Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇಂದಿನಿಂದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಒಂದು ತಿಂಗಳ ಕಾಲ ವೈಭವದ  “ಶ್ರೀ ಕೃಷ್ಣ ಮಾಸೋತ್ಸವ”  ಕೃಷ್ಣ ಜನ್ಮಾಷ್ಟಮಿ ಸಂಭ್ರಮ..!!

Dhrishya News by Dhrishya News
01/08/2024
in ಸುದ್ದಿಗಳು
0
0
SHARES
25
VIEWS
Share on FacebookShare on Twitter

ಉಡುಪಿ :ಆಗಸ್ಟ್ 01: ಇಂದಿನಿಂದ ಒಂದು ತಿಂಗಳ ಕಾಲ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು  ಶ್ರೀ ಕೃಷ್ಣ ಮಾಸೋತ್ಸವವವಾಗಿ ಆಚರಿಸಲು ಉಡುಪಿ ಕೃಷ್ಣ ಮಠ ನಿರ್ಧರಿಸಿದೆ.ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಬಹಳ ವಿಜೃಂಭಣೆಯಿಂದ ನಡೆಯಲಿದೆ

ಈ ಬಾರಿ ಕೇವಲ ಎರಡು ದಿನಗಳಲ್ಲದೇ ಆಗಸ್ಟ್​ 1 ರಿಂದ ಸೆಪ್ಟೆಂಬರ್​ 1ರವರೆಗೆ ಒಂದು ತಿಂಗಳ ಕಾಲ ಶ್ರೀ ಕೃಷ್ಣ ಲೀಲೋತ್ಸವವಾಗಿ ಸಾಂಪ್ರದಾಯಿಕ ಮತ್ತು ವೈಭವ ಪೂರ್ಣವಾಗಿ ‘ಶ್ರೀ ಕೃಷ್ಣ ಮಾಸೋತ್ಸವ’ ಎಂದು ವಿಶಿಷ್ಠ ರೀತಿಯಲ್ಲಿ ಆಚರಿಸಲು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದಾರೆ

ಇಂದು (ಆ.1) ಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರ ಸಂಸ್ಮರಣೆಯೊಂದಿಗೆ ಶ್ರೀ ಕೃಷ್ಣಮಾಸೋತ್ಸವ ಆರಂಭವಾಗಲಿದೆ. ಪ್ರತಿ ದಿನವೂ ವಿವಿಧ ಕಾರ್ಯಕ್ರಮಗಳಾದ ರಂಗೋಲಿ ಸ್ಪರ್ಧೆ, ಮುದ್ದುಕೃಷ್ಣ, ಸೇರಿದಂತೆ ವಿವಿಧ ಸ್ಪರ್ಧೆಗಳು ಇರಲಿವೆ” 

ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಲಡ್ದೋತ್ಸವ, ಸಾಮೂಹಿಕ ಡೋಲೋತ್ಸವ, ಕ್ರೀಡೋತ್ಸವ ಹಾಗೂ ಗೀತೋತ್ಸವ ನಡೆಯಲಿದೆ. ಕೃಷ್ಣಜನ್ಮಾಷ್ಟಮಿ ಎಂದರೆ ಲಡ್ಡು ಉಂಡಿ, ಚಕ್ಕುಲಿಗಳು ಪ್ರಮುಖವಾಗಿರುತ್ತವೆ. ಲಡ್ಡು ಮಾಡಲು ಉತ್ತೇಜನ ನೀಡುವುದು ಮತ್ತು 108 ಬಗೆಯ ಲಡ್ಡುಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಗುವುದು. ಡೋಲೋತ್ಸವದಲ್ಲಿ ತೊಟ್ಟಿಲೋತ್ಸವ ಇತ್ಯಾದಿಗಳು ವೈಭವದಿಂದ ನಡೆಯಲಿವೆ. ಕ್ರೀಡೋತ್ಸವದಲ್ಲಿ ಜನಪದ ಕ್ರೀಡೆಗಳು, ಹುಲಿಕುಣಿತ, ವಿವಿಧ ಸ್ಪರ್ಧೆಗಳು ನಡೆಯಲಿವೆ.

ಗೀತೋತ್ಸವದಲ್ಲಿ ಭಗವದ್ಗೀತೆಯ ಪಠನ ಸಹಿತವಾಗಿ ಕೋಟಿಗೀತ ಲೇಖನ ಯಜ್ಞ, ಭಗವದ್ಗೀತೆ ಸಾಮೂಹಿಕ ಗಾಯನ ಇತ್ಯಾದಿ ನಿರಂತರವಾಗಿ ನಡೆಯಲಿವೆ.”

 ಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಶ್ರೀ ಕೃಷ್ಣಮಠದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ. ರಾಜಾಂಗಣ ಹಾಗೂ ಗೀತಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ರಾಜಾಂಗಣದಲ್ಲಿ ಶ್ರೀ ಕೃಷ್ಣಮಾಸೋತ್ಸವ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶ ಶ್ರೀ ವಿದ್ವೇಶತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ” 

Previous Post

ವಯನಾಡ್ ಭೂ ಕುಸಿತ ದುರಂತ : ಮೃತರ ಸಂಖ್ಯೆ 254ಕ್ಕೆ ಏರಿಕೆ.192 ಮಂದಿ ನಾಪತ್ತೆ,1,592 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ..!!.

Next Post

ರೇಕಿ” -ಔಷಧವನ್ನ ನೀಡದೆ ರೋಗ ಕಡಿಮೆ ಮಾಡುವ ಒಂದು ಅದ್ಭುತ ಚಿಕಿತ್ಸಾ ವಿಧಾನ:ಏನಿದು ರೇಖಿ ಹೀಲಿಂಗ್? ಅಧ್ಯಾತ್ಮಿಕ ಥೆರಪಿಯ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ 

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ರೇಕಿ" -ಔಷಧವನ್ನ ನೀಡದೆ ರೋಗ ಕಡಿಮೆ ಮಾಡುವ ಒಂದು ಅದ್ಭುತ ಚಿಕಿತ್ಸಾ ವಿಧಾನ:ಏನಿದು ರೇಖಿ ಹೀಲಿಂಗ್? ಅಧ್ಯಾತ್ಮಿಕ ಥೆರಪಿಯ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ 

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026
ಶ್ರೀ ಕೃಷ್ಣ ಮಠದಲ್ಲಿ ವೈಭವದ ರಾಮೋತ್ಸವ: ಋಗ್ವೇದ ಸಂಹಿತಾ ಯಾಗಕ್ಕೆ ಶುಭಾರಂಭ…!

ಶ್ರೀ ಕೃಷ್ಣ ಮಠದಲ್ಲಿ ವೈಭವದ ರಾಮೋತ್ಸವ: ಋಗ್ವೇದ ಸಂಹಿತಾ ಯಾಗಕ್ಕೆ ಶುಭಾರಂಭ…!

20/03/2026

Recent News

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026
ಶ್ರೀ ಕೃಷ್ಣ ಮಠದಲ್ಲಿ ವೈಭವದ ರಾಮೋತ್ಸವ: ಋಗ್ವೇದ ಸಂಹಿತಾ ಯಾಗಕ್ಕೆ ಶುಭಾರಂಭ…!

ಶ್ರೀ ಕೃಷ್ಣ ಮಠದಲ್ಲಿ ವೈಭವದ ರಾಮೋತ್ಸವ: ಋಗ್ವೇದ ಸಂಹಿತಾ ಯಾಗಕ್ಕೆ ಶುಭಾರಂಭ…!

20/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved