Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಕಾರ್-ಟಿ ಸೆಲ್ ಸ್ವದೇಶಿ ಕ್ಯಾನ್ಸರ್ ಚಿಕಿತ್ಸಾ ಪದ್ಧತಿ:ಮೂವರು ಗುಣಮುಖ..!!

Dhrishya News by Dhrishya News
08/02/2024
in ಆರೋಗ್ಯ
0
0
SHARES
25
VIEWS
Share on FacebookShare on Twitter

ನವದೆಹಲಿ :ಫೆಬ್ರವರಿ 08:ಕೆಲವು ತಿಂಗಳ ಹಿಂದೆ, ಭಾರತದ ಔಷಧ ನಿಯಂತ್ರಕ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ಸಿಎಆರ್-ಟಿ ಸೆಲ್ ಥೆರಪಿಯ ವಾಣಿಜ್ಯ ಬಳಕೆಗೆ ಅನುಮೋದನೆ ನೀಡಿತು. ಈ ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆನುವಂಶಿಕವಾಗಿ ಮರು-ಪ್ರೋಗ್ರಾಮಿಂಗ್ ಮಾಡುವುದನ್ನು ಒಳಗೊಂಡಿದೆ

ಕ್ಯಾನ್ಸರ್ ಚಿಕಿತ್ಸೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ಕಾರ್-ಟಿ ಸೆಲ್ ಥೆರಪಿ’ಗೆ ಒಳಗಾದ 15 ರೋಗಿಗಳ ಪೈಕಿ ಮೂವರಲ್ಲಿ ಕ್ಯಾನ್ಸರ್‌ ಸಂಪೂರ್ಣ ವಾಗಿ ಗುಣಮುಖವಾಗಿರುವ ಕ್ರಾಂತಿ ಕಾರಕ ಸಂಗತಿ ಬೆಳಕಿಗೆ ಬಂದಿದೆ.ಇಮ್ಯುನೋ ಆ್ಯಕ್ಟ್ ಎಂಬ ಕಂಪನಿ, ಐಐಟಿ ಬಾಂಬೆ ಹಾಗೂ ಟಾಟಾ ಮೆಮೋರಿಯಲ್ ಆಸತ್ರೆಗಳು ಸೇರಿ ಈ ಚಿಕಿತ್ಸೆಯನ್ನು ರೂಪಿಸಿವೆ. ಇದನ್ನು ದೇಶದಲ್ಲಿ 15 ಮಂದಿಗೆ ನೀಡಲಾಗಿದೆ. ಆ ಪೈಕಿ ಮೂವರಲ್ಲಿ ಕ್ಯಾನ್ಸರ್ ಗುಣಮುಖವಾಗಿದೆ. ಉಳಿದವರ ಚಿಕಿತ್ಸಾ ವರದಿಗಾಗಿ ಕಾಯಲಾಗುತ್ತಿದೆ. ಈ ಚಿಕಿತ್ಸೆಗೆ ವಿದೇಶದಲ್ಲಿ 3ರಿಂದ 4 ಕೋಟಿ ರು. ವೆಚ್ಚವಾಗಲಿದ್ದು, 40 ಲಕ್ಷ ರು.ಗೆ ಭಾರತದಲ್ಲಿ ಈ ಚಿಕಿತ್ಸೆ ದೊರೆಯಲಿದೆ.

ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆನುವಂಶಿಕವಾಗಿ ಮರು-ಪ್ರೋಗ್ರಾಮ್ ಮಾಡುವ ಪ್ರವರ್ತಕ ಚಿಕಿತ್ಸೆಯಾದ ಸಿಎಆರ್-ಟಿ ಸೆಲ್ ಥೆರಪಿಯ ವಾಣಿಜ್ಯ ಬಳಕೆಗೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದ ತಿಂಗಳುಗಳ ನಂತರ, ದೆಹಲಿ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಗುಪ್ತಾ ಅವರು 42 ಲಕ್ಷ ರೂ.ಗಳನ್ನು ಪಾವತಿಸುವ ಮೂಲಕ ಚಿಕಿತ್ಸೆಯನ್ನು ಪಡೆದ ಮೊದಲ ರೋಗಿಗಳಲ್ಲಿ ಒಬ್ಬರಾಗಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು, ಅವರು ಪ್ರಸ್ತುತ ಕ್ಯಾನ್ಸರ್ ಕೋಶಗಳಿಂದ ಮುಕ್ತರಾಗಿದ್ದಾರೆ, ಆ ಸ್ಥಾನಮಾನವನ್ನು ಸಾಧಿಸಿದ ಮೊದಲ ವಾಣಿಜ್ಯ ರೋಗಿ ಎಂದು ತಿಳಿಸಿದೆ.

ಸೇನೆಯಲ್ಲಿ ವೈದ್ಯರಾಗಿದ್ದ ಡಾ| ಕರ್ನಲ್ ವಿ. ಕೆ. ಗುಪ್ತಾ (64) ಎಂಬುವರು ಕೂಡ ಈ ಚಿಕಿತ್ಸೆಗೆ ಒಳಗಾಗಿದ್ದಾರೆ. ಸಾವಿಗೆ ದಿನಗಣನೆ ಎಣಿಸುತ್ತಿದ್ದ ಅವರು ಸಂಪೂರ್ಣ ಗುಣಮುಖರಾಗಿದ್ದು, ಕಾರ್-ಟಿ ಥೆರಪಿಯಿಂದ ಗುಣಮುಖರಾದ ದೇಶದ ಮೊದಲ ಕ್ಯಾನ್ಸ‌ರ್ ರೋಗಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಚಿಕಿತ್ಸೆ ಪಡೆದ ಎರಡೇ ವಾರದಲ್ಲಿ ತಮ್ಮ ದೇಹದಲ್ಲಿನ ಕ್ಯಾನ್ಸರ್ ಕೋಶಗಳು ಇಳಿಮುಖವಾಗಿವೆ ಎಂದು ಹೇಳಿಕೊಂಡಿದ್ದಾರೆ 

ಆದರೆ ಈ ಚಿಕಿತ್ಸೆ ಪಡೆದು ಗುಣಮುಖರಾಗಿರುವ ರೋಗಿಗಳು ಜೀವನ ಪರ್ಯಂತ ಕ್ಯಾನ್ಸರ್ ಗೆದ್ದಿದ್ದಾರೆ ಎಂದು ಈಗಲೇ ಹೇಳಲಾಗದು. ಆದರೆ ಸದ್ಯಕ್ಕೆ ನಡೆಸಿದ ಎಲ್ಲ ಪರೀಕ್ಷೆಗಳಲ್ಲೂ ರೋಗಿಗಳ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಪತ್ತೆಯಾಗಿಲ್ಲ. ಇದರ ಯಶಸ್ಸಿನ ಪ್ರಮಾಣವನ್ನು ತಿಳಿಯಲು ಎರಡು ವರ್ಷಗಳು ಬೇಕಾಗುತ್ತವೆ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ರೋಗನಿರೋಧಕ ವ್ಯವಸ್ಥೆಯಲ್ಲಿರುವ ಜೀವ ಕೋಶಗಳಲ್ಲಿ ಸೃಷ್ಟಿಯಾಗುವ ಕ್ಯಾನ್ಸರ್ ಅರ್ಥಾತ್ ಬಿ-ಸೆಲ್ ಕ್ಯಾನ್ಸರ್‌ಗಳಿಗೆ ಈ ಸ್ವದೇಶಿ ಚಿಕಿತ್ಸೆ ಉಪಯೋಗವಾಗುತ್ತದೆ. ಕಾರ್-ಟಿ ಸೆಲ್ ಥೆರಪಿಯ ವಾಣಿಜ್ಯ ಬಳಕೆಗೆ 2023 ಅಕ್ಟೋಬರ್ ನಲ್ಲಷ್ಟೇ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ. ಈಗಾಗಲೇ 10 ನಗರಗಳ 30 ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ.

ಚಿಕಿತ್ಸೆ ಪ್ರಕ್ರಿಯೆ ಹೇಗೆ?

ಕ್ಯಾನ್ಸ‌ರ್ ರೋಗಿಯ ಬಿಳಿ ರಕ್ತಕಣಗಳನ್ನು ಯಂತ್ರದಿಂದ ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ. ಕ್ಯಾನ್ಸ‌ರ್ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಹಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಬಳಿಕ ಅದನ್ನು ರೋಗಿಗೆ ರಕ್ತನಾಳದಿಂದ ನೀಡಲಾಗುತ್ತದೆ. ಇದಕ್ಕೂ ಮುನ್ನ ರೋಗಿಯನ್ನು ಕೀಮೋಥೆರಪಿಗೆ ಒಳಪಡಿಸಲಾಗುತ್ತದೆ. ವಂಶವಾಹಿ ಮಾರ್ಪಡಿಸಲಾಗದ ರಕ್ತ ಕಣಗಳು ಕ್ಯಾನ್ಸರ್ ಕೋಶಗಳನ್ನು ಹುಡುಕಿ ನಾಶಪಡಿಸುತ್ತವೆ.

Previous Post

ಕಾರ್ಕಳ,ಹಿರಿಯಂಗಡಿ ಶ್ರೀ ಕುಕ್ಕಿನಂತಾಯಿ ದೈವಸ್ಥಾನ,ಪುನರ್ ಪ್ರತಿಷ್ಠಾ ಮಹೋತ್ಸವ ದ ಹದಿನೈದನೇ ವಾರ್ಷಿಕ ನೇಮೋತ್ಸವ..!!

Next Post

ಮಾರ್ಚ್ 9ರಂದು ರಾಜ್ಯಾದ್ಯಂತ ʻರಾಷ್ಟ್ರೀಯ ಲೋಕ್ ಅದಾಲತ್’..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಾರ್ಚ್ 9ರಂದು ರಾಜ್ಯಾದ್ಯಂತ ʻರಾಷ್ಟ್ರೀಯ ಲೋಕ್ ಅದಾಲತ್'..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026

Recent News

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved