ಕುಂದಾಪುರ, ಸೆ. 26: ಕುಂದಾಪುರದ ಎಂ ಕೋಡಿ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ಬೂತಾಯಿ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿದ್ದು, ಮೀನುಗಳನ್ನು ಸಂಗ್ರಹಿಸಲು ನೂರಾರು ಮಂದಿ ಕಡಲತೀರಕ್ಕೆ ಆಗಮಿಸಿದರು.
ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಬಂದ ಬೂತಾಯಿ ಮೀನುಗಳನ್ನು ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸೇರಿದಂತೆ ಹಲವರು ಧಾವಿಸಿದರು. ಕೈಚೀಲ, ಬಕೆಟ್ ಸೇರಿದಂತೆ ವಿವಿಧ ಪಾತ್ರೆಗಳನ್ನು ಬಳಸಿಕೊಂಡು ಜನರು ಮೀನುಗಳನ್ನು ಸಂಗ್ರಹಿಸುತ್ತಿರುವ ದೃಶ್ಯ ಕಂಡುಬಂತು.
ಕಡಲತೀರದಲ್ಲಿ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ದಡಕ್ಕೆ ಬಂದಿರುವುದು ಸ್ಥಳೀಯರ ಗಮನ ಸೆಳೆಯಿತು.






