ಕಾಪು : ಮಾರ್ಚ್ 02: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಅಮ್ಮನವರ ಗದ್ದುಗೆ ಪ್ರತಿಷ್ಠೆ ಕಾರ್ಯದಲ್ಲಿ ಭಾಗವಹಿಸಿದರು .
ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಹೆಸರಿನಲ್ಲಿ 9,99,999 ರೂ.ಗಳ ಚಿನ್ನದ ಕಲಶ ಸೇವೆ ನೀಡಿದರು. ಕಾಪು ಕ್ಷೇತ್ರದ ವತಿಯಿಂದ ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸನ್ಮಾನ ಮಾಡಿದರು. ಮಾರಿಯಮ್ಮನ ಪ್ರಥಮ ಪ್ರಸಾದ ಡಿಕೆ ಶಿವಕುಮಾರ್ ಅವರಿಗೆ ನೀಡಲಾಯಿತು.
ದೇವಿಯ ಪ್ರತಿಷ್ಠೆಯಾದ ಬಳಿಕ ಮಾರಿಯಮ್ಮನ ಮೊದಲ ಪ್ರಸಾದವನ್ನು ಸ್ವೀಕರಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ.ಎಂದರು