Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು-ಮಾಹೆಯಿಂದ ಮೊದಲ ಮಾನ್ಸೂನ್‌ ಸ್ಕೂಲ್‌ : ಆರುದಿನಗಳ ಕಾರ್ಯಕ್ರಮ-ಯಾವುದೇ ನೋಂದಣಿ ಶುಲ್ಕವಿಲ್ಲ..!!

Dhrishya News by Dhrishya News
28/05/2024
in ವಿಜ್ಞಾನ ಮತ್ತು ತಂತ್ರಜ್ಞಾನ, ಸುದ್ದಿಗಳು
0
0
SHARES
56
VIEWS
Share on FacebookShare on Twitter

ಬೆಂಗಳೂರು, 28, ಮೇ 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಬೆಂಗಳೂರು ಕ್ಯಾಂಪಸ್‌ನ ವತಿಯಿಂದ ಮಾನ್ಸೂನ್‌ ಸ್ಕೂಲ್‌ [ಮುಂಗಾರು ಶಾಲಾ] ನ ಮೊದಲ ಆವೃತ್ತಿಯನ್ನು ಜೂನ್‌ 24 ರಿಂದ 29, 2024ರ ವರೆಗೆ ಆರುದಿನಗಳವರೆಗೆ ಮಣಿಪಾಲದಲ್ಲಿ ಆಯೋಜಿಸಲಾಗುತ್ತಿದೆ. ಪರಿಸರ, ಹವಾಮಾನ ಬದಲಾವಣೆ, ಪ್ರಕೃತಿ-ಸಂಸ್ಕೃತಿ ಸಂಬಂಧ ಮತ್ತು ವಿನ್ಯಾಸ ಮುಂತಾದ ಬಹು ವಿಷಯಗಳ ಕುರಿತ ಸವಾಲುಗಳ ವಿಷಯ ಕೇಂದ್ರಿತವಾಗಿ ಈ ಮಾನ್ಸೂನ್‌ ಸ್ಕೂಲ್‌ನ್ನು ಆಯೋಜಿಸಲಾಗುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮವನ್ನು ಮಣಿಪಾಲ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನ ಸೆಂಟರ್‌ ಫಾರ್‌ ದ್ವೀಪ ಮತ್ತು ಸೆಂಟರ್‌ ಫಾರ್‌ ಸದ್ಭಾವಗಳ ಸಹಭಾಗಿತ್ವದಲ್ಲಿ ಡಾ. ಟಿ. ಎಂ. ಎ. ಪೈ ದತ್ತಿ ಪೀಠದ ಡಾ. ದೀಪ್ತಾ ಸತೀಶ್‌ ಅವರು ಸಂಯೋಜಿಸುತ್ತಿದ್ದಾರೆ. 

ಬಹುವಿಷಯಗಳ ವಿನ್ಯಾಸ ಪ್ರಯೋಗಾಲಯ [ಡಿಸೈನ್‌ ಲ್ಯಾಬ್‌] ವಾಗಿರುವ ಈ ಕಾರ್ಯಕ್ರಮವು ನೈರುತ್ಯ ಘಟ್ಟ ಪ್ರದೇಶ ಮತ್ತು ಕರಾವಳಿ ಕರ್ನಾಟಕಗಳ ನಡುವಿನ ಪರಿಸರ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿದ್ದು ಈ ಭೂಪ್ರದೇಶವು ಪಾರಿಸರಿಕವಾಗಿ ಸೂಕ್ಷ್ಮ ಪ್ರದೇಶವಾಗಿದೆ. ಇದು ಮನುಷ್ಯ ಮತ್ತು ಮನುಷ್ಯೇತರ ಜೀವಿಗಳಿಗೆ ಆಶ್ರಯತಾಣವಾಗಿದ್ದು, ವಿಶಿಷ್ಟ ನೈಸರ್ಗಿಕ ಲಕ್ಷಣಗಳ ಮತ್ತು ಹವಾಮಾನದ ಪ್ರದೇಶವಾಗಿದೆ. ಅಲ್ಲದೆ, ನಗರೀಕರಣಕ್ಕೆ ಮತ್ತು ಅಸಹಜ ಅಭಿವೃದ್ಧಿಗೆ ತೀವ್ರವಾಗಿ ತುತ್ತಾಗುತ್ತಿದೆ. ಭಾರತದ ದಕ್ಷಿಣಭಾಗಕ್ಕೆ ಮಳೆ ಸುರಿಸುವ ನೈರುತ್ಯ ಮುಂಗಾರುವಿನಿಂದ ಈ ಭೂಭಾಗ ಪ್ರಭಾವಿತವಾಗಿದ್ದು, ಮುಂಗಾರುವಿನ ಅಧ್ಯಯನಕ್ಕೆ ಸೂಕ್ತವಾದ ಭೂಪ್ರದೇಶವಾಗಿದೆ.   

ಪರಿಸರ ತಜ್ಞರು, ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕಾರರು ಮತ್ತು ಯೋಜನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು, ತಂತ್ರಜ್ಞಾನಿಗಳು, ಭೂಪಟ ರೂಪಕರು, ಪತ್ರಿಕೋದ್ಯಮಿಗಳು, ಪರಿಸರ ಕುತೂಹಲಿಗಳು, ಪರಿಸರ ಸಂರಕ್ಷಣೆಯ ಕಾಳಜಿಯುಳ್ಳವರು, ಕಲಾವಿದರು, ಕರಕುಶಲಕಾರರು, ವಿನ್ಯಾಸಕರು, ಭೂಗೋಳ ತಜ್ಞರು, ಪುರಾತತ್ವಶಾಸ್ತ್ರಜ್ಞರು, ಚಾರಣಿಗರು, ಮಾನವಶಾಸ್ತ್ರಜ್ಞರು, ಕಲಾವಿದರು, ಬರಹಗಾರರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಈ ‘ಮುಂಗಾರು ಶಾಲಾ’ [ಮಾನ್ಸೂನ್‌ ಸ್ಕೂಲ್‌]ನಲ್ಲಿ ಭಾಗವಹಿಸಬಹುದಾಗಿದೆ.

ಅಭಿವೃದ್ಧಿ ಮತ್ತು ಸಂರಕ್ಷಣೆ, ಸಮುದಾಯಗಳು ಮತ್ತು ಜೀವನವಿಧಾನ, ಹವಾಮಾನ ಬದಲಾವಣೆ ಮತ್ತು ಅಳವಡಿಕೆಗಳು, ಸಾಂಪ್ರದಾಯಿಕ ಜ್ಞಾನ ಮತ್ತು ಸ್ಥಳೀಯ ಸಾಂಸ್ಕೃತಿಕ ಆಚರಣೆಗಳು ಹೀಗೆ ಬಹುವಿಷಯಗಳನ್ನು ಈ ಮಾನ್ಸೂನ್‌ ಸ್ಕೂಲ್‌ ಕಾರ್ಯಕ್ರಮವು ಒಳಗೊಳ್ಳಲಿದೆ. ಇದರಲ್ಲಿ ಭಾಗವಹಿಸಲು ಪ್ರಾಯದ, ಅನುಭವದ ಮಿತಿಯಿಲ್ಲ. ಯಾವ ಕ್ಷೇತ್ರದ ಮತ್ತು ಜ್ಞಾನದ ಹಿನ್ನೆಲೆಯವರು ಎಂಬುದನ್ನು ಆಯ್ಕೆಯಲ್ಲಿ ಪರಿಗಣಿಸಲಾಗುತ್ತದೆ. 

ಜೂನ್‌ 3, 2024 ನೋಂದಣಿಗೆ ಕೊನೆಯ ದಿನವಾಗಿರುತ್ತದೆ. ಮಿತ ಅವಕಾಶಗಳು ಉಳಿದಿವೆ. ಯಾವುದೇ ನೋಂದಣಿ ಶುಲ್ಕವಿಲ್ಲ. ಆದರೆ, ಎಲ್ಲ ಆರುದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ : dweepa.maheblr@manipal.edu ಸಂಪರ್ಕಿಸುವಂತೆ ತಿಳಿಸಲಾಗಿದೆ 

Previous Post

ಉಡುಪಿ :ಪಕ್ಷ ವಿರೋಧಿ ಚಟುವಟಿಕೆ – ರಘುಪತಿ ಭಟ್ ಜೊತೆ ಗುರುತಿಸಿಕೊಂಡಿದ್ದ ನಾಲ್ವರು ನಾಯಕರಿಗೆ ಬಿಜೆಪಿ ನೋಟಿಸ್..!!

Next Post

ಉಡುಪಿ : ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಗ ನಿಷೇದ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಗ ನಿಷೇದ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

23/08/2026
ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

23/08/2026
ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

22/08/2026
ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

22/08/2026

Recent News