Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಉದ್ಯೋಗ/ಶಿಕ್ಷಣ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ :ಶೇ 81.15 ಮಂದಿ ಉತ್ತೀರ್ಣ : ದಕ್ಷಿಣ ಕನ್ನಡ ಪ್ರಥಮ ಉಡುಪಿಗೆ ದ್ವಿತೀಯ ಸ್ಥಾನ..!!

Dhrishya News by Dhrishya News
10/04/2024
in ಉದ್ಯೋಗ/ಶಿಕ್ಷಣ, ಸುದ್ದಿಗಳು
0
0
SHARES
48
VIEWS
Share on FacebookShare on Twitter

ಉಡುಪಿ: ಏಪ್ರಿಲ್ 10:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಬುಧವಾರ(ಏ.10) ಪ್ರಕಟಗೊಂಡಿದ್ದು,ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದಿದ್ದು,ಉಡುಪಿ ಜಿಲ್ಲೆ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ವೈಭವಿ ಆಚಾರ್ಯ 597 ಅಂಕ, ಕಾರ್ಕಳ ಜ್ಞಾನ ಸುಧಾ ಕಾಲೇಜಿನ ವಿದ್ಯಾರ್ಥಿ ಸಮ್ಯಕ್ ಆರ್. ಪ್ರಭು 595 ಅಂಕ, ವಾಣಿಜ್ಯ ವಿಭಾಗದಲ್ಲಿ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಎಸ್.ಎಚ್ 596 ಅಂಕ ಪಡೆಯುವ ಮೂಲಕ ರಾಜ್ಯ ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆ ಹೊಸ ವಿದ್ಯಾರ್ಥಿಗಳ ಒಟ್ಟಾರೆ ಶೇ.96.80 ಫಲಿತಾಂಶ ಪಡೆದಿದ್ದಾರೆ. ಕಳೆದ ವರ್ಷ ಶೇ.95.24ರಷ್ಟು ಫಲಿತಾಂಶ ಪಡೆದಿದ್ದಾರೆ.

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Assessment Board -KSEAB) ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದೆ. https://karresults.nic.in/ ವೆಬ್ ಸೈಟ್ ನಲ್ಲಿ 11 ಗಂಟೆ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು ತಿಳಿಸಿದೆ. ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಶೇಕಾಡ 6.48% ಹೆಚ್ಚಿನ‌ ಫಲಿತಾಂಶ ಈ ಬಾರಿ ಬಂದಿದೆ.

ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ದುರಾದೃಷ್ಟವೆಂದರೆ 35 ಕಾಲೇಜುಗಳಿಗೆ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಒಟ್ಟು 463 ಕಾಲೇಜುಗಳಲ್ಲಿ ಶೇ. 100% ಫಲಿತಾಂಶ ಬಂದಿದ್ದು, ಅದರಲ್ಲಿ 91 ಸರ್ಕಾರಿ ಕಾಲೇಜುಗಳಲ್ಲಿ ಶೇ.100% ಫಲಿತಾಂಶ ಬಂದಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಿಬಿಎಂಪಿ ಕಾಲೇಜುಗಳಲ್ಲಿ ಫಲಿತಾಂಶ ಕುಸಿತ ಕಂಡಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ: 

