Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಪುನೀತ್‌ ಹೆಸರಲ್ಲಿ “ಹೃದಯ ಜ್ಯೋತಿ” ಯೋಜನೆ:ಹೃದಯಾಘಾತದಿಂದ ಸಾವು ತಡೆಗೆ ಸಿಗಲಿದೆ ‘ಉಚಿತ ಇಂಜಕ್ಷನ್’.

Dhrishya News by Dhrishya News
16/03/2024
in ರಾಜ್ಯ/ ರಾಷ್ಟ್ರೀಯ
0
0
SHARES
14
VIEWS
Share on FacebookShare on Twitter

ಬೆಂಗಳೂರು : ಮಾರ್ಚ್ 16: ಹೃದಯಾಘಾತಗಳನ್ನ ತಡೆಯುವಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಧಾರವಾಡದಲ್ಲಿ ನಿನ್ನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಚಾಲನೆ ನೀಡಿದರು.

ಪುನೀತ್ ರಾಜಕುಮಾರ್ ಅವರನ್ನ ನೆನಪಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್ ಅವರು, ಜನರ ಜೀವ ಉಳಿಸುವ ಇಂಥಹ ಕಾರ್ಯಕ್ರಮಗಳಿಗೆ ಪುನೀತ್ ರಾಜಕುಮಾರ್ ಅವರು ಮೇಲಿಂದಲೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಯಾರಿಗೇ ಎದುನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯೆ ಮಾಡದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿಸಿಕೊಳ್ಳಿ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆಯವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಏನಿದು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ?

ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 86 ಸರ್ಕಾರಿ ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ 6 ನಿಮಿಷದೊಳಗೆ ಅವರ ಕಂಡಿಷನ್ ಕ್ರಿಟಕಲ್ ಹಂತದಲ್ಲಿದೆಯೋ ಇಲ್ಲವೋ ಎಂಬುದನ್ನ AI ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುವುದು. Tricog ಸಂಸ್ಥೆಯವರ AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆಯನ್ನ ನೀಡುತ್ತಾರೆ. ಕ್ರಿಟಿಕಲ್ ಎಂದು ಖಚಿತವಾದ ತಕ್ಷಣವೇ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನ ಸ್ಪೋಕ್ ಕೇಂದ್ರಗಳಾದ ತಾಲೂಕು ಆಸ್ಪತ್ರೆಯಲ್ಲೇ ನೀಡಲಾಗುವುದು. ಇದರಿಂದ ಹಠಾತ್ ಹೃದಯಾಘಾತವನ್ನ ತಡೆಯುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾದುನಿಕ ಅಂಬುಲೆನ್ಸ್ ನಲ್ಲಿ ಹಬ್ ಕೇಂದ್ರಳಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳಿಸಿಕೊಡಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೋಲ್ಡನ್ ಅವರ್ ಒಳಗಡೆ ಜೀವ ಉಳಿಸುವ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಲಾಗಿದೆ.‌

ಮೊದಲ ಹಂತದಲ್ಲಿಯೇ ಗಮನಸೆಳೆದ ಯೋಜನೆ

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ STEMI ಹೆಸರಲ್ಲಿ ಹಬ್ ಸ್ಪೋಕ್ ಮಾದರಿಯನ್ನ ಜಯದೇವಾ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಮೊದಲ ಹಂತದ ಯೋಜನೆಯಲ್ಲಿ ಜೀವರಕ್ಷಕವಾಗಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಂದಿನಿಂದ ಈ ಚುಚ್ಚುಮದ್ದು ಲಭ್ಯವಾಗಲಿದ್ದು ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ಸೇವೆ ಒದಗಿಸುವಲ್ಲಿ ಅನುಕೂಲವಾಗಲಿದೆ. ಮೊದಲ ಹಂತದಲ್ಲಿ ಇಲ್ಲಿಯವರೆವಿಗೂ ಸುಮಾರು 1,23,607 ಹೃದಯಸಂಬಂಧಿ ರೋಗಲಕ್ಷಣ ಹೊಂದಿರುವವರನ್ನು ಈ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗಿದ್ದು, 1,27,999 ECG ಗಳನ್ನು ತೆಗೆಯಲಾಗಿದೆ, ಮತ್ತು 2,088 ಹೃದಯಾಘಾತ ರೋಗಿಗಳಿಗೆ ಉನ್ನತ ಮಟ್ಟದ ಹಬ್ ಆಸ್ಪತ್ರೆಗಳಲ್ಲಿ 511 ಥಂಬೋಲಿಸಿಸ್, 371 ಆಂಜಿಯೋಪ್ಲಾಸ್ಟಿ, ಮತ್ತು 07 ಬೈಪಾಸ್ ಸರ್ಜರಿಗಳನ್ನ ನಡೆಸಲಾಗಿದೆ. ಇನ್ನು ಉಳಿದವರು ಔಷಧಿ ಚಿಕಿತ್ಸೆಯನ್ನು ಮುಂದುರೆಸಿರುತ್ತಾರೆ.

