ಕಾರ್ಕಳ : ಡಿಸೆಂಬರ್ 08:ದ್ರಶ್ಯ ನ್ಯೂಸ್ : ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಎನ ಪೋಯ ಫಿಸಿಯೋಥೆರಪಿ ಕಾಲೇಜು & ಎನ್.ಎಸ್.ಎಸ್ ಯುನಿಟ್- ವೈ ಪಿ ಸಿ ಎನಪೋಯ ಮಂಗಳೂರು ಹಾಗೂ ವಿಜೇತ ವಿಶೇಷ ಶಾಲೆ ಇದರ ಸಹಯೋಗದಲ್ಲಿ ಫಿಸಿಯೋ ಥೆರಪಿ ಹಾಗೂ ಸ್ಪೀಚ್ ಥೆರಪಿ ಸ್ಕ್ರೀನಿಂಗ್ ಕ್ಯಾಂಪ್ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಎನಪೋಯ ಫಿಸಿಯೋಥೆರಪಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ.ಆಸೀರ್ ಜಾನ್ ಸ್ಯಾಮುವೆಲ್ , ವಿಜೇತ ವಿಶೇಷ ವಿಶೇಷ ಶಾಲಾ ಫಿಸಿಯೋಥೆರಪಿಸ್ಟ್ ಡಾ.ವೆನ್ಸಿಟಾ ಪ್ರಿಯಾಂಕ ಆರಾನ್ಹಾ, ಸ್ಪೀಚ್ ಥೆರಪಿಸ್ಟ್ ಝೆಬ, ಸ್ಪೀಚ್ ಥೆರಪಿಸ್ಟ್ ಮಿನುಷ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್,ಉಪಸ್ಥಿತರಿದ್ದರು.
ವಿಜೇತ ವಿಶೇಷ ಶಾಲಾ ಮಾನಸಿಕ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳನ್ನು ಸ್ಕ್ರೀನಿಂಗ್ ಮಾಡಿದ್ದು ವಾರದಲ್ಲಿ ಒಂದು ದಿನ ವಿಜೇತ ಶಾಲೆಗೆ ವೈ ಪಿ ಸಿ ಕಾಲೇಜಿನ ಥೆರಪಿಸ್ಟ್ ರವರು ಆಗಮಿಸಿ ಮಕ್ಕಳಿಗೆ ದೈಹಿಕ ಹಾಗೂ ಸ್ಪೀಚ್ ಥೆರಪಿ ಯ ಸೇವೆ ಯನ್ನು ನೀಡುತ್ತಾರೆ.