Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಕಾರ್ಕಳ ರಾಷ್ಟ್ರೀಯ ಹೆದ್ದಾರಿ -169 : ಸಾಣೂರು ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಗೆ ಅಡ್ಡಿ :ಸ್ಥಳೀಯರ ಆಕ್ರೋಶ .!!

Dhrishya News by Dhrishya News
03/01/2025
in मौसम
0
0
SHARES
50
VIEWS
Share on FacebookShare on Twitter

ಕಾರ್ಕಳ : ಡಿಸೆಂಬರ್ 03:ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಪುಲ್ಕೇರಿ ಬೈಪಾಸ್ ನಿಂದ ಪ್ರಾರಂಭವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಪ್ರದೇಶ ಮುರತಂಗಡಿಯನ್ನು ದಾಟಿ ಬೆಳವಾಯಿ ಸಂಪರ್ಕದ ಮಧ್ಯೆ ಇರುವ ಚಿಲಿಂಬಿಗುಡ್ಡ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆಸಲು ಅನುಮತಿ ಪತ್ರ ದೊರೆಯದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯುಂಟಾಗಿದೆ. ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ 

ಕಳೆದ ಎರಡು ವರ್ಷಗಳಿಂದ ಹೆದ್ದಾರಿ ಇಲಾಖೆಯವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿಲ್ಲ.

 ಹೆದ್ದಾರಿ ಇಲಾಖೆ ಇಂಜಿನಿಯರ್ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಕೆಲವು ಮಾಹಿತಿಗಳನ್ನುಕೇಳಿ ಬೆಂಗಳೂರಿನಿಂದ ಫೈಲ್ ಕುಂದಾಪುರ ಅರಣ್ಯ ಇಲಾಖೆಗೆ ಬಂದಿದೆ ಎಂದು ತಿಳಿಸಿರುತ್ತಾರೆ.

ಸುತ್ತಲೂ ಬೆಟ್ಟಗುಡ್ಡ, ಕಾಡು, ಸಣ್ಣ ನೀರಿನ ತೊರೆಗಳನ್ನು ಒಳಗೊಂಡಿರುವ ಸಾಣೂರು ಚಿಲಿಂಬಿ ಪ್ರದೇಶವು ಸಾಣೂರು_ ಮುರತ್ತಂಗಡಿ, ಕಾಂತಾವರ ಪ್ರದೇಶದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿಗೆ ಸೇರಿದ್ದು, ಬೆಳುವಾಯಿ ಪರಿಸರವು ಮಂಗಳೂರು ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. 

 ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರು ಮಂಗಳೂರು ಹಾಗೂ ಉಡುಪಿ ಸಂಸದರು, ಕಾರ್ಕಳ ಮತ್ತು ಮೂಡಬಿದ್ರೆ ಶಾಸಕರು ಅರಣ್ಯ ಇಲಾಖೆಯ ಅನುಮತಿಗಾಗಿ ಈಗಾಗಲೇ ಎರಡು ವರ್ಷ ಕಳೆದಿದ್ದು, ಇನ್ನಾದರೂ ಕೂಡಲೇ ಅನುಮತಿ ಸಿಗುವ ನೆಲೆಯಲ್ಲಿ ಒಟ್ಟಾಗಿ ಪ್ರಯತ್ನ ಮಾಡಿದರೆ ಸಾಣೂರಿನಿಂದ ಮೂಡಬಿದ್ರೆ ಅಲಂಗಾರುವರೆಗೆ ಸುಮಾರು 12 ಕಿಲೋಮೀಟರ್ ಹೆದ್ದಾರಿ ಚತುಷ್ಪಥ ಎಲ್ಲಾ ರೀತಿಯಿಂದಲೂ ಸುಸಜ್ಜಿತವಾಗಿ, ಪ್ರಯಾಣಿಕರ ಮತ್ತು ವಾಹನಗಳ ಉಪಯೋಗಕ್ಕೆ ಸಿಗುತ್ತದೆ.

 ಈಗಾಗಲೇ ಅರೆಬರೆ ಕಾಮಗಾರಿ, ರಸ್ತೆ ಡೈವರ್ಷನ್ಗಳಿಂದ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಪ್ರಯಾಣಿಕರ ಜೀವಕ್ಕೂ ಸಂಚಕಾರ ತರುತ್ತಿದೆ.

ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಅಭಿವೃದ್ಧಿಪರ ಇಚ್ಛಾಶಕ್ತಿಯನ್ನು ತೋರ್ಪಡಿಸಿ, ಅರಣ್ಯ ಇಲಾಖೆಯಿಂದ ಸಾಣೂರು ಚಿಲಿಂಬಿ ಪ್ರದೇಶದ ಹೆದ್ದಾರಿ ಕಾಮಗಾರಿಗೆ ಮುಕ್ತಿಯನ್ನು ದೊರಕಿಸಿದರೆ, ಸಾಣೂರು ಪುಲ್ಕೇರಿ ಬೈಪಾಸ್ ನಿಂದ ಮೂಡಬಿದ್ರೆ ಅಲಂಗಾರು ವರೆಗೆ ಸುಮಾರು 12 ಕಿಲೋಮೀಟರ್ ಬಹುತೇಕ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಪ್ರಯಾಣಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮಗಳಿಗೆ ತಿಳಿಸಿರುತ್ತಾರೆ.

Previous Post

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು : ಜನವರಿ 16 ರಿಂದ 28 ರವರೆಗೆ ಬ್ರಹ್ಮಕಲಶಾಭಿಷೇಕ ಹಾಗೂ ಮಹೋತ್ಸವ.!!

Next Post

ಉಡುಪಿ:ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ:ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಕ್ತರ ಸಹಕಾರದಿಂದ ಪಂಚಮ ವರ್ಷದ ಉಡುಪಿ–ಉಚ್ಚಿಲ ದಸರಾ 2026: ಅದ್ಧೂರಿ ಆಚರಣೆಗೆ ಸಿದ್ಧತೆ

ಭಕ್ತರ ಸಹಕಾರದಿಂದ ಪಂಚಮ ವರ್ಷದ ಉಡುಪಿ–ಉಚ್ಚಿಲ ದಸರಾ 2026: ಅದ್ಧೂರಿ ಆಚರಣೆಗೆ ಸಿದ್ಧತೆ

08/08/2026
‘ಲಕ್ಷೀ ಮಂಜುನಾಥ್ ಕೊಳ ಅವರ ಕರ್ತವ್ಯ ನಿಷ್ಠೆ, ಕಾರ್ಯ ಬದ್ಧತೆ ಅನುಕರಣೀಯ’: ಕುತ್ಯಾರು

‘ಲಕ್ಷೀ ಮಂಜುನಾಥ್ ಕೊಳ ಅವರ ಕರ್ತವ್ಯ ನಿಷ್ಠೆ, ಕಾರ್ಯ ಬದ್ಧತೆ ಅನುಕರಣೀಯ’: ಕುತ್ಯಾರು

08/08/2026
ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಆಗಸ್ಟ್ 10ರಂದು ವಿಶೇಷ ತುಪ್ಪದ ಅಪ್ಪ ಸೇವೆ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಆಗಸ್ಟ್ 10ರಂದು ವಿಶೇಷ ತುಪ್ಪದ ಅಪ್ಪ ಸೇವೆ

08/08/2026
ಶ್ರೀ. ಪ್ರಮೋದ್ ಮಧ್ವರಾಜ್ ಅವರಿಂದ ರುಡ್ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಶ್ರೀ. ಪ್ರಮೋದ್ ಮಧ್ವರಾಜ್ ಅವರಿಂದ ರುಡ್ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

08/08/2026

Recent News