Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಸಾಣೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒತ್ತೋತ್ತಾಗಿ ಧೂಪದ ವ್ರಕ್ಷಾರೋಪಣೆ…!!

Dhrishya News by Dhrishya News
12/04/2024
in ಕರಾವಳಿ, ಸುದ್ದಿಗಳು
0
0
SHARES
15
VIEWS
Share on FacebookShare on Twitter

ಕಾರ್ಕಳ :ಏಪ್ರಿಲ್ 12:  ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಕಾಮಗಾರಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯವರೆಗೆ ನಿರಂತರವಾಗಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ…

ಸಾಣೂರು ಪುಲ್ಕೇರಿ ಬೈಪಾಸಿನಿಂದ ಮುರತಂಗಡಿ ಪದವಿ ಪೂರ್ವ ವಿದ್ಯಾಲಯದ ವರೆಗೆ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ಬಹುಭಾಗ ಪೂರ್ಣಗೊಂಡಿದೆ.

ಸಾಣೂರು ಯುವಕ ಮಂಡಲದಿಂದ ಮರತಂಗಡಿವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಕೂಡ ಬಹುತೇಕ ನಿರ್ಮಾಣ ಗೊಂಡಿದೆ.

 ಅರಣ್ಯ ಇಲಾಖೆಯ ನೂತನ ಪ್ರಯೋಗ!?!?

ಈ ಮಧ್ಯೆ ಕಾರ್ಕಳ ಅರಣ್ಯ ಇಲಾಖೆಯವರು ಪುಲಿಕೇರಿ ಬೈಪಾಸಿನಿಂದ ಸಾಣೂರು ಕಡೆಗೆ ಹೋಗುವ ಹೆದ್ದಾರಿಯ ಬಲ ಭಾಗದಲ್ಲಿ ಸಾಣೂರು ಮಠದ ಬೈಲು ಶಿವಾನಂದ ಕುಡ್ವರವರ ಜಮೀನಿನ ಎದುರು ರಸ್ತೆ ಬದಿಯಲ್ಲಿ ಒಂದಷ್ಟು ದೂಪದ ಸಸಿಗಳನ್ನು ಒತ್ತೊತ್ತಾಗಿ ಕೇವಲ ಮೂರು ಅಡಿ ಅಂತರದಲ್ಲಿ ಸಾಲಾಗಿ ನೆಟ್ಟಿರುತ್ತಾರೆ.

ದಿನೇ ದಿನೇ ತಾಪಮಾನ ಏರುತ್ತಿರುವ ಈ ದಿನಗಳಲ್ಲಿ ಸಸಿಗಳಿಗೆ ನೀರು ಹಾಕುವ ವ್ಯವಸ್ಥೆಯನ್ನು ಮಾಡುತ್ತಿಲ್ಲ…

  •  ಗಿಡಗಳನ್ನು ಒತ್ತೋತ್ತಾಗಿ ನೆಡಲಾಗಿದೆ!?!?

 ಬೆಂಡೆ ಗಿಡದ ರೀತಿಯಲ್ಲಿ ತೀರ ಒತ್ತೋತ್ತಾಗಿ ಬೃಹದಾಕಾರವಾಗಿ ಮರವಾಗಿ ಬೆಳೆಯಲಿರುವ ದೂಪದ ಸಸಿಗಳನ್ನು ನೆಟ್ಟಿರುವುದು ಯಾವ ಅನುಭವದ ಆಧಾರದಲ್ಲಿ ಎಂದು ತಿಳಿಯುತ್ತಿಲ್ಲ.

ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತು ಸುರಕ್ಷಿತ ಅಂತರದಲ್ಲಿ ಸಸಿಗಳು ಇರುವಂತ ನೋಡಿಕೊಂಡು ಬೇಸಿಗೆಯಲ್ಲಿ ಸಸಿಗಳಿಗೆ ನೀರುಣಿಸಿ ಪೋಷಣೆ ರಕ್ಷಣೆ ಮಾಡುವುದರ ಜೊತೆಗೆ ಬಹುಕಾಲ ನೆರಳು ಮತ್ತು ತಂಗಾಳಿಯನ್ನು ನೀಡಲಿರುವ ಸಾಲುಮರಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

 ವೈವಿಧ್ಯಮಯ ಗಿಡ _ಮರಗಳು ಬೇಕು.ಒಂದೇ ಜಾತಿಯ ಹತ್ತಾರು ಗಿಡಗಳನ್ನು ಒತ್ತೋತ್ತಾಗಿ ಒಂದೇ ಸಾಲಿನಲ್ಲಿ ನೆಡುವುವುದಕ್ಕಿಂತ ವೈವಿಧ್ಯಮಯ ಹಣ್ಣುಗಳನ್ನು ನೀಡುವ ಹಾಗೂ ಪ್ರಯಾಣಿಕರಿಗೆ ವಿಫುಲವಾದ ನೆರಳು ಮತ್ತು ತಂಗಾಳಿಯನ್ನು ನೀಡುವ ವಿವಿಧ ಪ್ರಭೇದಗಳ ಗಿಡಗಳನ್ನು ನೆಟ್ಟಿದ್ದರೆ ಬಹುಪಯೋಗಿಯಾಗುತ್ತಿತ್ತು.

  •  ನಾಮಫಲಕಗಳನ್ನು ಸ್ಥಾಪಿಸಬೇಕು

ಯಾವ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಈ ಗಿಡಗಳನ್ನು ಪ್ರಾಯೋಗಿಕವಾಗಿ ನೆಡಲಾಗಿದೆ ಎನ್ನುವ ಬಗ್ಗೆ ನಾಮಫಲಕಗಳನ್ನು ಸ್ಥಾಪಿಸಬೇಕು ಎಂದು ಸಾಣೂರು ನಾಗರಿಕರ ಮತ್ತು ಪರಿಸರ ಪ್ರೇಮಿಗಳ ಆಗ್ರಹವಾಗಿದೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ.

Previous Post

ಚಿಕ್ಕಮಗಳೂರು:ಆಟವಾಡುವಾಗ ಏರ್ ಗನ್ ಮಿಸ್ ಫೈರ್ ಆಗಿ 8 ವರ್ಷದ ಬಾಲಕ ಸಾವು..!!

Next Post

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಇತರರಿಗೆ ಜೀವದ ಸಾರ್ಥಕತೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಇತರರಿಗೆ ಜೀವದ ಸಾರ್ಥಕತೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಪ್ಪೆಕೆರೆ ಸುಬ್ರಾಯ ಭಾಗವತರ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಕಪ್ಪೆಕೆರೆ ಸುಬ್ರಾಯ ಭಾಗವತರ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

14/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 14 ಗುರುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 14 ಗುರುವಾರ )

14/05/2026
ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

13/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

13/05/2026

Recent News

ಕಪ್ಪೆಕೆರೆ ಸುಬ್ರಾಯ ಭಾಗವತರ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಕಪ್ಪೆಕೆರೆ ಸುಬ್ರಾಯ ಭಾಗವತರ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

14/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 14 ಗುರುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 14 ಗುರುವಾರ )

14/05/2026
ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

13/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

13/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved