಳಿ ಮಾಹಿತಿ ಪಡೆದು, ವ್ಯವಹಾರಸ್ಥರಿಗೆ ಬೆದರಿಸುವ ತಂತ್ರಗಾರಿಕೆ ನಡೆಯುತ್ತಿದ್ದು, 

ಪತ್ರಕರ್ತರೆಂದು ತಿರುಗಾಡುವ ನಕಲಿ ಪತ್ರಕರ್ತರು, ಯೂಟ್ಯೂಬರ್‍ಸ್‌ಗಳು ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುವವರು ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಬಗ್ಗೆ ಸಂಘಕ್ಕೆ ದೂರು ಬಂದಿರುತ್ತದೆ. 

ಅಲ್ಲದೆ ಆರ್‌ಎನ್‌ಐ ಅಥವಾ ಟ್ರಾಯ್‌ನ ಅಡಿಯಲ್ಲಿ ನೋಂದಾವಣೆಯಾದ ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಅಧಿಕೃತ ಪತ್ರಕರ್ತರಿಗೆ ಮಾತ್ರ ವಾಹನಗಳಲ್ಲಿ ಹಾಗೂ ಗುರುತಿನ ಚೀಟಿಗಳಲ್ಲಿ ಮೀಡಿಯಾ ಎಂಬ ಪದವನ್ನು ಅಳವಡಿಸಬಹುದಾಗಿದೆ. ಆದರೆ ಇಂದು ಯೂಟ್ಯೂಬರ್‍ಸ್ ಎಂಬ ನಕಲಿ ಪತ್ರಕರ್ತರು ಮೀಡಿಯಾ ಸ್ಟಿಕ್ಕರ್‌ನ್ನು ದುರುಪಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಲಾಯಿತು. 

ಈ ಬಗ್ಗೆ ಕಾರ್ಕಳ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಿಗೆ ಪರೀಕ್ಷಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್, ಉಪಾಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಜಿಲ್ಲಾ ಸಮಿತಿ ಸದಸ್ಯರಾದ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಜತೆ ಕಾರ್ಯದರ್ಶಿ ವಾಸುದೇವ ಭಟ್, ಕೋಶಾಧಿಕಾರಿ ಕೆ.ಎಂ. ಖಲೀಲ್, ಸದಸ್ಯರಾದ ರಮಾನಂದ ಅಜೆಕಾರು, ಹರಿಪ್ರಸಾದ್ ನಂದಳಿಕೆ, ಸತೀಶ್ ಶೆಟ್ಟಿ, ಸಂಪತ್ ನಾಯಕ್ ಉಪಸ್ಥಿತರಿದ್ದರು.

Previous Post

ಜನಪರ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿದ ಕೈ: ಉದಯ ಶೆಟ್ಟಿ ಮುನಿಯಾಲು ಶ್ಲಾಘನೆ..!!

Next Post

ನಿಟ್ಟೆ ಬ್ರಹ್ಮ ಶ್ರೀ ಸತ್ಯ ಸಾರಮಣಿ ದೈವಗಳ ನೇಮೋತ್ಸವ ಸಂಪನ್ನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನಿಟ್ಟೆ ಬ್ರಹ್ಮ ಶ್ರೀ ಸತ್ಯ ಸಾರಮಣಿ ದೈವಗಳ ನೇಮೋತ್ಸವ ಸಂಪನ್ನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026

Recent News

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved