Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಸರ್ಕಾರಿ ಆಸ್ಪತ್ರೆ’ಯಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ‘ಖಾಸಗಿ ಲಾಬ್’ ಬಂದ್ ಮಾಡುವಂತೆ ರಾಜ್ಯ ಸರಕಾರ ಆದೇಶ …!

Dhrishya News by Dhrishya News
29/02/2024
in ಆರೋಗ್ಯ, ರಾಜ್ಯ/ ರಾಷ್ಟ್ರೀಯ
0
0
SHARES
101
VIEWS
Share on FacebookShare on Twitter

ಬೆಂಗಳೂರು :ಫೆಬ್ರವರಿ 29: ರಾಜ್ಯಾಧ್ಯಂತ ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೇ ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿ ನೀಡದಂತೆ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ, 2017 ರ ಸೆಕ್ಷನ್ 6 ರನ್ವಯ, ದಿನಾಂಕ. 04-04-2019 ರಿಂದ ಜಾರಿಗೆ ಬರುವಂತೆ, ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡತಕ್ಕದ್ದಲ್ಲ ಎಂದು ತಿಳಿಸಿದ್ದಾರೆ.

 

ಅದಾಗ್ಯೂ, ಕೆಲವು ಅನಧಿಕೃತ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಅಂತರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಸಂಬಂಧ ಈ ಆಯುಕ್ತಾಲಯಕ್ಕೆ ದೂರು ಸ್ವೀಕೃತಗೊಂಡ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಮತ್ತು ಸರ್ಕಾರಿ ಆಸ್ಪತ್ರೆಯಿಂದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡುವಂತೆ ಮತ್ತು ಅವುಗಳು ಕೆ.ಪಿ.ಎಂ.ಇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಅಂತಹ ಪುಯೋಗಾಲಯಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈಗಾಗಲೇ ದಿನಾಂಕ.12.10.2023ರ ಸುತ್ತೋಲೆ ಸಂಖ್ಯೆ.ಜೆಡಿ(ಎಂ)/ಕೆ.ಪಿ.ಎಂ.ಇ/66/2020-21(e-1193994) ಯಲ್ಲಿ ಆದೇಶಿಸಲಾಗಿತ್ತು. ಹಾಗಿದ್ದರೂ ಸದರಿ ಆದೇಶದಂತೆ ಯಾವುದೇ ಜಿಲ್ಲೆಗಳು ಕಟ್ಟು ನಿಟ್ಟಿನ ಕ್ರಮವಹಿಸದೇ ಇರುವುದನ್ನು ಗಮನಿಸಲಾಗಿ, ಈ ಕೆಳಗಿನಂತೆ ಆದೇಶಿಸಿದೆ.

 

ದಿನಾಂಕ. 04.04.2019 ದ ನಂತರದಿಂದ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, “ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರುಗಳ ದೂರದ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ”, ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಎಂ.ಇ ಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಪ್ರಾಧಿಕೃತ ಅಧಿಕಾರಿಗಳು, ಕೆ.ಪಿ.ಎಂ.ಇ ಇವರಿಗೆ ಆದೇಶಿಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶಿಸಿದೆ. ಹಾಗೂ ಮೊಹರು ಬಂದ್ ಮಾಡಲಾದ ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸಂಪೂರ್ಣ ಕ್ರೂಢೀಕೃತ ವಿವರವನ್ನು ದಿನಾಂಕ:30.03.2024 ರೊಳಗೆ dd2medical@gmail.com ಗೆ ತಪ್ಪದೆ ರವಾನಿಸಲು ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

 

 

 

 

Previous Post

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ “ಭಾರತ್ ಅಕ್ಕಿ “ಮಾರಾಟಕ್ಕೆ ಉಡುಪಿಯಲ್ಲಿಂದು ಚಾಲನೆ :ಶಾಸಕ ಯಶ್ ಪಾಲ್ ಸುವರ್ಣ..!!

Next Post

ಮಲ್ಪೆ :ಮೀನುಗಾರಿಕೆ ಮುಗಿಸಿ ವಾಪಸು ಬರುತ್ತಿರುವ ಆಳಸಮುದ್ರ ಬೋಟಿನ ಮೇಲೆ ಆಕ್ರಮಣ :ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ಸಹಿತ 7 ಮಂದಿ ಮೀನುಗಾರರ ಅಪಹರಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಲ್ಪೆ :ಮೀನುಗಾರಿಕೆ ಮುಗಿಸಿ ವಾಪಸು ಬರುತ್ತಿರುವ ಆಳಸಮುದ್ರ ಬೋಟಿನ ಮೇಲೆ ಆಕ್ರಮಣ :ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ಸಹಿತ 7 ಮಂದಿ ಮೀನುಗಾರರ ಅಪಹರಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 04 ಸೋಮವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 04 ಸೋಮವಾರ )

04/05/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

03/05/2026
ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

03/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

03/05/2026

Recent News

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 04 ಸೋಮವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 04 ಸೋಮವಾರ )

04/05/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

03/05/2026
ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

03/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

03/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved