ಕಾರ್ಕಳ : ದಿನಾಂಕ 09.08.2026 ರ ಪೂರ್ವಾಹ್ನ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ರೊ.ಡಾ.ಭರತೇಶ್ ಆದಿರಾಜ್ ರವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆಯವರ ನೇತೃತ್ವದಲ್ಲಿ ಕಾರ್ಕಳದ ಬಂಗ್ಲೆ ಗುಡ್ಡೆ ಸಮೀಪದ ಕಜೆ ಪರಿಸರದಲ್ಲಿರುವ ‘ರೋಟರಿ ವನ’ ದಲ್ಲಿ ” ಧನ್ಯವಾದ್ – ವೃಕ್ಷ ಸಂವರ್ಧನೆ ಹಾಗೂ ಸಂರಕ್ಷಣೆ ಯೋಜನೆ” ಯಡಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರಾದ ರೊ. ಉಪೇಂದ್ರ ವಾಗ್ಲೆ , ರೊ. ಪ್ರಕಾಶ್ ವಾಗ್ಲೆ, ರೊ. ಸೋಮಶೇಖರ್ ಹಾಗೂ ರೊ. ಸುಜಯ್ ಉಪಸ್ಥಿತರಿದ್ದು ಸಂಪೂರ್ಣ ಸಹಕಾರವನ್ನಿತ್ತರು. ರೊ. ಸುಜಯ್ ರವರು ಅಗತ್ಯ ಕಾಮಗಾರಿ ವ್ಯವಸ್ಥೆಯನ್ನು ಒದಗಿಸಿದರು.







