ಬೆಂಗಳೂರು :ಮೇ 09: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ(94%) ಪಡೆದು ಕೊಂಡಿದೆ. – ದಕ್ಷಿಣ ಕನ್ನಡ – ದ್ವೀತಿಯ ಸ್ಥಾನ(92.12%)ಮತ್ತು ಶಿವಮೊಗ್ಗ- ತೃತೀಯ ಸ್ಥಾನ (88.67%) ಪಡೆದುಕೊಂಡಿದೆ.ಕೊನೆಯ ಸ್ಥಾನ ಪಡೆದ ಜಿಲ್ಲೆ ಯಾದಗಿರಿ ಶೇ.50.59 ಫಲಿತಾಂಶ ಪಡೆದಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ..ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವೆಬ್ಸೈಟ್ಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯವಿದೆ. kseeb.kar.nic.in & karresults.nic.inನಲ್ಲಿ SSLC ಫಲಿತಾಂಶ ಲಭ್ಯವಿರಲಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.