Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ :ಮತೀಯ ಧರ್ಮರಾಜಕಾರಣಕ್ಕೆ ಅಬ್ಬರಿಸುವವರು ಅಲೆಮಾರಿಗಳ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ- ಸಂತೋಷ್ ಬಜಾಲ್..!!

Dhrishya News by Dhrishya News
02/07/2024
in ಸುದ್ದಿಗಳು
0
0
SHARES
42
VIEWS
Share on FacebookShare on Twitter

ಉಡುಪಿ :ಜುಲೈ 02:ಕಳೆದ ಹಲವು ವರುಷಗಳಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ,ಪಾಂಗಳ, ಮಲ್ಪೆ, ಕಟ್ ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ಬದುಕ್ಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು, ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಕನಿಷ್ಟ ಸ್ಪಂದಿಸದೇ ಇರುವ ಶಾಸಕ ಸಂಸದರುಗಳು ಅದೇ ಇಲ್ಲಿನ ಮತೀಯ ಧರ್ಮರಾಜಕಾರಣಕ್ಕೆ ಅಬ್ಬರಿಸುತ್ತಿರುತ್ತಾರೆ ಎಂದು ಡಿವೈಎಫ್ಐ ರಾಜ್ಯ ಮುಖಂಡ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಗೌರವ ಸಲಹೆಗಾರರಾದ ಸಂತೋಷ್ ಬಜಾಲ್ ಇಂದು ( 2-7-24) ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಸಮುದಾಯಗಳು ಅಲೆಮಾರಿಯಾಗಿ ಬದುಕುತ್ತಿರುವ ಕಾರಣಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯಗಳ ಮೇಲಕ್ಕೆತ್ತಲು ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಹೆಸರಿಗಷ್ಟೇ ಇದೆಯಾದರೆ ಆದ್ಯತೆಯಲ್ಲಿ ಇವರ ಸಮಸ್ಯೆಗಳನ್ನು ‌ಬಗೆಹರಿಸಲು ಮುಂದಾಗುತ್ತಿಲ್ಲ. ಇವರು ಬದುಕುತ್ತಿರುವ ಗುಡಿಸಲಿಗೊಮ್ಮೆ ಶಾಸಕರು ಸಂಸದರು ಮತ್ತು ಜಿಲ್ಲಾಡಳಿದ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು.‌ ಸ್ಥಳೀಯವಾಗಿ ಪ್ರತೀ ಬಾರಿ ದೌರ್ಜನ್ಯಕ್ಕೊಳಗಾಗುವ ಈ ಸಮುದಾಯಗಳ ಗುಡಿಸಲಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಪೋಲೀಸ್‌ಇಲಾಖೆ ಮಾತ್ರ ತಪ್ಪಿತಸ್ತ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಬಂಧಿಸದೆ ತಾರತಮ್ಯ ‌ಎಸಗಿದ ಕುಂದಾಪುರ ಪೊಲೀಸರ ನಡೆ ಖಂಡನೀಯ ಎಂದು‌ ದೂರಿದರು. ಈ ಕೂಡಲೇ ಜಿಲ್ಲಾಡಳಿತ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯ ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು ಇಲ್ಲದೇ ಹೋದಲ್ಲಿ ಮುಂದಿನ ದಿನ ಹಲವು ಹಂತದ ಹೋರಾಟ ನಡೆಸಲಿದ್ದೇವೆಂದು ಎಚ್ಚರಿಸಿದರು.

ಗೌರವಾಧ್ಯಕ್ಷ ಕವಿರಾಜ್ ಎಸ್ ಕಾಂಚನ್ ಮಾತನಾಡಿ ಗಂಗೊಳ್ಳಿ ಕಡೆಯಿಂದ ಬಂದು ಹಲ್ಲೆ ನಡೆಸಿರುವ ಆರೋಪಿಗಳನ್ನು ಪೊಲೀಸರ ಬಂಧನದಿಂದ ರಕ್ಷಿಸಲು ಮತ್ತು ನಿರೀಕ್ಷಣಾ ಜಾಮೀನು ಪಡೆಯಲು ಸಹಾಯ ಮಾಡಿದವರಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಲಾಡ್ಯರು ಇದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದರು..

ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಕಾರ್ಮಿಕ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ಶಶಿಧರ್ ಗೊಲ್ಲ, ಅಲೆಮಾರಿ ಸಮುದಾಯದ ಮುಖಂಡರಾದ ಶಂಕರ ಗುಲ್ವಾಡಿ, ಹಲ್ಲೆಗೊಳಗಾದ ಮಹಿಳೆ ಜಯಮಾಲ, ದೀಪು ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಪೂಜಾರಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ‌ಜಿಲ್ಲಾ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು..

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ವೋಹನ್, ನಳಿನಿ ಎಸ್, ಕರಾವಳಿ ವೃತ್ತಿನಿರತ ಅಲೆಮಾರಿ ಸಮುದಾಯದ ರಾಜ್ಯ ಮುಖಂಡರುಗಳಾದ ಮುಖಂಡರುಗಳಾದ ವೆಂಕಟೇಶ, ಲೋಕೇಶ್ ಉಪಸ್ಥಿತರಿದ್ದರು.

 ಪ್ರತಿಭಟನೆಯ ನೇತೃತ್ವವನ್ನು ಅಲೆಮಾರಿ ಸಮುದಾಯದ ಮುಖಂಡರುಗಳಾದ ಬಾಬು, ಪ್ರಕಾಶ್, ಲೋಕೇಶ್, ಸಿದ್ದಪ್ಪ, ಸ್ವಾಮಿ, ನಾಗರಾಜ್ ಮುಂತಾದವರು ವಹಿಸಿದ್ದರು ಸಮಿತಿಯ ಕಾರ್ಯದರ್ಶಿ ರಾಮ ಟಿ.ಎನ್ ಸ್ವಾಗತಿಸಿ ನಿರೂಪಿಸಿದರು. 

ಪ್ರತಿಭಟನೆಯ ನಂತರ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಶ್ರೀಮತಿ ಮಮತಾ ದೇವಿ ಮನವಿಯನ್ನು ಸ್ವೀಕರಿಸಿದರು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಭರವಸೆಯಿತ್ತರು.

Previous Post

ವಿಶ್ವ ದಾಖಲೆ’ ಸೇರಿದ ಬಾಲ ಯಕ್ಷಗಾನ ಕಲಾವಿದೆ ‘ತುಳಸಿ’ ಹೆಗಡೆ..!!

Next Post

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಯತೀಶ್ ಎನ್.ನೇಮಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಯತೀಶ್ ಎನ್.ನೇಮಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026

Recent News

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved