Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

‘ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದ ಆಸರೆ`

Dhrishya News by Dhrishya News
03/11/2026
in ಸುದ್ದಿಗಳು
0
‘ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದ ಆಸರೆ`
0
SHARES
5
VIEWS
Share on FacebookShare on Twitter

ಉಡುಪಿ, ನ. 1: ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮೂಲದ ವೃದ್ಧೆಯೊಬ್ಬರಿಗೆ ಕಾರ್ಕಳದ ಹೊಸಬೆಳಕು ಆಶ್ರಮವು ಪುನರ್ವಸತಿ ಕಲ್ಪಿಸಿದೆ.

ವೃದ್ಧೆ ಗುಣಮುಖರಾದ ಹಿನ್ನೆಲೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಅಂಬುಲೆನ್ಸ್ ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಈ ಕಾರ್ಯಕ್ಕೆ ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಸಹಕರಿಸಿದ್ದಾರೆ.

ಅಪರಿಚಿತ ವೃದ್ಧೆ ತಮಿಳುನಾಡಿನ ತಿರುವಳ್ಳುವೂರು ಮೂಲದವರೆಂದು ತಿಳಿದುಬಂದಿದೆ. ವೃದ್ಧೆಯನ್ನು ಅವರ ಕುಟುಂಬದವರೊಂದಿಗೆ ಸೇರಿಸುವ ನಿಟ್ಟಿನಲ್ಲಿ ನಿತ್ಯಾನಂದ ಒಳಕಾಡು ಅವರು ತಮಿಳುನಾಡಿನ ರಾಜಕೀಯ ಮುಖಂಡರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಕಳೆದ ಸೆಪ್ಟೆಂಬರ್ 26ರಂದು ಬ್ರಹ್ಮಾವರದಲ್ಲಿ ಹೆತ್ತ ತಾಯಿಯನ್ನೇ ಮಕ್ಕಳು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಘಟನೆ ನಡೆದಿತ್ತು. ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ವೃದ್ಧೆಯೊಬ್ಬರು ದಿಕ್ಕು ತೋಚದೆ ಪರದಾಡುತ್ತಿರುವುದನ್ನು ಶಾಲಾ ಬಸ್ ಚಾಲಕರೊಬ್ಬರು ಗಮನಿಸಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿಯ ಸಿಬ್ಬಂದಿಗಳ ನೆರವಿನಿಂದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ವೃದ್ಧೆ ತನ್ನ ಹೆಸರು ಸರಸ್ವತಿ (70) ಎಂದು ಹಾಗೂ ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದರು. ತನ್ನ ಮಗ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಅಂದೇ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದರು. ಸದ್ಯ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿರುವ ವೃದ್ಧೆಯನ್ನು ಅವರ ಕುಟುಂಬದವರೊಂದಿಗೆ ಮತ್ತೆ ಸೇರಿಸುವ ಪ್ರಯತ್ನ ಮುಂದುವರಿದಿದೆ.

Previous Post

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ 7ರವರೆಗೆ ನಿಷೇಧಾಜ್ಞೆ ಜಾರಿ..!

Next Post

ಪರ್ಕಳದಲ್ಲಿ ಆಕರ್ಷಕ ವಸತಿ ಸಮುಚ್ಚಯ ‘ಭವಾನಿ ಎಮರಾಲ್ಡ್’ ಮನೆ ಖರೀದಿಗೆ ಉತ್ತಮ ಆಯ್ಕೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪರ್ಕಳದಲ್ಲಿ ಆಕರ್ಷಕ ವಸತಿ ಸಮುಚ್ಚಯ ‘ಭವಾನಿ ಎಮರಾಲ್ಡ್’ ಮನೆ ಖರೀದಿಗೆ ಉತ್ತಮ ಆಯ್ಕೆ

ಪರ್ಕಳದಲ್ಲಿ ಆಕರ್ಷಕ ವಸತಿ ಸಮುಚ್ಚಯ ‘ಭವಾನಿ ಎಮರಾಲ್ಡ್’ ಮನೆ ಖರೀದಿಗೆ ಉತ್ತಮ ಆಯ್ಕೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪರ್ಕಳದಲ್ಲಿ ಆಕರ್ಷಕ ವಸತಿ ಸಮುಚ್ಚಯ ‘ಭವಾನಿ ಎಮರಾಲ್ಡ್’ ಮನೆ ಖರೀದಿಗೆ ಉತ್ತಮ ಆಯ್ಕೆ

ಪರ್ಕಳದಲ್ಲಿ ಆಕರ್ಷಕ ವಸತಿ ಸಮುಚ್ಚಯ ‘ಭವಾನಿ ಎಮರಾಲ್ಡ್’ ಮನೆ ಖರೀದಿಗೆ ಉತ್ತಮ ಆಯ್ಕೆ

03/11/2026
‘ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದ ಆಸರೆ`

‘ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದ ಆಸರೆ`

03/11/2026
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ 7ರವರೆಗೆ ನಿಷೇಧಾಜ್ಞೆ ಜಾರಿ..!

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ 7ರವರೆಗೆ ನಿಷೇಧಾಜ್ಞೆ ಜಾರಿ..!

03/11/2026
ಮಣಿಪಾಲ: ತೆಂಗಿನಕಾಯಿ ಕೊಯ್ಯುವಾಗ ಟೆರೇಸ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು..!

ಮಣಿಪಾಲ: ತೆಂಗಿನಕಾಯಿ ಕೊಯ್ಯುವಾಗ ಟೆರೇಸ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು..!

03/11/2026

Recent News

imunify-bot-check