Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ: ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ..!!

Dhrishya News by Dhrishya News
23/02/2024
in ಸುದ್ದಿಗಳು
0
0
SHARES
196
VIEWS
Share on FacebookShare on Twitter

ಉಡುಪಿ:ಫೆಬ್ರವರಿ 23: ಎರಡು ವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿ ಮಗುವಿಗೆ ಜನ್ಮ ನೀಡಲು ಕಾರಣನಾದ ಪ್ರಕರಣದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಗುರುವಾರ ಆದೇಶ ನೀಡಿದೆ

ಬೈಂದೂರು ಹಳ್ಳಿಹೊಳೆ ನಿವಾಸಿ, ಬಸ್‌ ನಿರ್ವಾಹಕ ಪ್ರಶಾಂತ ಪೂಜಾರಿ (25) ಶಿಕ್ಷೆಗೆ ಗುರಿಯಾಗಿರುವಾತ. ಸಂತ್ರಸ್ತ ಬಾಲಕಿ ಶಾಲೆಗೆ ಹೋಗುವ ಸಂದರ್ಭ 5 ವರ್ಷಗಳಿಂದ ಪರಿಚಯವಿದ್ದ ಪ್ರಶಾಂತ ಪೂಜಾರಿ 2022ರ ಜುಲೈಯಲ್ಲಿ ಬಾಲಕಿಯನ್ನು ಒತ್ತಾಯಪಡಿಸಿ ತನ್ನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿಂದ ಬಲವಂತವಾಗಿ ಆತನ ಮನೆಗೆ ಕರೆದುಕೊಂಡು ಹೋಗಿ ಬಲವಂತದ ದೈಹಿಕ ಸಂಪರ್ಕ ನಡೆಸಿದ್ದನು.

ಬಳಿಕ ನೊಂದ ಬಾಲಕಿಗೆ ಮುಟ್ಟಿನ ಸಮಸ್ಯೆ ಉಂಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿದೆ. ಅದರಂತೆ ನೊಂದ ಬಾಲಕಿಯ ಅಜ್ಜಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಮಹಾಬಲೇಶ್ವರ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು.

20 ಸಾಕ್ಷಿಗಳ ಪೈಕಿ 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕಿ ಅನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಡಿಎನ್‌ಎ ತನಿಖೆ ಮಾಡಿದ್ದು, ಆರೋಪಿ ಮಗುವಿನ ತಂದೆ ಎಂಬುದಾಗಿ ವರದಿ ಬಂದಿತ್ತು. ಆರೋಪಿಯ ಮೇಲೆ ಈಗಾಗಲೇ ಮತ್ತೂಂದು ಪೋಕ್ಸೋ ಪ್ರಕರಣ ದಾಖಲಾಗಿದ್ದು, ಅದರಂತೆ ನೊಂದ ಬಾಲಕಿಯ ಸಾಕ್ಷ್ಯ, ಸಾಂದರ್ಭಿಕ ಸಾಕ್ಷಿಗಳು ಮತ್ತು ಆಯೋಜನೆಯು ಆರೋಪಿಯ ಅಪರಾಧವನ್ನು ಸಾಬೀತುಪಡಿಸಿತು.

ಈ ಎಲ್ಲ ವಿಚಾರಗಳನ್ನು ಗಮನಿಸಿದ ಹೆಚ್ಚುವರಿ ಪೋಕ್ಸೋ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ ನೊಂದ ಬಾಲಕಿಯನ್ನು ಬಲವಂತವಾಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದುಕೊಂಡು ಹೋಗಿರುವ ಬಗ್ಗೆ 3 ವರ್ಷ ಕಠಿನ ಸಜೆ, 5 ಸಾವಿರ ರೂ.ದಂಡ ಮತ್ತು ಅತ್ಯಾಚಾರಕ್ಕೆ 10 ವರ್ಷ ಸಜೆ, 10 ಸಾವಿರ ರೂ. ದಂಡ, ಅಪ್ರಾಪೆ ಗರ್ಭಿಣಿಯಾಗಲು ಕಾರಣವಾದುದಕ್ಕೆ 20 ವರ್ಷಗಳ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ

ದಂಡದ ಮೊತ್ತದಲ್ಲಿ 25 ಸಾವಿರ ರೂ.ಗಳನ್ನು ನೊಂದ ಬಾಲಕಿಗೆ ಹಾಗೂ 10 ಸಾವಿರ ರೂ.ಗಳನ್ನು ಸರಕಾರಕ್ಕೆ ಪಾವತಿಸುವಂತೆ ಹಾಗೂ ನೊಂದ ಬಾಲಕಿಗೆ ಸರಕಾರ ಪರಿಹಾರವಾಗಿ 2 ಲ.ರೂ. ನೀಡುವಂತೆ ಸರಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.

ಪ್ರಕರಣದ ತನಿಖೆಯನ್ನು ಮಾನ್ಯ ವೃತ್ತ ನಿರೀಕ್ಷಕರಾದ ಮಹಾಬಲೇಶ್ವರ S N ಅವರು ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ ಆರೋಪಿಗೆ ಶಿಕ್ಷೆಯಾಗಲು ಕಾರಣರಾಗಿರುತ್ತಾರೆ

Previous Post

1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ..!!

Next Post

ಮಂಗಳೂರು : 25 ನೇ ವಯಸ್ಸಿಗೆ ಕರ್ನಾಟಕದ ಸಿವಿಲ್ ನ್ಯಾಯದೀಶರಾದ ಅನಿಲ್ ಜೋನ್ ಸಿಕ್ವೇರಾ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಂಗಳೂರು : 25 ನೇ ವಯಸ್ಸಿಗೆ ಕರ್ನಾಟಕದ ಸಿವಿಲ್ ನ್ಯಾಯದೀಶರಾದ ಅನಿಲ್ ಜೋನ್ ಸಿಕ್ವೇರಾ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026

Recent News

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved