Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶ್ರೀ ವಿದ್ಯೇಶ ತೀರ್ಥರಿಗೆ ಸಪ್ತತಿ ಅಭಿನಂದನೋತ್ಸವ ಭಾಗವತ ಭಾಸ್ಕರ ಪ್ರಶಸ್ತಿ..!!

ತುಲಾಭಾರ , ಸಾಮೂಹಿಕ ಗಾಯನ , ಸ್ವರ್ಣ ರಥೋತ್ಸವ ವಿಶೇಷ 

Dhrishya News by Dhrishya News
14/09/2024
in ಸುದ್ದಿಗಳು
0
0
SHARES
23
VIEWS
Share on FacebookShare on Twitter

ಉಡುಪಿ :ಸೆಪ್ಟೆಂಬರ್ 14:37 ವರ್ಷಗಳ ಬಳಿಕ ಉಡುಪಿಯಲ್ಲಿ ತಮ್ಮ‌45 ನೇ ಚಾತುರ್ಮಾಸ್ಯ ವ್ರತವನ್ನು ಅತ್ಯಂತ ಅಭೂತಪೂರ್ವಬಂತೆ ನಡೆಸಿ ಸಂಪನ್ನಗೊಳಿಸುತ್ತಿರುವ ಹಾಗೂ 70 ನೇ ಜನ್ಮ ವರ್ಧಂತಿಯನ್ನು ಕಾಣುತ್ತಿರುವ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ನೇತೃತ್ವದಲ್ಲಿ ಅಭಿನಂದನೋತ್ಸವ ವು ಶುಕ್ರವಾರ ಸಂಜೆ ಅತ್ಯಂತ ವೈಭವದಿಂದ ಯಶಸ್ವಿಯಾಗಿ ನೆರವೇರಿತು .

ಉಡುಪಿ ರಥಬೀದಿಯಲ್ಲಿ ಶ್ರೀ ಭಂಡಾರಕೇರಿ ಮಠದ ಪಟ್ಟದ ದೇವರಾದ ಶ್ರೀ ಕೋದಂಡರಾಮದೇವರ ಸ್ವರ್ಣ ರಥೋತ್ಸವ ನೆರವೇರಿದ ಬಳಿಕ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ ನೂರಾರು ಮಾತೆಯರಿಂದ ಶ್ರೀ ವಿದ್ಯೇಶ ತೀರ್ಥರು ರಚಿಸಿದ ಹರಿಕೀರ್ತನೆಗಳ ಸಾಮೂಹಿಕ ಗಾಯನ , ವೇದ ವಾದ್ಯ ಮಂತ್ರ ಘೋಷಗಳ ಹಿನ್ನೆಲೆಯಲ್ಲಿ ನಾಣ್ಯಗಳಿಂದ ಶ್ರೀಗಳಿಗೆ ಸಾಲಂಕೃತ ತಕ್ಕಡಿಯಲ್ಲಿ ತುಲಾಭಾರ , ಮಂಗಳಾರತಿಗೈದ ಬಳಿಕ ಯಕ್ಷಕಿರೀಟಾಲಂಕೃತ ಸಿಂಹಾಸನದಲ್ಲಿ ಕುಳ್ಳಿರಿಸಿ ಶಾಲು ಹಾರ ಪುಷ್ಪಕಿರೀಟ ಧಾರಣ , ಪುಷ್ಪಾಭಿಷೇಕ , ಬೃಹತ್ ಕಡಗೋಲು , ನಿಧಿ , ಫಲವಸ್ತು ಸಹಿತ ಶ್ರೀ ಭಾಗವತ ಭಾಸ್ಕರ ಬಿರುದು ಹೊತ್ತ ಮಾನಪತ್ರ ದೊಂದಿಗೃ ಶ್ರೀ ಪುತ್ತಿಗೆ ಉಭಯಶ್ರೀಗಳು ಅಭಿನಂದನೆ ಅರ್ಪಿಸಿದರು.

ಬಳಿಕ ಸಂದೇಶ ನೀಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು , ಶ್ರೀ ವಿದ್ಯೇಶತೀರ್ಥರು ಕಠಿಣ ಯತಿಧರ್ಮ ಪಾಲನೆ ,ಶ್ರೀ ರಾಮದೇವರ ನಿತ್ಯೋಪಾಸನೆ ,ಅಖಂಡ ಅಧ್ಯಯನ , ವೇದವ್ಯಾಖ್ಯಾನ‌, ಹರಿಕೀರ್ತನೆಗಳ ರಚನೆ , ವಿದ್ವತ್ ಪೋಷಣೆ , ನಿರಂತರ ಭಾಗವತ ಪ್ರವಚನ ,ಮನೆಮನೆಗಳಲ್ಲಿ ಭಾಗವತ ಅಭಿಯಾನವೇ ಮೊದಲಾದ ಕೈಂಕರ್ಯ ವಿಶೇಷಗಳಿಂದ ಅಮಲ ಭಕ್ತಿ , ಸ್ತುತಿ , ಶ್ರುತಿ , ಶಕ್ತಿ , ದ್ಯುತಿ , ಸ್ಫೂರ್ತಿ , ಯುಕ್ತಿ ಹೀಗೆ ಸಪ್ತ ‘ ತಿ’ ‘ ಗಳ ಸಂಗಮ ಸ್ವರೂಪರೆನಿಸಿ ಸಾರ್ಥಕ ಜೀವನದ ಎಪ್ಪತ್ತನ್ನು ಪೊರೈಸುತ್ತಿರುವ ಯತಿ ವಿಶಿಷ್ಟರಾಗಿದ್ದಾರೆ ಎಂದು ಬಣ್ಣಿಸಿದರಲ್ಲದೇ , ಅವರೊಂದಿಗೆ ತಾವು ಸಹಪಾಠಿಗಳಾಗಿದ್ದ ದಿನಗಳನ್ನು ಸ್ಮರಿಸಿಕೊಂಡು ತಮ್ಮ ಪರ್ಯಾಯಕಾಲದಲ್ಲಿ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ನಡೆಸಿದ್ದಕ್ಕಾಗಿ ವಿಶೇಷವಾಗಿ ಅಭಿನಂದಿಸಿದರು . ಪ್ರಸ್ತುತ ಕಾಲಘಟ್ಟದಲ್ಲಿ ನೂರಾರು ಹರಿಕೀರ್ತನೆಗಳನ್ನು ರಚಿಸಿ ತೀರಾ ಅಪರೂಪದ ಕೀರ್ತನಕಾರರಾಗಿರುವ ಅವರು ಶ್ರೀ ವ್ಯಾಸರಾಜರು , ಕನಕ ಪುರಂದರರೇ ಮೊದಲಾದ ಹರಿದಾಸರ ಸಾಲಿಗೆ ಸೇರಿ ಶ್ರೀ ವಿದ್ಯೇಶವಿಠಲದಾಸರಾಗಿದ್ದಾರೆ ಎಂದು ಪ್ರಶಂಶಿಸಿದರು . 

ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು .‌ಶ್ರೀ ವಿದ್ಯೇಶ ತೀರ್ಥರು ತಮ್ಮ ಸಂದೇಶಸಲ್ಲಿ ಭಗವಂತನೊಲುಮೆಗೆ ನಿಷ್ಕಲ್ಮಶವಾದ ಭಕ್ತಿಯೊಂದೇ ಪರಮಸಾಧನವೆಂದು ತಿಳಿಸಿ , ಉಡುಪಿಯಲ್ಲಿ ಈ ಬಾರಿಯ ಚಾತುರ್ಮಾಸ್ಯ ನಡೆಸಲು ಪ್ರೇರೇಪಿಸಿದ ಪುತ್ತಿಗೆ ಶ್ರೀಗಳನ್ನು ಅಭಿನಂದಿಸಿದರು .

ಹುಬ್ಬಳ್ಳಿಯ ಉದ್ಯಮಿ ಶ್ರೀಕಾಂತ ಕೆಮ್ತೂರು ಶುಭಾಂಸನೆಗೈದರು , ವಿದ್ವಾನ್ ಷಣ್ಮುಖ ಹೆಬ್ಬಾರ್ ಅಭಿನಂದನ ಪತ್ರ ವಾಚಿಸಿದರು . 

ಮಠದ ದಿವಾನರಾದ ಮುರಳೀಧರ ಆಚಾರ್ಯ ನಾಗರಾಜ ಆಚಾರ್ಯ ಪ್ರಸನ್ನಾಚಾರ್ಯ , ವಿದ್ವಾಂಸರುಗಳಾದ ರಾಮನಾಥಾಚಾರ್ಯ ವೇದ ವ್ಯಾಸ ಪುರಾಣಿಕ ಮೊದಲಾದವರು ಉಪಸ್ಥಿತರಿದ್ದರು .

ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ‌ನಿರೂಪಿಸಿದರು . ಅಮೇರಿಕಾದ ಭಕ್ತೆ ಶುಭಾ ಶೇಷಗಿರಿ ಪ್ರಾರ್ಥನಾಗೀತೆ ಹಾಡಿದರು .

ರಮೇಶ ಭಟ್ , ರವೀಂದ್ರ ಆಚಾರ್ಯ, ಬೈಲೂರು ಜಯರಾಮ ಆಚಾರ್ಯ, ರಾಜೇಶ ಉಪಾಧ್ಯ , ಮಹಿತೋಶ ಆಚಾರ್ಯ , ರಾಮ‌ಕೊಡಂಚ ಮೊದಲಾದವರು ಸಹಕರಿಸಿದರು . 

ವಿದುಷಿ ಶುಭಾ ಸಂತೋಷ್ , ಉಷಾ ಹೆಬ್ಬಾರ್ , ವೀಣಾ ಶಾನಭೋಗ್ ಮೊದಲಾದವರು ಸಾಮೂಹಿಕ ಶ್ರೀವಿದ್ಯೇಶನಾದ ನೀರಾಜನ ದ ನಿರ್ದೇಶನಗೈದರು .

Previous Post

ಉಡುಪಿ -ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ : ಅಪ್ರಾಪ್ತ ಬಾಲಕ ಬಾಲಕಿ ವಶಕ್ಕೆ..!!

Next Post

ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗತನು ತರ್ಪಣ ಮಂಡಲ ಸೇವೆ ಸಂಪನ್ನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗತನು ತರ್ಪಣ ಮಂಡಲ ಸೇವೆ ಸಂಪನ್ನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

02/10/2026
ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

02/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026

Recent News

imunify-bot-check