ಕಾರ್ಯಕ್ರಮದ ಎರಡನೇ ಹಂತದ ಹೈಲೈಟ್ಸ್

15 ಜಿಲ್ಲೆಗಳಲ್ಲಿ – 8 HUBs (ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ, ಮತ್ತು ಬಳ್ಳಾರಿ ಹಬ್)

41 SPOKES (05 ಜಿಲ್ಲಾ ಮತ್ತು 36 ತಾಲ್ಲೂಕು, ಆಸ್ಪತ್ರೆಗಳಲ್ಲಿ)

ಹಠಾತ್ ಹೃದಯಾಘಾತ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚು ಪರಿಣಾಮಕಾರಿಯಾದ ಔಷಧಿ 25,000/- ರಿಂದ ರೂ.30,000 ಸಾವಿರ ಮೌಲ್ಯದ Injection Tenecteplase (30mg, 40mg) ಎಲ್ಲಾ ತೀವ್ರ ಹೃದಯಾಘಾತ ರೋಗಿಗಳಿಗೆ SPOKES ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ನೀಡಲಾಗುತ್ತದೆ.

ಹೃದಯಾಘಾತ ರೋಗಿಗಳ ಉತ್ತಮ ಹಾಗೂ ಗುಣ ಮಟ್ಟದ ನಿರ್ವಹಣೆಗಾಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ 2 ದಿವಸದ CCLS (Coronary Care Life Support) ತರಬೇತಿಯನ್ನು ಮತ್ತು 01 ದಿನದ STLS (Safe Transport Life Support) ತರಬೇತಿಯನ್ನು ಜೀವರಕ್ಷ ಟ್ರಸ್ಟ್ ವತಿಯಿಂದ ನೀಡಲಾಗುವುದು.

41 AED – Automated External Defibrillator ಸಾಧನಗಳನ್ನು ಜನದಟ್ಟನೆಯ ಸಾರ್ವಜನಿಕ ಸ್ಥಳಗಳಲ್ಲಿ (ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ನ್ಯಾಯಾಲಯ ಸಂಕೀರ್ಣಗಳು ಆಸ್ಪತ್ರೆಗಳಲ್ಲಿ) ಹಠಾತ್ ಹೃದಯಾಘಾತ ದಿಂದಾಗುವ ಮರಣಗಳನ್ನು ತಪ್ಪಿಸಲು 2ನೇ ಹಂತದ ಪ್ರಮುಖ ಅಂಶವಾಗಿದ್ದು ಅತಿ ಶೀಘ್ರದಲ್ಲಿ ಅಳವಡಿಸಲಾಗುವುದು

Previous Post

277 ಹುದ್ದೆಗಳ ಭರ್ತಿಗೆ KPSC ಅಧಿಸೂಚನೆ:ಅರ್ಜಿ ಸಲ್ಲಿಸಲು ಏಪ್ರಿಲ್‌ 15 ರಿಂದ ಮೇ 14ರವರೆಗೆ ಅವಕಾಶ…!!

Next Post

ಉಜಿರೆ : ಮೊಬೈಲ್ ಪೋನ್ ರಿಪೇರಿಗೆ ಉಚಿತ ತರಬೇತಿ’: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಜಿರೆ : ಮೊಬೈಲ್ ಪೋನ್ ರಿಪೇರಿಗೆ ಉಚಿತ ತರಬೇತಿ': ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved