Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಏಪ್ರಿಲ್ 1ರಿಂದ ಸುಮಾರು 800 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ದುಬಾರಿ..!!

Dhrishya News by Dhrishya News
20/03/2024
in ರಾಜ್ಯ/ ರಾಷ್ಟ್ರೀಯ
0
0
SHARES
114
VIEWS
Share on FacebookShare on Twitter

ನವದೆಹಲಿ:ಮಾರ್ಚ್ 20:ಏಪ್ರಿಲ್ 1ರಿಂದ ಸುಮಾರು 800 ಅಗತ್ಯ ಔಷಧ (Essential Drugs)ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಸಗಟು ಬೆಲೆ ಸೂಚ್ಯಂಕ (Wholesale Price Index) ಅಂಕಿಅಂಶಗಳ ಆಧಾರದ ಮೇಲೆ ನೋವು ನಿವಾರಕಗಳು, ಆ್ಯಂಟಿಬಯಾಟಿಕ್ಸ್‌ ಮತ್ತು ಸೋಂಕು ನಿವಾರಕಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳು ಅಲ್ಪ ಏರಿಕೆ ಕಾಣಲಿವೆ ಎಂದು ಮೂಲಗಳು ತಿಳಿಸಿವೆ.

ಅಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್‌ನಂತಹ ಮಾತ್ರೆಗಳು, ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಅಜಿಥ್ರೊಮೈಸಿನ್‌ನಂತಹ ಆ್ಯಂಟಿಬಯಾಟಿಕ್ಸ್‌, ರಕ್ತಹೀನತೆ ವಿರೋಧಿ ಔಷಧಗಳು, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ಜತೆಗೆ ಮಧ್ಯಮದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಬಳಸುವ ಕೆಲವು ಔಷಧಗಳು ಮತ್ತು ಸ್ಟೀರಾಯ್ಡ್‌ಗಳು ಸಹ ಪಟ್ಟಿಯಲ್ಲಿವೆ.

ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (National List of Essential Medicines)ಯ ಅಡಿಯಲ್ಲಿ ಬರುವ ಔಷಧಗಳ ಬೆಲೆಯಲ್ಲಿ .0055% ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಲು ಸಜ್ಜಾಗಿದೆ. ಕಳೆದ ವರ್ಷ ಮತ್ತು 2022ರಲ್ಲಿ ಈ ಔಷಧಗಳ ಬೆಲೆಗಳಲ್ಲಿ 12% ಮತ್ತು 10%ದಷ್ಟು ಭಾರಿ ಹೆಚ್ಚಳದ ನಂತರ ಮತ್ತೊಮ್ಮೆ ದರ ಹೆಚ್ಚಿಸಲಾಗುತ್ತಿದೆ. ನಿಗದಿತ ಔಷಧಗಳ ಬೆಲೆಗಳ ಬದಲಾವಣೆಯನ್ನು ವರ್ಷಕ್ಕೊಮ್ಮೆ ಅನುಮತಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವ

ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔಷಧ ತಯಾರಕರು ದರ ವೃದ್ಧಿಸಲು ಆಗ್ರಹಿಸುತ್ತಿದ್ದಾರೆ. ಉದ್ಯಮದ ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಕೆಲವು ಪ್ರಮುಖ ಔಷಧೀಯ ಪದಾರ್ಥಗಳ ಬೆಲೆಗಳು 15% ಮತ್ತು 130% ನಡುವೆ ಹೆಚ್ಚಾಗಿದೆ. ಜತೆಗೆ ಪ್ಯಾರಸಿಟಮಾಲ್ ಬೆಲೆ 130% ಮತ್ತು ಎಕ್ಸಿಪಿಯೆಂಟ್‌ಗಳ ಬೆಲೆ 18-262% ಹೆಚ್ಚಾಗಿದೆ.

ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು ಸೇರಿದಂತೆ ಪ್ರತಿ ಔಷಧ ತಯಾರಿಕೆಯಲ್ಲಿ ಬಳಸುವ ದ್ರಾವಕಗಳು ಕ್ರಮವಾಗಿ 263% ಮತ್ತು 83%ದಷ್ಟು ದುಬಾರಿಯಾಗಿವೆ. ಮಧ್ಯವರ್ತಿಗಳ ಬೆಲೆಗಳು ಸಹ 11% ಮತ್ತು 175% ನಡುವೆ ಹೆಚ್ಚಾಗಿದೆ. ಪೆನ್ಸಿಲಿನ್ ಜಿ 175% ದುಬಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಅಗತ್ಯ ಔಷಧಗಳು ಮತ್ತು ಜೀವರಕ್ಷಕ ಔಷಧಗಳ ಬೆಲೆ ಕಳೆದ ವರ್ಷ 12.12%ದಷ್ಟು ಏರಿಕೆಯಾಗಿತ್ತು. ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಪ್ರತಿವರ್ಷ ಸಗಟು ಬೆಲೆ ಸೂಚ್ಯಂಕವನ್ನು ‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಪರಿಷ್ಕರಿಸುತ್ತದೆ.

‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್‌ ಡ್ರಗ್ಸ್‌ ಎಂದು ವರ್ಗೀಕರಿಸಲಾಗುತ್ತದೆ. ನಾನ್‌ ಶೆಡ್ಯೂಲ್ಡ್‌ ಔಷಧಗಳ ಬೆಲೆಗಳು ಪ್ರಾಧಿಕಾರದ ನಿಯಂತ್ರಣದಲ್ಲಿರುವುದಿಲ್ಲ. ಅವುಗಳ ಬೆಲೆಯನ್ನು ವಾರ್ಷಿಕ ಗರಿಷ್ಠ 10%ದಷ್ಟು ಹೆಚ್ಚಿಸಲು ಅವಕಾಶವಿದೆ.

Previous Post

ರಾಜ್ಯದಲ್ಲಿ ಮನುಷ್ಯನ ಜೀವಕ್ಕೆ ಅಪಾಯಕಾರಿ  ಮತ್ತು ಕ್ರೂರ  ನಾಯಿಗಳ ನಿಷೇಧಕ್ಕೆ ಹೈಕೋರ್ಟ್ ತಡೆ..!!

Next Post

ಬಂಟ್ವಾಳ :ಚಿಕಿತ್ಸೆ ಫಲಕಾರಿಯಾಗದೇ 2ನೇ ತರಗತಿ ವಿದ್ಯಾರ್ಥಿನಿ ನಿಧನ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಬಂಟ್ವಾಳ :ಚಿಕಿತ್ಸೆ ಫಲಕಾರಿಯಾಗದೇ 2ನೇ ತರಗತಿ ವಿದ್ಯಾರ್ಥಿನಿ ನಿಧನ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

11/08/2026
ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

11/08/2026
ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

11/08/2026
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

11/08/2026

Recent News