Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ :ಅನರ್ಹ ಪಡಿತರ ಚೀಟಿಯನ್ನು ಹಿಂದಿರುಗಿಸಲು ಸೂಚನೆ : ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ..!!

Dhrishya News by Dhrishya News
13/09/2024
in ಸುದ್ದಿಗಳು
0
0
SHARES
37
VIEWS
Share on FacebookShare on Twitter

ಉಡುಪಿ:ಸೆಪ್ಟೆಂಬರ್ 13: ಜಿಲ್ಲೆಯಲ್ಲಿ ವೇತನವನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮAಡಳಿಗಳು/ ನಿಗಮಗಳು/ ಸ್ವಾಯತ್ತತೆ ಸಂಸ್ಥೆಗಳು ಇತ್ಯಾದಿ ಒಳಗೊಂಡAತೆ ಆದಾಯ ತೆರಿಗೆ/ ಸೇವಾತೆರಿಗೆ/ ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು, ಗ್ರಾಮೀಣ ಭಾಗದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು ಹಾಗೂ 1.20 ಲಕ್ಷ ರೂ.ಗಳಿಗಿಂತಲೂ ಹೆಚ್ಚು ವಾರ್ಷಿಕ ಆದಾಯ ಇರುವ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಪಡೆಯಲು (ಬಿ.ಪಿ.ಎಲ್) ಅರ್ಹರಿರುವುದಿಲ್ಲ.

ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿ ಹೊಂದಿರುವ ಸಾರ್ವಜನಿಕರು ತಕ್ಷಣವೇ ತಾಲೂಕಿನ ತಹಶೀಲ್ದಾರರ ಕಛೇರಿಗೆ ಪಡಿತರ ಚೀಟಿಯನ್ನು ಒಪ್ಪಿಸಿ ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿ ಪಡೆಯಬೇಕು. ಜಿಲ್ಲಾ ಮಟ್ಟದಲ್ಲಿ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲು ತಪಾಸಣಾ ತಂಡವನ್ನು ರಚಿಸಲಾಗುತ್ತಿದ್ದು, ತಪಾಸಣಾ ಸಮಯದಲ್ಲಿ ಅನರ್ಹರು ಎಂದು ಕಂಡು ಬಂದಲ್ಲಿ ಅವರು ಪಡೆದಿರುವ ಆಹಾರಧಾನ್ಯಕ್ಕೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಸೂಲಾತಿ ಮಾಡುವುದರೊಂದಿಗೆ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಕರ್ನಾಟಕ ಅನಧಿಕೃತ ಪಡಿತರ ಚೀಟಿ (Prevention of Unauthorised Possesion of Rations Cards) ಆದೇಶ 1977ರಡಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post

ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪಿ.ಯು. ಕಾಲೇಜು ಪ್ರಾಂಶುಪಾಲರ ಸಂಘದ ಉದ್ಘಾಟನೆ..!!

Next Post

ಉಡುಪಿ:ಬನ್ನಂಜೆಯ ಯುವಕ ನಾಪತ್ತೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ:ಬನ್ನಂಜೆಯ ಯುವಕ ನಾಪತ್ತೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿಶ್ವ ಆರೋಗ್ಯ ದಿನ 2026 ರ ಪ್ರಯುಕ್ತ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳು

ವಿಶ್ವ ಆರೋಗ್ಯ ದಿನ 2026 ರ ಪ್ರಯುಕ್ತ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳು

27/03/2026
ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

27/03/2026
ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

27/03/2026
1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

27/03/2026

Recent News

ವಿಶ್ವ ಆರೋಗ್ಯ ದಿನ 2026 ರ ಪ್ರಯುಕ್ತ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳು

ವಿಶ್ವ ಆರೋಗ್ಯ ದಿನ 2026 ರ ಪ್ರಯುಕ್ತ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳು

27/03/2026
ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

27/03/2026
ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

27/03/2026
1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

27/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved