Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಎಜುಕೇಶನ್ ವರ್ಲ್ಡ್ ಇಂಡಿಯಾ ಹೈಯರ್ ಎಜುಕೇಶನ್ ರಾಂಕಿಂಗ್ 2024-2025 ರಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮಣಿಪಾಲದ ಬಿ ಎಸ್ ಸಿ ನರ್ಸಿಂಗ್ ವಿಭಾಗ..!!

Dhrishya News by Dhrishya News
21/05/2024
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
11
VIEWS
Share on FacebookShare on Twitter

ಮಣಿಪಾಲ , 21 ಮೇ 2024: ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್, ಮಣಿಪಾಲ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲದ ಘಟಕವಾಗಿದೆ. ಇದು ಭಾರತದ ಶ್ರೇಷ್ಟ ನರ್ಸಿಂಗ್ ಶಿಕ್ಷಣ ಮತ್ತು ಸಂಶೋಧನೆಗಾಗಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಕಾಲೇಜು 1:10 ರ ಆದರ್ಶ ಅಧ್ಯಾಪಕ-ವಿದ್ಯಾರ್ಥಿ ಅನುಪಾತವನ್ನು ಹೊಂದಿದೆ. ಶೇಕಡಾ 50 ರಷ್ಟು ಅಧ್ಯಾಪಕರು ಪಿಎಚ್‌ಡಿ ಪದವಿ ಹೊಂದಿದ್ದಾರೆ. ಉಳಿದ ಅಧ್ಯಾಪಕರು ತಮ್ಮ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಲವಾದ ಶೈಕ್ಷಣಿಕ ಅಡಿಪಾಯ ಪರಿಣಾಮಕಾರಿ ಮತ್ತು ವೈಯಕ್ತಿಕಗೊಳಿಸಿದ ಶೈಕ್ಷಣಿಕ ವ್ಯವಸ್ಥೆಯನ್ನು ಖಾತ್ರಿಗೊಳಿಸುತ್ತದೆ. ಆರೋಗ್ಯ ಸೇವೆಯಲ್ಲಿ ಉತ್ಕೃಷ್ಟತೆಗೆ ಬದ್ಧವಾಗಿರುವ ಸಂಸ್ಥೆಯು ಎಜುಕೇಶನ್ ವರ್ಲ್ಡ್ ಇಂಡಿಯಾ ಹೈಯರ್ ಎಜುಕೇಶನ್ ರಾಂಕಿಂಗ್ 2024-2025 ರ ಬಿ ಎಸ್ ಸಿ ನರ್ಸಿಂಗ್ ವಿಭಾಗದಲ್ಲಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ.

ಅಧ್ಯಾಪಕರ ಸಾಮರ್ಥ್ಯ, ಉದ್ಯೋಗಾವಕಾಶ, ಅಧ್ಯಾಪಕರ ಕಲ್ಯಾಣ ಮತ್ತು ಅಭಿವೃದ್ಧಿ, ಮೂಲಸೌಕರ್ಯ ಮತ್ತು ಆಡಳಿತದ ಗುಣಮಟ್ಟ ಮುಂತಾದ ವಿವಿಧ ನಿಯತಾಂಕಗಳಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಸಂಸ್ಥೆಯು 700 ರಲ್ಲಿ 624 ಅಂಕಗಳೊಂದಿಗೆ ನಂ. 1 ಸ್ಥಾನವನ್ನು ಪಡೆದುಕೊಂಡಿದೆ. 2023 ರಲ್ಲಿ 620 ಅಂಕ ಪಡೆದುಕೊಂಡಿತ್ತು

ಈ ಸಾಧನೆ ಕುರಿತು ಮಾತನಾಡಿದ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಅವರು, “ಎಜುಕೇಶನ್ ವರ್ಲ್ಡ್ ಇಂಡಿಯಾ ಹೈಯರ್ ಎಜುಕೇಶನ್‌ನಲ್ಲಿ ಬಿಎಸ್‌ಸಿ ನರ್ಸಿಂಗ್‌ ವಿಭಾಗದಲ್ಲಿ ಪ್ರತಿಷ್ಠಿತ ನಂ. 1 ರಾಂಕಿಂಗ್ ಅನ್ನು ಉಳಿಸಿಕೊಂಡಿರುವ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. . ಈ ಮನ್ನಣೆಯು ನಮ್ಮ ಅಸಾಧಾರಣ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಿರಂತರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ . 

ಕಳೆದ ವರ್ಷಕ್ಕಿಂತಲೂ ಸುಧಾರಿತ ಸ್ಕೋರ್ ಪಡೆದಿರುವುದು ನಮ್ಮ ಉನ್ನತ-ಶ್ರೇಣಿಯ ಶಿಕ್ಷಣವನ್ನು ಒದಗಿಸುವ ಮತ್ತು ನಿರಂತರ ಸುಧಾರಣೆಯ ವಾತಾವರಣವನ್ನು ಬೆಳೆಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ಆರೋಗ್ಯ ವೃತ್ತಿಪರರನ್ನು ಪೋಷಿಸಲು ನಾವು ಸದಾ ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್ ಅವರು ಹೆಮ್ಮೆ ವ್ಯಕ್ತಪಡಿಸುತ್ತಾ, “ಈ ವರ್ಷವೂ ನಂ.1 ರಾಂಕಿಂಗ್ ಅನ್ನು ಉಳಿಸಿಕೊಂಡಿರುವುದು ನಮಗೆ ಖುಷಿ ತಂದಿದೆ. ಈ ಗಮನಾರ್ಹ ಸಾಧನೆಯು ನರ್ಸಿಂಗ್ ಶಿಕ್ಷಣದಲ್ಲಿ ಉತ್ಕೃಷ್ಟತೆಯ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಇದು ನಮ್ಮ ಅಧ್ಯಾಪಕರ ಸಮರ್ಪಣೆ, ನಮ್ಮ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ನಾವು ಒದಗಿಸಲು ಪ್ರಯತ್ನಿಸುತ್ತಿರುವ ನವೀನ ಕಲಿಕೆಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. 

ನಮ್ಮ ಪದವೀಧರರು ಭವಿಷ್ಯದ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸುಸಜ್ಜಿತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ನರ್ಸಿಂಗ್ ಶಿಕ್ಷಣದಲ್ಲಿ ಇನ್ನಷ್ಟು ಎತ್ತರಕ್ಕೆ ಏರುವುದನ್ನು ಮುಂದುವರಿಸುತ್ತೇವೆ” ಎಂದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುರಿತು:

ಮಾಹೆ ಮಣಿಪಾಲವು ಪ್ರಮುಖವಾಗಿ ಗುಣಮಟ್ಟದ ಶೈಕ್ಷಣಿಕ ಮತ್ತು ಶಿಕ್ಷಣ ಸೇವಾ ಪೂರೈಕೆದಾರರಾಗಿ ಗುರುತಿಸಲ್ಪಟ್ಟಿದೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಅದರ ಒಳಹೊಕ್ಕು ನಿರಂತರವಾಗಿ ಸುಧಾರಿಸಲು ಗಣನೀಯವಾಗಿ ಕೊಡುಗೆ ನೀಡಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ ಮೂಲವಾಗಿ, ಅನಕ್ಷರತೆ, ಅನಾರೋಗ್ಯ ಮತ್ತು ಬಡತನದ ಮೂರು ಪ್ರಮುಖ ಕಾಳಜಿಯಿಂದ ಸಮಾಜವನ್ನು ತೊಡೆದುಹಾಕುವ ದೂರದೃಷ್ಟಿಯನ್ನು ಹೊಂದಿದ್ದ ದಿವಂಗತ ಡಾ. ಟಿ.ಎಂ.ಎ ಪೈ ಅವರ ಕನಸನ್ನು ಈಡೇರಿಸುವ ಗುರಿಯನ್ನು ಹೊಂದಿದೆ. ಇದು ತನ್ನ 25 ವೃತ್ತಿಪರ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಶಾಸ್ತ್ರ, ಫಾರ್ಮಸಿ, ನರ್ಸಿಂಗ್, ಅಲೈಡ್ ಹೆಲ್ತ್, ಮ್ಯಾನೇಜ್‌ಮೆಂಟ್, ಸಂವಹನ, ಜೀವ ವಿಜ್ಞಾನ, ಹೋಟೆಲ್ ಆಡಳಿತ ಇತ್ಯಾದಿಗಳಂತಹ ಹಲವಾರು ಪ್ರಮುಖ ವಿಭಾಗಗಳನ್ನು ಒಳಗೊಂಡ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕೌಶಲ್ಯ ವರ್ಧನೆಯ ಶೈಕ್ಷಣಿಕ ಕೋರ್ಸ್‌ಗಳನ್ನು ಒದಗಿಸುತ್ತಿದೆ . ಅಲ್ಲದೇ ಅಂಕಿಅಂಶ, ವಾಣಿಜ್ಯ, ಜಿಯೋಪಾಲಿಟಿಕ್ಸ್ & ಇಂಟರ್ನ್ಯಾಷನಲ್ ರಿಲೇಶನ್ಸ್, ಯುರೋಪಿಯನ್ ಸ್ಟಡೀಸ್, ಫಿಲಾಸಫಿ ಮತ್ತು ಹ್ಯುಮಾನಿಟೀಸ್, ಅಟಾಮಿಕ್ ಮತ್ತು ಮಾಲಿಕ್ಯುಲರ್ ಫಿಸಿಕ್ಸ್, ಇತ್ಯಾದಿ ಶಿಕ್ಷಣ ಮತ್ತು ಸಂಶೋಧನೆ ವಿಭಾಗಗಳನ್ನು ಒಳಗೊಂಡಿದೆ .

ಪ್ರಪಂಚದಾದ್ಯಂತದ 35,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಅಭ್ಯಸಿಸುತ್ತಿದ್ದಾರೆ . ಅತ್ಯುತ್ತಮ ಮೂಲಸೌಕರ್ಯ ಸೌಲಭ್ಯಗಳು, ಅತ್ಯಾಧುನಿಕ ಉಪಕರಣಗಳು, ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಸಮರ್ಪಿತ ಮತ್ತು ಸಮರ್ಥ ಅಧ್ಯಾಪಕರು ಮಾಹೆಯನ್ನು ಅತ್ಯುತ್ತಮ ಪರಿಗಣಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದೆಂದು ಪರಿಗಣಿಸಲು ಅನುವು ಮಾಡಿಕೊಟ್ಟಿದೆ. ಇದು ಭಾರತದಾದ್ಯಂತ ಮತ್ತು ವಿಶ್ವದ 60+ ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಮಾಹೆಯಲ್ಲಿ ಪ್ರಸ್ತುತ 3000+ ಬೋಧಕಾ ಮತ್ತು 10500+ ಬೋಧಕೇತರ ಮತ್ತು ಸೇವಾ ಸಿಬ್ಬಂದಿಯನ್ನು ಹೊಂದಿದೆ. ಇದು ವೈ ಫೈ ಸಕ್ರಿಯಗೊಂಡ ಕ್ಯಾಂಪಸ್ ಆಗಿದೆ ಮತ್ತು ಕ್ರೀಡೆಗಳು ಮತ್ತು ಆಟಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದೆ. ನಾಕ್ ನಿಂದ A++ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದಿದೆ ಮತ್ತು ಅದರ ತಾಂತ್ರಿಕ ಕಾರ್ಯಕ್ರಮಗಳು ಎನ್ ಬಿ ಎ ನಿಂದ ಮಾನ್ಯತೆ ಪಡೆದಿವೆ. ಶ್ರೇಷ್ಠತೆಗಾಗಿ ಮಾಹೆಯ ಅನ್ವೇಷಣೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಗಳಲ್ಲಿ ಅತ್ಯುತ್ತಮವಾಗಿ ನಿರೂಪಿಸಲ್ಪಟ್ಟಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕಗಳ ಚೌಕಟ್ಟು (NIRF)-2023 ರ ಪ್ರಕಾರ, ಮಾಹೆ ‘ವಿಶ್ವವಿದ್ಯಾಲಯಗಳ’ ವರ್ಗದಲ್ಲಿ 6 ನೇ ಸ್ಥಾನ ಪಡೆದಿದೆ.

ಮಾಹೆಯು ಮಂಗಳೂರು, ಬೆಂಗಳೂರು ಮತ್ತು ಜಮ್ಶೆಡ್‌ಪುರದಲ್ಲಿ ಆಫ್-ಕ್ಯಾಂಪಸ್ ಅನ್ನು ಹೊಂದಿದೆ, ಹಾಗೂ ದುಬೈ (ಯುಎಇ) ಮತ್ತು ಮೆಲಾಕಾ (ಮಲೇಷ್ಯಾ)ದಲ್ಲಿ ಆಫ್-ಶೋರ್ ಕ್ಯಾಂಪಸ್‌ಗಳನ್ನು ಹೊಂದಿದೆ. ಈ ಎಲ್ಲಾ ಆಫ್-ಸೆಂಟರ್ ಕ್ಯಾಂಪಸ್‌ಗಳು ಮತ್ತು ಆಫ್-ಶೋರ್ ಕ್ಯಾಂಪಸ್‌ಗಳು ವಿಶ್ವ-ದರ್ಜೆಯ ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿವೆ ಮತ್ತು ಶಿಕ್ಷಣಶಾಸ್ತ್ರವನ್ನು ಅನುಸರಿಸುತ್ತವೆ. ಇದನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ ಮತ್ತು ಆಯಾ ವಿಭಾಗಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ಬೆಳವಣಿಗೆಗಳನ್ನು ಕಾಲ ಕಾಲಕ್ಕೆ ನವೀಕರಿಸಲಾಗುತ್ತಿದೆ .

ಹೆಚ್ಚಿನ ಮಾಹಿತಿಗಾಗಿ https://www.manipal.edu/mu/campuses/mahe-mlr.html ಲಾಗ್ ಇನ್ ಮಾಡಿ

Previous Post

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ :ಮೇ 21 ರಿಂದ  ಮೇ 24 ವಾರ್ಷಿಕ ಪ್ರತಿಷ್ಠ ವರ್ಧಂತಿ ಮಹೋತ್ಸವ..!!

Next Post

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ:ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ:ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved