ಮಂಗಳೂರು: ಫೆಬ್ರವರಿ 22:ಕೋಟೆಕಾರ್‌ನ ರಾಷ್ಟ್ರೀಕೃತ ಬ್ಯಾಂಕೊಂದರ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ 8 ಲಕ್ಷ ರೂ. ಗೆದ್ದಲು ಪಾಲಾಗಿದೆ. ಇದಕ್ಕೆ ಬ್ಯಾಂಕಿನ ನಿರ್ವಹಣೆ ಕೊರತೆಯೇ ಕಾರಣ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ
ಆರ್‌ಬಿಐ ನಿಯಮ ಪ್ರಕಾರ ಲಾಕರ್‌ನಲ್ಲಿ ಹಣ ಇರಿಸುವಂತಿಲ್ಲ. ಆದ್ದರಿಂದ ಹಣ ಗೆದ್ದಲು ಪಾಲಾಗಿರುವುದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಹಣ ಕಳೆದುಕೊಂಡವರು ಈ ಸಂಬಂಧ ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದು, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
6 ತಿಂಗಳ ಹಿಂದೆ ಲಾಕರ್‌ನಲ್ಲಿ ಕುಟುಂಬವೊಂದು ಹಣ ಇರಿಸಿತ್ತು. ಈಗ ಅಗತ್ಯ ಉದ್ದೇಶಕ್ಕಾಗಿ ಬಳಸಲು ದುಡ್ಡು ತೆಗೆದುಕೊಂಡು ಬರಲು ಹೋಗಿದ್ದಾಗ ಎಲ್ಲ ಹಣವನ್ನೂ ಗೆದ್ದಲು ಚೂರುಚೂರು ಮಾಡಿದೆ. ಲಾಕರ್ ಮಳೆನೀರಿನಲ್ಲಿ ನೆನೆದ ಸ್ಥಿತಿಯಲ್ಲಿದ್ದು, ದುಡ್ಡು ಸಂಪೂರ್ಣ ಕಪ್ಪಾಗಿ ಹುಡಿ ಹುಡಿಯಾಗಿದೆ.








