Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟ ಯೋಜನೆ ಆರಂಭ; ಗೋಧಿಹಿಟ್ಟು ಮತ್ತು ಅಕ್ಕಿ ಸಬ್ಸಿಡಿ ದರದಲ್ಲಿ ಮಾರಾಟ..!!

Dhrishya News by Dhrishya News
06/11/2024
in ಸುದ್ದಿಗಳು
0
0
SHARES
11
VIEWS
Share on FacebookShare on Twitter

ನವದೆಹಲಿ, ನವೆಂಬರ್ 06:  ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಚಿಲ್ಲರೆ ಮಾರಾಟ ಯೋಜನೆ ಕೈಗೊಂಡಿದೆ. 2023ರ ಅಕ್ಟೋಬರ್​ನಲ್ಲಿ ಮೊದಲ ಹಂತದ ರೀಟೇಲ್ ಸೇಲ್ಸ್ ಯೋಜನೆ ಆರಂಭವಾಗಿತ್ತು. ಈಗ ಎರಡನೇ ಹಂತದ ಸಬ್ಸಿಡಿ ಮಾರಾಟ ಆರಂಭಗೊಂಡಿದೆ. ಗೋಧಿ ಹಿಟ್ಟು, ಅಕ್ಕಿ ಮೊದಲಾದ ಆಹಾರವಸ್ತುಗಳನ್ನು ಈ ಎರಡನೇ ಹಂತದಲ್ಲಿ ಸರ್ಕಾರ ಮಾರುತ್ತಿದೆ. ಕಿಲೋಗೆ 30 ರೂನಂತೆ ಐದು ಕಿಲೋ ಗೋಧಿ ಹಿಟ್ಟಿನ ಪ್ಯಾಕೆಟ್​ಗಳು ಖರೀದಿಗೆ ಲಭ್ಯ ಇವೆ. ಹಾಗೆಯೇ, ಕಿಲೋಗೆ 34 ರೂಗಳಂತೆ 10 ಕಿಲೋ ಅಕ್ಕಿ ಚೀಲ ವಿತರಿಸಲಾಗುತ್ತಿದೆ.

ಸರ್ಕಾರದ ವಿವಿಧ ಆಹಾರ ಮಾರಾಟ ಕೇಂದ್ರಗಳ ಮೂಲಕ ಇವುಗಳನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ‘ಗ್ರಾಹಕರಿಗೆ ಅನುಕೂಲ ಮಾಡಲು ಕೈಗೊಂಡಿರುವ ತಾತ್ಕಾಲಿಕ ಯೋಜನೆ ಇದು,’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಈ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟ ಯೋಜನೆಯಲ್ಲಿ ಕೇಂದ್ರ ಆಹಾರ ನಿಗಮದಿಂದ 3.69 ಲಕ್ಷ ಟನ್ ಗೋಧಿ ಮತ್ತು 2.91 ಲಕ್ಷ ಟನ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇವುಗಳು ಖಾಲಿಯಾಗುವವರೆಗೂ ಸಬ್ಸಿಡಿ ದರದಲ್ಲಿ ಮಾರಾಟ ಮುಂದುವರಿಯಲಿದೆ. ಅದಾದ ಬಳಿಕ ಅಗತ್ಯ ಎನಿಸಿದಲ್ಲಿ ಮತ್ತಷ್ಟು ಗೋದಿ ಮತ್ತು ಅಕ್ಕಿಯನ್ನು ಸೇರಿಸಬಹುದು.

2023ರ ಅಕ್ಟೋಬರ್​ನಿಂದ ಹಿಡಿದು 2024ರ ಜೂನ್​ವರೆಗೆ ಸರ್ಕಾರವು ಭಾರತ್ ಬ್ರ್ಯಾಂಡ್​ನಲ್ಲಿ ಮೊದಲ ಹಂತದ ಸಬ್ಸಿಡಿ ಸೇಲ್ಸ್ ಕೈಗೊಂಡಿತ್ತು. ಆಗ ಗೋಧಿಹಿಟ್ಟನ್ನು ಕಿಲೋಗೆ 27.5 ರೂ ಮತ್ತು ಅಕ್ಕಿಯನ್ನು 29 ರೂಗೆ ಮಾರಾಟ ಮಾಡಿತ್ತು. ಒಂಬತ್ತು ತಿಂಗಳಲ್ಲಿ 15.20 ಲಕ್ಷ ಟನ್​ನ ಗೋಧಿ ಹಿಟ್ಟು, 14.58 ಲಕ್ಷ ಟನ್​ನ ಅಕ್ಕಿಯನ್ನು ವಿತರಿಸಲಾಗಿತ್ತು.

ಈಗ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಸೇಲ್ಸ್​ನಲ್ಲಿ ಗೋಧಿ ಹಿಟ್ಟು, ಅಕ್ಕಿ ಜೊತೆಗೆ ಕಡಲೆಬೇಳೆ, ಹೆಸರುಬೇಳೆಯ ಮಾರಾಟವೂ ಆಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 55ರಿಂದ 60 ರೂ ಇದೆ. ಗೋಧಿ ಹಿಟ್ಟು 45-50 ರೂ, ಕಡಲೆಬೇಳೆ 90-100 ರೂ, ಹೆಸರು ಬೇಳೆ 120-130 ರೂ ಇದೆ. ಸರ್ಕಾರದ ಸಬ್ಸಿಡಿಯಲ್ಲಿ ಅಕ್ಕಿ 34 ರೂ, ಗೋಧಿಹಿಟ್ಟು 30 ರೂ, ಕಡಲೆಬೇಳೆ 70 ರೂ, ಮತ್ತು ಹೆಸರುಬೇಳೆ 107 ರೂಗೆ ಮಾರಾಟವಾಗಲಿದೆ.

Previous Post

ಸಂಸತ್ತಿನ ‘ಚಳಿಗಾಲದ ಅಧಿವೇಶನ ನವೆಂಬರ್ 25ರಿಂದ ಆರಂಭ..!!

Next Post

ಪಿಂಚಣಿಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ ನವೆಂಬರ್ 7 ರಂದು ತಾಲೂಕು ಮಟ್ಟದ ಪಿಂಚಣಿ ಅದಾಲತ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಪಿಂಚಣಿಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ ನವೆಂಬರ್ 7 ರಂದು ತಾಲೂಕು ಮಟ್ಟದ ಪಿಂಚಣಿ ಅದಾಲತ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ವಿಶೇಷ ತುಪ್ಪದ ಅಪ್ಪ ಸೇವೆ ಸಂಪನ್ನ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ವಿಶೇಷ ತುಪ್ಪದ ಅಪ್ಪ ಸೇವೆ ಸಂಪನ್ನ

10/08/2026
ಉಡುಪಿ ಜಿಲ್ಲಾಧಿಕಾರಿಯವರಿಂದ ರುಡ್ಸೆಟ್ ಸಂಸ್ಥೆ ಬ್ರಹ್ಮಾವರದಲ್ಲಿ ಅಗರಬತ್ತಿ ತಯಾರಿಕೆ ತರಬೇತಿ ವೀಕ್ಷಣೆ

ಉಡುಪಿ ಜಿಲ್ಲಾಧಿಕಾರಿಯವರಿಂದ ರುಡ್ಸೆಟ್ ಸಂಸ್ಥೆ ಬ್ರಹ್ಮಾವರದಲ್ಲಿ ಅಗರಬತ್ತಿ ತಯಾರಿಕೆ ತರಬೇತಿ ವೀಕ್ಷಣೆ

10/08/2026
ಉಡುಪಿ: ರೈತ–ಕಾರ್ಮಿಕ–ಕೂಲಿಕಾರರ ಜೈಲ್ ಭರೋ ಹೋರಾಟ :ಪ್ರತಿಭಟನಾಕಾರರ ಬಂಧನ–ಬಿಡುಗಡೆ..!

ಉಡುಪಿ: ರೈತ–ಕಾರ್ಮಿಕ–ಕೂಲಿಕಾರರ ಜೈಲ್ ಭರೋ ಹೋರಾಟ :ಪ್ರತಿಭಟನಾಕಾರರ ಬಂಧನ–ಬಿಡುಗಡೆ..!

10/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ‘ವೃಕ್ಷ ಸಂವರ್ಧನಾ’ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ‘ವೃಕ್ಷ ಸಂವರ್ಧನಾ’ ಕಾರ್ಯಕ್ರಮ

10/08/2026

Recent News