Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲ :ಮಾಹೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ವಾಸಮಾರ್ಗ ನಿಭಾವಣೆಯ ಕಾರ್ಯಾಗಾರ..!!

Dhrishya News by Dhrishya News
03/07/2024
in ಸುದ್ದಿಗಳು
0
0
SHARES
34
VIEWS
Share on FacebookShare on Twitter

ಮಣಿಪಾಲ, 03, ಜುಲೈ 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನಲ್ಲಿ ಸುಧಾರಿತ ವರ್ಣಪ್ರಭಾ ಮಾದರಿ [ಅಡ್ವಾನ್ಸ್‌ಡ್‌ ಆರೋರ ಮೊನೆಕ್ವಿನ್‌-advanced Aurora mannequin] ಯನ್ನು ಬಳಸಿ ‘ಸಮರ್ಪಕ ಶ್ವಾಸಮಾರ್ಗ ನಿಭಾವಣೆ’ [ಕಾಂಪ್ರಿಹೆನ್ಸಿವ್‌ ಏರ್‌ವೇ ಮೆನೇಜ್‌ಮೆಂಟ್‌] ಮಾಡುವ ಕುರಿತಾದ ವಿಶಿಷ್ಟ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕೆಎಂಸಿಯ ಡೀನ್‌ ಮತ್ತು ಪ್ರಾಧ್ಯಾಪಕರಾದ ಡಾ. ಪದ್ಮರಾಜ ಹೆಗ್ಡೆ ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ‘ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಶುಶ್ರೂಷೆಯ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಬಗ್ಗೆ ತರಬೇತಿಯ ಅಗತ್ಯತೆಯನ್ನು ಒತ್ತಿ ಹೇಳಿದರು. ನವತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಕುರಿತು ಸ್ನಾತಕೋತ್ತರ ಪದವೀಧರರನ್ನು ತರಬೇತಿಗೊಳಿಸಿ ಸ್ವಾಸ್ಥ್ಯಪೂರ್ಣ ಸಮಾಜ ಮತ್ತು ಸುಸ್ಥಿರ ಭವಿಷ್ಯದೊಂದಿಗೆ ರಾಷ್ಟ್ರವನ್ನು ಕಟ್ಟುವಲ್ಲಿ ಕೊಡುಗೆ ನೀಡಬೇಕು’ ಎಂದು ಅವರು ಹೇಳಿದರು. 

ಮಣಿಪಾಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ಡೀನ್‌ ಡಾ. ಜುಡಿತ್‌ ಎ. ನೊರೊನ್ಹಾ ಅವರು ಮಾತನಾಡಿ, ‘ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ತರಬೇತಿಗೊಳಿಸುವ ಪ್ರಸ್ತುತ ಕಾರ್ಯಾಗಾರವು ಹೆಚ್ಚು ಅರ್ಥಪೂರ್ಣವಾಗಿದೆ. ಇದು ಸಮೂಹಪ್ರಯತ್ನದ ಮನೋಭಾವವನ್ನು ಕೂಡ ಉತ್ತೇಜಿಸುತ್ತದೆ’ ಎಂದರು, 

ಮಣಿಪಾಲದ ಅಂತರ್‌ಕುಶಲ ಸುಧಾರಿತ ವ್ರಣ ಆರೈಕೆ ಕೇಂದ್ರ [ಮಣಿಪಾಲ್‌ ಸೆಂಟರ್‌ ಫಾರ್‌ ಇಂಟರ್‌ಪ್ರೊಫೆಶನಲ್‌ ಅಡ್ವಾನ್ಸ್‌ಡ್‌ ವೂಂಡ್‌ ಕೇರ್‌- Manipal Center for Interprofessional Advanced Wound Care] ಇದರ ಸಂಜಾಲಕರಾದ ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಕಾರ್ಯಾಗಾರದ ಮುಖ್ಯ ಆಶಯದ ಕುರಿತು ಮಾತನಾಡಿದರು. ಪ್ರಸ್ತುತ ಕೇಂದ್ರವು ಗಾಯಗಳ ಶುಶ್ರೂಷೆಯಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನದೊಂದಿಗೆ ಆರೋಗ್ಯ ಆರೈಕೆ ವಿಭಾಗದ ವೃತ್ತಿಪರರನ್ನು ತರಬೇತಿಗೊಳಿಸಲು ಚತುರಂಕ ಪ್ರಶಿಕ್ಷಣ [4-ಕ್ರೆಡಿಟ್‌ ಸರ್ಟಿಫಿಕೇಟ್‌ ಕೋರ್ಸ್‌] ನ್ನು ಮೊದಲಬಾರಿಗೆ ಉಪಕ್ರಮಿಸಿರುವುದನ್ನು ಪ್ರಕಟಿಸಿದರು. 

ಡೆಲ್ಟಾ ಹೆಲ್ತ್‌ ಕೇರ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಏಕ್ತಾ ಮಲಿಕ್‌ ಅವರು ಆರೋರಾ ಮೊನೆಕ್ವಿನ್‌ನ್ನು ಪರಿಚಯಿಸಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರಾಯೋಗಿಕ ಕಲಿಕೆಯ ಹೊಸ ಮಾದರಿಯೊಂದು ಸೇರ್ಪಡೆಗೊಂಡಿರುವುದನ್ನು ವಿವರಿಸಿದರು. ಡಾ. ವಿಮಲ್‌ ಕೃಷ್ಣನ್‌, ಡಾ. ವಿಶಾಲ್‌ ಶಾನ್‌ಭಾಗ್‌. ಡಾ. ಪ್ರತಿಭಾ ತೋದೂರು, ಪ್ರಸನ್ನ ಕುಮಾರ, ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಈ ಹೊಸ ಮಾದರಿಯ ವೆದ್ಯಕೀಯ ಉಪಕರಣವನ್ನು ಬಳಸಿ, ಹೃದಯಾಘಾತ ಹೊಂದಿದ ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದರು. ಶ್ರೀನಿಧಿ ಜೋಗಿ ಮತ್ತು ಇಫೆನ್ಶಿಯಾ ಡಿ. ವಾಹ್‌ಲ್ಯಾಂಗ್‌ ಅವರು ಕಾರ್ಯಾಗಾರವನ್ನು ಆಯೋಜಿಸಿದ್ದು, ಸ್ನಾತಕೋತ್ತರ ಪದವಿ ಮತ್ತು ಶುಶ್ರೂಷಕಿ [ನರ್ಸ್‌] ಯರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಈ ಹೊಸ ಉಪಕ್ರಮವು ಅರೋರಾ ಮನುಷ್ಯಾಕೃತಿಯನ್ನು ಬಳಸಿಕೊಂಡು ಸಿಮ್ಯುಲೇಶನ್ ಆಧಾರಿತ ತರಬೇತಿಯ ಮೂಲಕ ಆರೋಗ್ಯ ವೃತ್ತಿಯ ಶಿಕ್ಷಣವನ್ನು ಹೆಚ್ಚಿಸುತ್ತದೆ. ಇದು ಹೃದಯ ಸ್ತಂಭನ ನಿರ್ವಹಣೆ, ARDS ಪ್ರತಿಕ್ರಿಯೆ ಮತ್ತು ಸುಧಾರಿತ ಶ್ವಾಸಮಾರ್ಗ ನಿರ್ವಹಣೆಯಂತಹ ನಿರ್ಣಾಯಕ ಕೌಶಲ್ಯಗಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಆರೋಗ್ಯ ವೃತ್ತಿಪರರಿಗೆ ಒದಗಿಸುತ್ತದೆ. ವಾಸ್ತವಿಕ ಸಿಮ್ಯುಲೇಶನ್‌ಗಳನ್ನು ಬಳಸಿಕೊಳ್ಳುವ ಮೂಲಕ, ತರಬೇತಿಯು ಉನ್ನತ ಮಟ್ಟದ ವೈದ್ಯಕೀಯ ಸನ್ನಿವೇಶಗಳಲ್ಲಿ ಸಾಮರ್ಥ್ಯ, ರೋಗ ನಿರ್ಣಯ ಮತ್ತು ರೋಗಿಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ನವೀನ ವಿಧಾನದ ಮೂಲಕ ವೈದ್ಯಕೀಯ ಸೇವೆಯಲ್ಲಿ ತಮ್ಮ ತಂತ್ರಗಳನ್ನು ಪರಿಷ್ಕರಿಸಬಹುದು ಮತ್ತು ನಿಯಂತ್ರಿತ, ಬೆಂಬಲಿತ ಪರಿಸರದಲ್ಲಿ ವಿಶ್ವಾಸವನ್ನು ಪಡೆಯಬಹುದು, ಅಂತಿಮವಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಕಾರಣವಾಗುತ್ತದೆ.

Previous Post

ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಏಕಾಏಕಿ ಕುಸಿದ ಮಣ್ಣು  : ಅವಶೇಷಗಳಡಿ ಸಿಲುಕಿರುವ ಇಬ್ಬರು ಕಾರ್ಮಿಕರು..!!

Next Post

ಉಡುಪಿ : ಸಂತಕಟ್ಟೆ ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟ ರಸ್ತೆಯಾಗಿ ಮಾರ್ಪಾಡು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಸಂತಕಟ್ಟೆ ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟ ರಸ್ತೆಯಾಗಿ ಮಾರ್ಪಾಡು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

10/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

10/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

10/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

10/06/2026

Recent News

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

10/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

10/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

10/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

10/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved