Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಪಡುಬಿದ್ರೆ :ಸರಣಿ ಅಪಘಾತ : ಮಗುಚಿ ಬಿದ್ದ ಶಾಲಾ ವಾಹನ ..!!

Dhrishya News by Dhrishya News
30/01/2025
in ಸುದ್ದಿಗಳು
0
0
SHARES
91
VIEWS
Share on FacebookShare on Twitter

ಪಡುಬಿದ್ರೆ :ಜನವರಿ 30:ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಶಾಲಾ ಬಸ್‌ ಮಗುಚಿ ಬಿದ್ದ ಘಟನೆ ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಸಂದು ದಾಂತಿ ಗರಡಿ ಎದುರು ಬುಧವಾರ ಸಂಜೆ ನಡೆದಿದೆ

ಈ ಸಂದರ್ಭದಲ್ಲಿ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ,ಉಡುಪಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ರಿಟ್ಜ್ ಕಾರೊಂದು ಸಂಜೆಯ ವೇಳೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಿಜಾಪುರ ಮೂಲದ ಮಹಿಳೆ ಮಹಾದೇವಿ ಅವರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ಡಿವೈಡರ್‌ ದಾಟಿದ್ದ ಕಾರು ಮಂಗಳೂರು-ಉಡುಪಿ ಕಡೆ ಸಾಗುವ ಹೆದ್ದಾರಿ ಮಧ್ಯೆ ಪಲ್ಟಿಯಾಗಿತ್ತು.

ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ ಕಾಪು ಚಂದ್ರನಗರ ಕಡೆ ಸಾಗುತ್ತಿದ್ದ ಕ್ರೆಸೆಂಟ್‌ ಇಂಟರ್‌ನ್ಯಾಷನಲ್‌ ಶಾಲಾ ವಾಹನಕ್ಕೆ ಕಾರು ಢಿಕ್ಕಿಯಾಗಿತ್ತು. ಶಾಲಾ ವಾಹನದ ಚಾಲಕ ತತ್‌ಕ್ಷಣ ಬ್ರೇಕ್‌ ಹಾಕಿದ್ದು, ಈ ವೇಳೆಗೆ ನಿಯಂತ್ರಣ ತಪ್ಪಿದ ಶಾಲಾ ವಾಹನ ಡಿವೈಡರ್‌ ದಾಟಿ ಉಡುಪಿ-ಮಂಗಳೂರು ಕಡೆ ಸಾಗುವ ಹೆದ್ದಾರಿಯಲ್ಲಿ ಮುಗುಚಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಇನ್ನೊಂದು ಹ್ಯುಂಡೈ ಅಲ್ಕಜಾರ್‌ ಕಾರೂ ಕೂಡಾ ಎದುರಲ್ಲಿದ್ದ ಶಾಲಾ ವಾಹನದಿಂದಾಗಿ ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ ಮಹಿಳೆಯ ಕೈಗೆ ಗಾಯಗಳಾಗಿವೆ. ಅವರು ಪಡುಬಿದ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಿಟ್ಜ್ ಕಾರಿನ ಚಾಲಕನ ಕಾಲಿಗೆ ತೀವ್ರತರ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ವಾಹನದ ನಿರ್ವಾಹಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಪಡುಬಿದ್ರಿ ಠಾಣಾ ಎಎಸ್‌ಐ ಸುದೇಶ್‌ ಶೆಟ್ಟಿ ಘಟನ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಸಾರ್ವಜನಿಕರು ಸುಗಮ ವಾಹನ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸಿದರು. ಟೋಲ್‌ಗೇಟ್‌ನಲ್ಲಿನ ಕ್ರೇನ್‌ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ.

Previous Post

ಉಡುಪಿ : ಜನವರಿ 31ರಂದು ICICI ಬ್ಯಾಂಕ್ ನಲ್ಲಿ RELATIONSHIP MANAGER ಹುದ್ದೆಗೆ ನೇರ ಸಂದರ್ಶನ ..!!

Next Post

ಉಡುಪಿಯ ವಳಕಾಡು ಶಾಲೆಯಲ್ಲಿ ಜೇನು ಧಾಳಿ : ಶಾಸಕ ಯಶ್ ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿಯ ವಳಕಾಡು ಶಾಲೆಯಲ್ಲಿ ಜೇನು ಧಾಳಿ : ಶಾಸಕ ಯಶ್ ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

06/08/2026
ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

06/08/2026
ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026

Recent News