ಕುಂದಾಪುರ: ಬಳ್ಕೂರು ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಎರಡು ಟಿಪ್ಪರ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಅಕ್ಟೋಬರ್ 30ರಂದು ಬೆಳಿಗ್ಗೆ ನಡೆದಿದೆ.
ಕಾವ್ರಾಡಿ ಗ್ರಾಮದ ಕೆ. ಜಾವೇದ್ ಅವರು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ 8:45ರ ಸುಮಾರಿಗೆ ಬಸ್ರೂರಿಗೆ ಪೆಟ್ರೋಲ್ ಹಾಕಿಸಲು ಮೋಟಾರು ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದಿಂದ ಸುಮಾರು 100 ಮೀಟರ್ ಹಿಂದೆ ಈ ಅಪಘಾತ ಸಂಭವಿಸಿದೆ.
ಎರಡೂ ಟಿಪ್ಪರ್‌ಗಳಲ್ಲಿ ಕೊಜೆ ಮಣ್ಣು ತುಂಬಿಸಲಾಗಿತ್ತು. ಅಪಘಾತದ ಬಳಿಕ ಟಿಪ್ಪರ್ ಚಾಲಕ ಮಣ್ಣನ್ನು ಕಂಡ್ಲೂರಿನಲ್ಲಿ ಖಾಲಿ ಮಾಡಿ, ಖಾಲಿ ಟಿಪ್ಪರ್‌ನೊಂದಿಗೆ ಅಪಘಾತ ಸ್ಥಳದ ಸಮೀಪಕ್ಕೆ ಮರಳಿದ್ದಾನೆ.
ವಿಚಾರಣೆ ವೇಳೆ ಪೇತ್ರಿಯ ಕ್ವಾರೆಯಿಂದ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಅದಕ್ಕೆ ಅಗತ್ಯ ಪರವಾನಿಗೆ ಇರಲಿಲ್ಲ ಎಂಬುದು ತಿಳಿದುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳಿಗೆ ನೆರವು ಒದಗಿಸದೆ ಟಿಪ್ಪರ್‌ನಲ್ಲಿದ್ದ ಮಣ್ಣನ್ನು ಖಾಲಿ ಮಾಡಿ ಸಾಕ್ಷ್ಯ ನಾಶಪಡಿಸಿರುವ ಆರೋಪವೂ ದಾಖಲಾಗಿದೆ.
ಟಿಪ್ಪರ್ ಮಾಲೀಕರು ಹಾಗೂ ಮಣ್ಣಿನ ಮಾಲೀಕರು ಸೇರಿ ಸರಕಾರಕ್ಕೆ ರಾಜಧನ ಪಾವತಿಸದೆ ಮತ್ತು ಗಣಿ ಇಲಾಖೆಯ ಅನುಮತಿ ಪಡೆಯದೆ ಕೊಜೆ ಮಣ್ಣು ಸಾಗಾಟ ಮಾಡಿರುವ ಆರೋಪ ಮಾಡಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







