ಉಡುಪಿ :ಫೆಬ್ರವರಿ 12: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 18 ವರ್ಷಗಳ ಹಿಂದೆ ನಡೆದ ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ
ಚಿಕ್ಕಮಗಳೂರಿನ ಅಬ್ದುಲ್ ಹಮೀದ್ (48) ಆರೋಪಿ. ನಗರ ಠಾಣೆಯ ಸಿಬಂದಿ ಸಂಜಯ್ ಎಚ್. ಸಿ. ಹಾಗೂ ಹೇಮಂತ್ ಕುಮಾರ್ ಎಂ. ಅವರು ಮಂಡ್ಯ ಜಿಲ್ಲೆಯ ತಾವರೆಗೆರೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಫೆ.25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.