1. ದಕ್ಷಿಣ ಕನ್ನಡ 97.37%

2. ಉಡುಪಿ 96.80%

3. ವಿಜಯಪುರ 94.89%

4. ಉತ್ತರ ಕನ್ನಡ 92.51%

5. ಕೊಡಗು 92.13%

6. ಬೆಂಗಳೂರು ದಕ್ಷಿಣ 89.57%

7. ಬೆಂಗಳೂರು ಉತ್ತರ 88.67%

8. ಶಿವಮೊಗ್ಗ 88.58%

9. ಚಿಕ್ಕಮಗಳೂರು 88.20%

10. ಬೆಂಗಳೂರು ಗ್ರಾಮಾಂತರ 87.55%

11. ಬಾಗಲಕೋಟೆ 87.54%

12. ಕೋಲಾರ 86.12%

13. ಹಾಸನ 85.83%

14. ಚಾಮರಾಜನಗರ 84.99%

15. ಚಿಕ್ಕೋಡಿ 84.10%

16. ರಾಮನಗರ 83.58%

17. ಮೈಸೂರು 83.13%

18. ಚಿಕ್ಕಬಳ್ಳಾಪುರ 82.84%

19. ಬೀದರ್ 81.69%

20. ತುಮಕೂರು 81.03%

21. ದಾವಣಗೆರೆ 80.96%

22. ಕೊಪ್ಪಳ 80.83%

23. ಧಾರವಾಡ 80.70%

24. ಮಂಡ್ಯ 80.56%

25. ಹಾವೇರಿ 78.36%

 

26.ಯಾದಗಿರಿ 77.29%

27. ಬೆಳಗಾವಿ 77.20%

28. ಕಲಬುರಗಿ 75.48%

29. ಬಳ್ಳಾರಿ 74.70%

30. ರಾಯಚೂರು 73.11%

31. ಚಿತ್ರದುರ್ಗ 72.92%

32. ಗದಗ 72.86%

ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು

ಬೆಂಗಳೂರಿನ ಮೇಧಾ ಡಿ

ವಿಜಯಪುರದ ವೇದಾಂತ್

ಬಳ್ಳಾರಿಯ ಕವಿತಾ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌

ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು (597) ಪ್ರಥಮ ಸ್ಥಾನ

ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ

ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ

ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ

ತೇಜಸ್ವಿನಿ ಕೆ. ಕಾಲೆ , MES ಮಲ್ಲೇಶ್ವರ 596 ದ್ವಿತೀಯ ಸ್ಥಾನ

ವಿಜ್ಞಾನ ವಿಭಾಗ ರಾಜ್ಯಕ್ಕೆ ಟಾಪರ್‌

ವಿದ್ಯಾಲಕ್ಷ್ಮಿ – ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು -598 (ಪ್ರಥಮ ಸ್ಥಾನ)

ಉರ್ವಿಷ್​​​ ಪ್ರಶಾಂತ್ -‌ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 (ದ್ವಿತೀಯ ಸ್ಥಾನ)

ವೈಭವಿ ಆಚಾರ್ಯ – ವಿದ್ಯೋಧಯ ಪಿಯು ಕಾಲೇಜು, ಉಡುಪಿ -597 (ದ್ವಿತೀಯ ಸ್ಥಾನ)

ಜಾಹ್ನವಿ – ಆರ್.ವಿ.ಪಿಬಿ ಪಿಯು ಕಾಲೇಜು ಮೈಸೂರು -597 (ದ್ವಿತೀಯ ಸ್ಥಾನ)

ಗುಣಸಾಗರ್ – ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ – 597 (ದ್ವಿತೀಯ ಸ್ಥಾನ)

35 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ ಇಂತಿದೆ. 

ಸರ್ಕಾರಿ ಕಾಲೇಜು- 02

ಅನುದಾನಿತ ಕಾಲೇಜು – 06

ಅನುದಾನ‌‌‌ ರಹಿತ ಕಾಲೇಜು – 26

ವಿಭಜಿತ ಪದವಿ ಪೂರ್ವ ಕಾಲೇಜು – 01

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು – 6,98,378

ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690

ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ – 1,53,370

ಶೇ.60% – 2,89733

ದ್ವಿತೀಯ ದರ್ಜೆ- 72,098 

ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು – 37,489

 

Previous Post

ನಾಳೆ ದ್ವಿತೀಯ ಪಿ ಯು ಸಿ ಪರೀಕ್ಷಾ ಫಲಿತಾಂಶ ಪ್ರಕಟ..!!

Next Post

ಉಡುಪಿ :ಶ್ರೀ ಕೃಷ್ಣಮಠಕ್ಕೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ದಂಪತಿಗಳು ಭೇಟಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ :ಶ್ರೀ ಕೃಷ್ಣಮಠಕ್ಕೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ದಂಪತಿಗಳು ಭೇಟಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

11/08/2026
ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

11/08/2026
ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

11/08/2026
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

11/08/2026

Recent News

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

11/08/2026
ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

11/08/2026
ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

11/08/2026
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

11/08/2026