Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆ ವಜ್ರದೇಹಿ ಶ್ರೀಗಳಿಂದ ಉದ್ಘಾಟನೆ :ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ..!!

Dhrishya News by Dhrishya News
10/04/2024
in ಸುದ್ದಿಗಳು
0
0
SHARES
14
VIEWS
Share on FacebookShare on Twitter

ಕಾರ್ಕಳ :ಏಪ್ರಿಲ್ 11:ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯ ಎರಡನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರನಂದ ಶ್ರೀಗಳು “ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಯ ಬಗ್ಗೆ ಯುವ ಜನತೆಯಲ್ಲಿ ಅರಿವನ್ನು ಮೂಡಿಸುವುದು ತೀರಾ ಅನಿವಾರ್ಯವಾಗಿದ್ದು ಈ ಅರಿವನ್ನು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ ಪ್ರತೀ ಇಲಾಖೆಗಳಲ್ಲೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಣಬಹುದು” ಎಂದು ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿರುವ ವಿದ್ಯಾಮಾತಾ ಅಕಾಡೆಮಿ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ನುಡಿಯನ್ನಾಡಿ ಸಂಸ್ಥೆಗೆ ಶುಭಾಶೀರ್ವಾದ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ಇದರ ಕಾರ್ಯದರ್ಶಿಗಳಾದ ಶ್ರೀ ಗುರುದಾಸ್ ಶೆಣೈ ರವರು ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಹಲವು ಅಧಿಕಾರಿಗಳನ್ನು ನೀಡಿದ ವಿದ್ಯಾಮಾತಾ ಅಕಾಡೆಮಿಯು ಉಡುಪಿ ಜಿಲ್ಲೆಗೂ ಕಾಲಿಟ್ಟದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಮತ್ತೊರ್ವ ಅತಿಥಿಯಾದ ಉಜ್ವಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಜಯ್ ಶೆಟ್ಟಿರವರು ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆಯ ಕೌಶಲ್ಯ ಸಾಮರ್ಥ್ಯವೂ ಕೂಡ ಬಹಳ ಮುಖ್ಯ ಎಂಬುದನ್ನು ಈ ಸಂಸ್ಥೆ ಈಗಾಗಲೇ ಸಾಬೀತು ಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

*ಸಾಧಕರಿಗೆ ಸನ್ಮಾನ:*

ಇದೇ ಸಂದರ್ಭದಲ್ಲಿ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜ್ ಹಾಗೂ ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ ನಲ್ಲಿ ಒಟ್ಟು 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರೊ.ಮಿತ್ರ ಪ್ರಭಾ ಹೆಗ್ಡೆ ಮತ್ತು ಶೈಕ್ಷಣಿಕ ಹಾಗೂ ಕನ್ನಡ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಜ್ಯೋತಿ ಗುರುಪ್ರಸಾದ್ ರವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನೆಲೆಯಲ್ಲಿ ಮಾತನಾಡಿ ಸ್ವಾಗತಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಸಂಸ್ಥೆಯ ಏಳಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಹಾಗೂ  ದಿನಾಂಕ 10.04.2024ರಿಂದ VAO ಮತ್ತು PDO ನೇಮಕಾತಿಯ ಆನ್ಲೈನ್ ತರಬೇತಿಯು ಪ್ರಾರಂಭವಾಗಲಿದೆ ಎಂದು ಘೋಷಿಸಿದರು.

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆಯ ಸಂಚಾಲಕರಾದ ಶ್ರೀಮತಿ ರಮಿತ ಶೈಲೇಂದ್ರ ರಾವ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಅಭ್ಯಾಗತರನ್ನು ಅಭಿನಂದಿಸಿದರು, ನೂತನ ಶಾಖೆಯ ಶುಭಾರಂಭದ ಸುಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರರು, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Previous Post

ಮಾಹೆ,ಮಣಿಪಾಲ ಮತ್ತು ಐ ಸಿ ಎಂ ಆರ್ ಜಂಟಿಯಾಗಿ ಡ್ರೋನ್‌ಗಳನ್ನು ಬಳಸಿಕೊಂಡು ವೈಮಾನಿಕ ಮಾದರಿ ಸಾರಿಗೆ ಮೂಲಕ ಆರೋಗ್ಯ ವಿತರಣಾ (ಮಾದರಿ -ಸ್ಯಾಂಪಲ್‌)ವ್ಯವಸ್ಥೆಯ ಉದ್ಘಾಟನೆ…!!

Next Post

ಅಪಾಯಕಾರಿ ಮತ್ತು ಕ್ರೂರ ಶ್ವಾನಗಳ ಸಾಕಾಣಿಕೆ ನಿಷೇಧ ಹೇರಿದ್ದ ಕೇಂದ್ರದ ಆದೇಶಕ್ಕೆ  ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಅಪಾಯಕಾರಿ ಮತ್ತು ಕ್ರೂರ ಶ್ವಾನಗಳ ಸಾಕಾಣಿಕೆ ನಿಷೇಧ ಹೇರಿದ್ದ ಕೇಂದ್ರದ ಆದೇಶಕ್ಕೆ  ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

05/05/2026
ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

04/05/2026
ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

04/05/2026
ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

04/05/2026

Recent News

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

05/05/2026
ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

04/05/2026
ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

04/05/2026
ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

04/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved