Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯಲ್ಲಿ ವೈದ್ಯಕೀಯ ಉಪಕರಣಗಳ ವಿನ್ಯಾಸ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಕುರಿತ ಮಹತ್ತ್ವದ ಕಾರ್ಯಾಗಾರ..!!

Dhrishya News by Dhrishya News
30/05/2024
in ಸುದ್ದಿಗಳು
0
0
SHARES
16
VIEWS
Share on FacebookShare on Twitter

ಮಣಿಪಾಲ್‌, ಮೇ 30. 2024 ; ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ [ಡಿಎಸ್‌ಟಿ] ವಿಭಾಗ, ಭಾರತ ಸರ್ಕಾರ ಇದರ ಸಹಭಾಗಿತ್ವದೊಂದಿಗೆ ಮಿಡಾಸ್‌ [ಮೆಡಿಕಲ್‌ ಇನ್‌ಸ್ಟ್ರುಮೆಂಟ್ಸ್‌, ಡಿವೈಸಸ್‌ ಆ್ಯಂಡ್‌ ಎಲೈಡ್‌ ಸರ್ವಿಸಸ್‌- ಎಂಐಡಿಎಎಸ್‌ ] ಕೇಂದ್ರವನ್ನು ಆರಂಭಿಸಿದ್ದು, ಸಚಿವಾಲಯದಿಂದ ಇದು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಗುರುತಿಸಲ್ಪಟ್ಟಿದೆ. ವೈದ್ಯಕೀಯ ಉಪಕರಣಗಳ ವಿನ್ಯಾಸ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿ ಮಹತ್ತ್ನದ ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಮಾತನಾಡಿ, ’ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಮತ್ತು ಮಾಹೆಯ ಸಹಯೋಗದಲ್ಲಿ ಮಿಡಾಸ್‌ [ಎಂಐಡಿಎಎಸ್‌- ವೈದ್ಯಕೀಯ ಸಾಧನಗಳು, ಉಪಕರಣಗಳು ಮತ್ತು ಸಂಬಂಧಿತ ಸೇವೆಗಳು] ಒಂದು ಉತ್ತಮ ಉಪಕ್ರಮವಾಗಿ ಹೊರಹೊಮ್ಮಿದ್ದು ಭವಿಷ್ಯದಲ್ಲಿ ಶಿಕ್ಷಣವೇತ್ತವರಿಗೆ , ಉದ್ಯಮಶೀಲರಿಗೆ ಇದರಿಂದ ವ್ಯಾಪಕವಾದ ಪ್ರಯೋಜನವಿದೆ. ಮಾಹೆ ಮಾತ್ರವಲ್ಲದೆ, ಅನ್ಯ ಸಂಸ್ಥೆಗಳ ಬೋಧಕರು, ವೈದ್ಯಕೀಯ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವುದು ಇದರ ಮಹತ್ತ್ವವನ್ನು ಎತ್ತಿಹಿಡಿಯುತ್ತದೆ’ ಎಂದರು.   

ಮಾಹೆ ಸಹ-ಉಪಕುಲಪತಿಗಳಾದ ಡಾ. ಶರತ್‌ ಕೆ. ರಾವ್‌ ಅವರು ಮಿತ ವೆಚ್ಚ ಮತ್ತು ಅತ್ಯುತ್ತಮ ಗುಣಮಟ್ಟದ ದೇಸೀಯವಾದ ವೈದ್ಯಕೀಯ ಉಪಕರಣಗಳ ಅಗತ್ಯ ಇಂದು ಇದೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಸಂಶೋಧನೆಗಳು ನಡೆಯಬೇಕಿವೆ’ ಎಂದರು. 

ಮಣಿಪಾಲ್‌ ಕಾಲೇಜ್ ಆಫ್ ಹೆಲ್ತ್‌ ಪ್ರೊಫೆಶನಲ್ಸ್‌ನ ಡೀನ್‌ ಮತ್ತು ಡಿಎಸ್‌ಟಿ-ಮಾಹೆ ಹಬ್‌ನ ಪ್ರಧಾನ ಸಂಚಾಲಕ ಡಾ. ಜಿ. ಅರುಣ್‌ ಮಯ್ಯ ಸ್ವಾಗತಿಸಿ, ಕೇಂದ್ರದ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರಾದ ಹಿರಿಯ ಸಲಹೆಗಾರ ಡಾ. ಲಾಜಾರ್‌ ಮಾಥ್ಯೂ, ಪುಣೆಯ ವೆಂಚರ್‌ ಸೆಂಟರ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಪ್ರೇಮನಾಥ್‌, ಚಂಢೀಘರ್‌ನ ಪಿಜಿಐಎಂಇಆರ್‌ನ ಡಾ. ಜೋಸೆಫ್‌ ಎಲ್‌ ಮಾಥ್ಯೂ, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ವಿಶ್ವವಿದ್ಯಾನಿಲಯದ ಯುಸಿಟಿ ಮೆಡ್‌ ಟೆಕ್‌ ಲ್ಯಾಬೋರೇಟರಿಯ ಮುಖ್ಯಸ್ಥ ಡಾ. ಸುದೇಶ್‌ ಎಸ್‌. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.  

ಆರೋಗ್ಯ ರಕ್ಷಣೆಯ ತಂತ್ರಜ್ಞಾನ ಅಭಿವೃದ್ಧಿಯ ವಿವಿಧ ಆಯಾಮಗಳಿಗೆ ಸಂಬಂಧಿಸಿ ತರಬೇತಿ ನೀಡುವುದು ಪ್ರಸ್ತುತ ಡಿಎಸ್‌ಟಿ-ಮಾಹೆ ಹಬ್‌ನ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಕಾರ್ಯಾಗಾರವು ವಿನ್ಯಾಸ, ಅಭಿವೃದ್ದಿ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿ ಆಯೋಜನೆಗೊಂಡಿರುವುದು ಗಮನಾರ್ಹವಾಗಿದೆ.

ಇಂದಿನ ಆರೋಗ್ಯಪಾಲನೆಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ಮಹತ್ತ್ವದ್ದಾಗಿದೆ. ಆಸ್ಪತ್ರೆ ಮತ್ತು ಆರೋಗ್ಯ ಶುಶ್ರೂಷೆ ಕೇಂದ್ರಗಳಲ್ಲಿ ದುಬಾರಿಯಾದ ವೈದ್ಯಕೀಯ ಉಪಕರಣಗಳನ್ನು ಬಳಸುತ್ತಾರೆ ಮತ್ತು ಇವುಗಳನ್ನು ವಿದೇಶಗಳಿಂದ ಆಮದು ಮಾಡಲಾಗುತ್ತದೆ. ನಮ್ಮ ದೇಶದಲ್ಲಿಯೇ ಈ ಉಪಕರಣಗಳನ್ನು ತಯಾರಿಸುವ ಪ್ರಯತ್ನಗಳು ನಡೆದಿದ್ದರೂ ಯಶಸ್ಸು ಬಹಳ ಮಿತವಾದದ್ದಾಗಿದೆ. ಇದರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಆಶಯದಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಬೆಂಬಲದೊಂದಿಗೆ ಮಾಹೆಯು ಮಿಡಾಸ್‌ [ಎಂಐಡಿಎಎಸ್‌- ವೈದ್ಯಕೀಯ ಸಾಧನಗಳು, ಉಪಕರಣಗಳು ಮತ್ತು ಸಂಬಂಧಿತ ಸೇವೆಗಳು] ನ ಮೂಲಕ ಸಕ್ರಿಯವಾಗಿ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ಉಪಕ್ರಮಿಸಿವೆ. [ಮಿಡಾಸ್‌ ಎಂಐಡಿಎಎಸ್‌] ಖಾಸಗಿ-ಸರ್ಕಾರಿ ಮಾದರಿಯ ಸಹಭಾಗಿತ್ವವಾಗಿದೆ.

Previous Post

ಉಡುಪಿ :ಲಂಚ ಸ್ವೀಕಾರ ಆರೋಪದಲ್ಲಿ ಉಪ್ಪೂರು ಪಿಡಿಒ, ಬಿಲ್‌ ಕಲೆಕ್ಟರ್ ಲೋಕಾಯುಕ್ತ ಬಲೆಗೆ..!!

Next Post

ವಿಧಾನ ಪರಿಷತ್ ಚುನಾವಣೆ : ಜೂನ್‌ 3ರಂದು ಪದವೀಧರ ಮತದಾರರಿಗೆ ಮತ್ತು ಶಿಕ್ಷಕರಿಗೆ ಸಾಂದರ್ಭಿಕ ರಜೆ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ವಿಧಾನ ಪರಿಷತ್ ಚುನಾವಣೆ : ಜೂನ್‌ 3ರಂದು ಪದವೀಧರ ಮತದಾರರಿಗೆ ಮತ್ತು ಶಿಕ್ಷಕರಿಗೆ ಸಾಂದರ್ಭಿಕ ರಜೆ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

11/08/2026
ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

11/08/2026
ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

11/08/2026
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

11/08/2026

Recent News